Advertisement

ಪಲ್ಸರ್‌ 150 ಈಗ ಇನ್ನಷ್ಟು ಸೂಪರ್‌

11:52 AM Apr 23, 2018 | |

ಭಾರತೀಯ ಆಟೊಮೊಬೈಲ್‌ ಮಾರುಕಟ್ಟೆಯಲ್ಲಿ ಸದ್ದು ಮಾಡಿರುವ ದ್ವಿಚಕ್ರ ವಾಹನಗಳು ಒಂದೆರಡಲ್ಲ. ಎಲ್ಲವೂ ಕನಿಷ್ಠ ಒಂದು ದಶಕಗಳಷ್ಟು ಕಾಲ ಹವಾ ಉಳಿಸಿಕೊಂಡು ಮಾರುಕಟ್ಟೆ ಸೃಷ್ಟಿಸಿಕೊಂಡಿವೆ. ಇಂಥ ದ್ವಿಚಕ್ರ ವಾಹನಗಳ ಸಾಲಿನಲ್ಲಿ ಬಜಾಜ್‌ ಕಂಪನಿಯ ಬೈಕ್‌, ಸ್ಕೂಟರ್‌ಗಳು ಸಾಕಷ್ಟಿವೆ. ಅವುಗಳಲ್ಲಿ ಪಲ್ಸರ್‌ ಅಗ್ರ ಪಂಕ್ತಿಯಲ್ಲಿ ನಿಲ್ಲುವ ಬೈಕ್‌ಗಳಲ್ಲಿ ಒಂದು.

Advertisement

ಹೌದು, ಬರೋಬ್ಬರಿ ಎರಡು ದಶಕಗಳಿಂದ ಭಾರತೀಯ ರಸ್ತೆಯಲ್ಲಿ ರಾಜನಂತೆ ಓಡಾಡುವ ಪಲ್ಸರ್‌ ಕೆಲ ತಿಂಗಳ ಹಿಂದೆ ಪ್ರಮುಖ ಬದಲಾವಣೆಯೊಂದಿಗೆ ಹೊಸ ಮಾಡೆಲ್‌ ಅನಾವರಣಗೊಳಿಸಿತ್ತು. ಅದೇ ಪಲ್ಸರ್‌ 150 ಬೈಕ್‌ನ ಮತ್ತೂಂದು ವೇರಿಯಂಟ್‌ ಅನ್ನು ಕಂಪನಿ ಪರಿಚಯಿಸಿದೆ.

ಈ ಹೊಸ ವೇರಿಯಂಟ್‌ನಲ್ಲಿ ಟ್ವಿನ್‌ ಡಿಸ್ಕ್ ಬ್ರೇಕ್‌ ಅಳವಡಿಸಿದ್ದು ವಿಶೇಷ. ಇಲ್ಲಿಯವರೆಗಿನ ಮಾಡೆಲ್‌ಗ‌ಳಲ್ಲಿ ಸಿಂಗಲ್‌ ಡಿಸ್ಕ್ ಬ್ರೇಕ್‌ ಇರುತ್ತಿತ್ತು. ಜತೆ ಜೊತೆಗೆ ಹಿಂದಿನ ಪಲ್ಸರ್‌ಗೆ ಹೋಲಿಕೆ ಮಾಡಿಕೊಂಡರೆ ಹೊಸ ಪಲ್ಸರ್‌ 150 ಮಾಡೆಲ್‌ನ ವಿನ್ಯಾಸದಲ್ಲಿಯೂ ಒಂದಿಷ್ಟು ಬದಲಾವಣೆಗಳನ್ನು ನೋಡಬಹುದಾಗಿದೆ. ಹಳೆಯ ಪಲ್ಸರ್‌ಗಿಂಥ ಹೊಸ ಪಲ್ಸರ್‌ನ ವೀಲ್‌ ಬೇಸ್‌ ಇನ್ನಷ್ಟು ಉದ್ದವಾಗಿದೆ. 

ಎಂಜಿನ್‌ ಸಾಮರ್ಥ್ಯ ಅಚ್ಚುಮೆಚ್ಚು: ಪಲ್ಸರ್‌ನ ಮುನ್ನುಗ್ಗುವ ಗುಣ ಕಳೆದ ಎರಡು ದಶಕಗಳಿಂದ ಯುವಕರನ್ನು ಸೆಳೆಯುವಂತೆ ಮಾಡಿತ್ತು. ಹೊಸ ವೇರಿಯಂಟ್‌ ಕೂಡ ಇದರಿಂದ ಹೊರತಾಗಿಲ್ಲ. ಅದೇ ಸಾಮರ್ಥಯವನ್ನು ಉಳಿಸಿಕೊಂಡಿದೆ. ಈ ಬೈಕ್‌ನಲ್ಲಿನ ನ್ಪೋರ್ಟಿವ್‌ನೆಸ್‌ ಹೆಚ್ಚು ಯುವಕರು ಹಾಗೂ ಬೈಕ್‌ ಸವಾರಿಯ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವವರನ್ನು ಸೆಳೆಯುವಂತೆ ಮಾಡಿದೆ.

ಸಿಂಗಲ್‌ ಸಿಲಿಂಡರ್‌ನ 149ಸಿಸಿ ಸಾಮರ್ಥ್ಯದ ಡಿಟಿಎಸ್‌-ಐ ಎಂಜಿನ್‌ ಹೊದಿದ್ದು, 14ಪಿಎಸ್‌ 8000 ಆರ್‌ಪಿಎಂ ಹಾಗೂ 13.4ಎನ್‌ಎಂ ಟಾರ್ಕ್‌ ಸಾಮರ್ಥ್ಯ ಇದರಲ್ಲಿದೆ. ಇವೆಲ್ಲದರ ಜತೆಗೆ 5ಸ್ಪೀಡ್‌ ಗೇರ್‌ಬಾಕ್ಸ್‌ 2018ರ ಲೇಟೆಸ್ಟ್‌ ಪಲ್ಸರ್‌ನಲ್ಲಿರುವ ಮಗದೊಂದು ವಿಶೇಷವಾಗಿದೆ.

Advertisement

ನಾಯ್ಸ ವೈಬ್ರೇಷನ್‌ಗೆ ಬ್ರೇಕ್‌: ಪಲ್ಸರ್‌ನಲ್ಲಿ ಎಂಜಿನ್‌ ಶಬ್ದದಿಂದ ವೈಬ್ರೇಷನ್‌ ಆಗದಂತೆ ಅಭಿವೃದ್ಧಿ ಪಡಿಸಿರುವುದಾಗಿ ಕಂಪನಿ ಹೇಳಿಕೊಂಡಿದೆ. ಈ ಮೊದಲ ಪಲ್ಸರ್‌ನಲ್ಲಿ ಸಣ್ಣ ಪ್ರಮಾಣದ ವೈಬ್ರೇಷನ್‌ ಇತ್ತು. 

ಸುರಕ್ಷತೆಗೆ ಒತ್ತು: ಯಾವುದೇ ಕಂಡಿಷನ್‌ನ ರಸ್ತೆಯಲ್ಲಿ ಏಕ್‌ದಮ್‌ ಮುನ್ನುಗ್ಗುವ ಸಾಮರ್ಥ್ಯ ಹೊಂದಿರುವ ಪಲ್ಸರ್‌ನ ಹೊಸ ಮಾಡೆಲ್‌ನಲ್ಲಿ ಸುರಕ್ಷತೆಗೆ ಇನ್ನಷ್ಟು ಒತ್ತು ನೀಡಲಾಗಿದ್ದು, ಅದೇ ಕಾರಣಕ್ಕಾಗಿಯೇ ಸಿಂಗಲ್‌ ಡಿಸ್ಕ್ ಬದಲಾಗಿ ಟ್ವಿನ್‌ ಅರ್ಥಾತ್‌ ಜೋಡಿ ಡಿಸ್ಕ್ ಬ್ರೇಕ್‌ ಅಳವಡಿಸಲಾಗಿದೆ.

ವೇಗದ ಮಿತಿಯನ್ನು ಸೆಕೆಂಡ್‌ಗಳ ಲೆಕ್ಕಾಚಾರದಲ್ಲಿ ಕಂಟ್ರೋಲ್‌ ಮಾಡಲು ಹೆಚ್ಚು ಅನುಕೂಲಕರವಾಗಿದೆ. ಹಾಗಂಥ ರೈಡ್‌ ಮಾಡುವಾಗ ಮೈಮರೆತು ಬ್ರೇಕ್‌ ಒತ್ತಿದರೆ ಸ್ಕಿಡ್‌ ಆಗುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ. ಈ ಬಗೆಗಿನ ಜಾಗ್ರತೆ ಇಟ್ಟುಕೊಳ್ಳಲೇಬೇಕು.

-ಎಕ್ಸ್‌ ಶೋ ರೂಂ ದರ: 78,000 ರೂ.
-ಪ್ರತಿ ಲೀಟರ್‌ ಪೆಟ್ರೋಲ್‌ಗೆ ಮೈಲೇಜ್‌: 65ಕಿ.ಮೀ

ಮೈಮಾಟ
– ಗರಿಷ್ಠ ವೇಗದ ಮಿತಿ 110 ಕಿ.ಮೀ
– 5ಕಿ.ಮೀ ಸ್ಟ್ರೋಕ್‌ ಬೈಕ್‌
– ಡಿಜಿಟಲ್‌ ಟ್ವಿನ್‌ ಸ್ಪಾರ್ಕ್‌ ಇಗ್ನಿಷನ್‌
– ಏರ್‌ ಕೂಲ್ಡ್‌ ಸಿಸ್ಟಮ್‌ ಇಂಜಿನ್‌
– ಅಪಾಚೆ, ಹೋಂಡಾ ಸಿಬಿ ಯುನಿಕಾರ್ನ್, ಸಿಬಿ ಹಾರ್ನ್ನೆಟ್‌ ಬೈಕ್‌ಗಳಿಗೆ ಪ್ರತಿಸ್ಪರ್ಧಿ

* ಗಣಪತಿ ಅಗ್ನಿಹೋತ್ರಿ

Advertisement

Udayavani is now on Telegram. Click here to join our channel and stay updated with the latest news.

Next