ಬೆಂಗಳೂರು: ಶನಿವಾರ ನಡೆದ ದ್ವಿತೀಯ ಪಿಯುಸಿ ಪರೀಕ್ಷೆ ಯಾವುದೇ ಗೊಂದಲವಿಲ್ಲದೆ ಶಾಂತರೀತಿಯಲ್ಲಿ ನಡೆದಿದೆ. ಶುಕ್ರವಾರ ರಾತ್ರಿ ಗಣಕ ವಿಜ್ಞಾನ ಪ್ರಶ್ನೆ ಪತ್ರಿಕೆಯ ಮಾದರಿಯನ್ನು ವಾಟ್ಸ್‌ಆ್ಯಪ್‌ನಲ್ಲಿ ಹರಿಬಿಟ್ಟ ವಿದ್ಯಾರ್ಥಿಯ ವಿರುದ್ಧ ಪರೀಕ್ಷೆಗೂ ಮೊದಲೇ ಸೂಕ್ತ ಕ್ರಮ ತೆಗೆದುಕೊಳ್ಳಲಾಗಿದೆ.
ಮನಃಶಾಸ್ತ್ರ ಪರೀಕ್ಷೆಯನ್ನು 1,785, ಎಲೆಕ್ಟ್ರಾನಿಕ್ಸ್ ಪರೀಕ್ಷೆಯನ್ನು 4,387 ಹಾಗೂ ಗಣಕ ವಿಜ್ಞಾನ ಪರೀಕ್ಷೆಯನ್ನು 83,909 ವಿದ್ಯಾರ್ಥಿಗಳು ಬರೆದಿದ್ದಾರೆ. ವಾಟ್ಸ್‌ಆ್ಯಪ್‌ನಲ್ಲಿ ಪ್ರಶ್ನೆ ಪತ್ರಿಕೆ ಮಾದರಿ ಹರಿಬಿಟ್ಟಿ ವಿದ್ಯಾರ್ಥಿಯ ಬಂಧನ ಹೊರತುಪಡಿಸಿ ಬೇರ್ಯಾವುದೇ ಜಿಲ್ಲೆಯಲ್ಲಿ ಡಿಬಾರ್ ಸಹಿತವಾಗಿ ಯಾವುದೇ ಪರೀಕ್ಷಾ ಅಕ್ರಮ ದಾಖಲಾಗಿಲ್ಲ ಎಂದು ಪಿಯು ಇಲಾಖೆ ತಿಳಿಸಿದೆ.
ಸಂಬಂಧಪಟ್ಟ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದ್ದಾರೆ. ಆ ವಿದ್ಯಾರ್ಥಿ ಕಂಪ್ಯೂಟರ್ ಸೈನ್ಸ್ ವಿಷಯವನ್ನು ಸರಿಯಾಗಿ ಓದಿಲ್ಲವೆಂದು ಪರೀಕ್ಷೆಗಳನ್ನು ಮುಂದೂಡಿಸಲು ಈ ಕಾರ್ಯ ಮಾಡಿರುವುದಾಗಿ ತಿಳಿಸಿದ್ದಾನೆ. ಆ ಹುಡುಗನ ಮೇಲೆ ಕಾನೂನು ಅನ್ವಯ ಅಗತ್ಯ ಕ್ರಮ ಜರುಗಿಸ ಲಾಗುತ್ತಿದೆ. ಪರೀಕ್ಷೆಗಳಿಂದ ಅವನನ್ನು ಹೊರಹಾಕಲಾಗಿದೆ. ಒಂದೊಮ್ಮೆ ಈ ವಿದ್ಯಾರ್ಥಿಯ ವಾಟ್ಸ್‌ಆ್ಯಪ್ ಸಂದೇಶ ವೈರಲ್ ಆಗಿದ್ದರೆ ಜರುಗಬಹುದಾದ ಅನಾಹುತ ಊಹಿಸಲೂ ಸಾಧ್ಯವಿಲ್ಲ. ಅಧಿಕಾರಿಗಳು ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಂಡಿದ್ದಾರೆ.
-ಎಸ್.ಸುರೇಶ್ ಕುಮಾರ್, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ