Advertisement

ಸಾರ್ವಜನಿಕರಿಗೆ ಕಾನೂನು ಅರಿವು ಅವಶ್ಯ

09:59 PM Nov 15, 2019 | Lakshmi GovindaRaju |

ಕೊಳ್ಳೇಗಾಲ: ಸರ್ವೋಚ್ಚ ನ್ಯಾಯಾಲಯವು ಸಾರ್ವಜನಿಕರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಕಾನೂನು ಅರಿವು ನೆರವು ನೀಡುತ್ತಿದೆ. ಇದರ ಬಳಕೆಯನ್ನು ಮಾಡಿಕೊಳ್ಳಬೇಕು ಎಂದು ಹಿರಿಯ ಶ್ರೇಣಿ ಸಿವಿಲ್‌ ನ್ಯಾಯಾಲಯದ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ಎಸ್‌.ಜೆ.ಕೃಷ್ಣ ಹೇಳಿದರು.

Advertisement

ಪಟ್ಟಣದ ಸರ್ಕಾರಿ ಎಸ್‌ವಿಕೆ ಜೂನಿಯರ್‌ ಕಾಲೇಜು ಸಭಾಂಗಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಅಭಿಯೋಜನಾ ಇಲಾಖೆ, ಎಸ್‌ವಿಕೆ ಪದವಿ ಪೂರ್ವ ಕಾಲೇಜು ಕಾನೂನು ಸಾಕ್ಷರತಾ ಕೂಟದ ಸಹಯೋಗದೊಂದಿಗೆ ಏರ್ಪಡಿಸಿದ್ದ ಮಕ್ಕಳ ದಿನಾಚರಣೆ ಮತ್ತು ರಾಷ್ಟ್ರೀಯ ಕಾನೂನು ಸೇವೆಗಳ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಆದಾಲತ್‌ನಲ್ಲಿ ಪ್ರಕರಣ ಇತ್ಯರ್ಥ: ನ್ಯಾಯಾಲಯದಲ್ಲಿ ಇರುವ ಸಾರ್ವಜನಿಕರ ದೂರುಗಳನ್ನು ರಾಷ್ಟ್ರೀಯ ಆದಾಲತ್‌ ಮೂಲಕ ಇತ್ಯರ್ಥ ಪಡಿಸಲಾಗುವುದು. ಕೆಲವು ಪ್ರಕರಣಗಳನ್ನು ರಾಜಿಸೂತ್ರಗಳ ಮೂಲಕ ಬಗೆಹರಿಸಲಾಗುವುದು. ಅದೇ ರೀತಿ ಜಿಲ್ಲಾ ಪ್ರಧಾನ ನ್ಯಾಯಾಲಯದಲ್ಲಿ ರಾಜ್ಯ ಪ್ರಧಾನ ನ್ಯಾಯಾಲಯ, ಸರ್ವೋಚ್ಚ ನ್ಯಾಯಾಲಯಗಳಲ್ಲಿ ಇಂತಹ ಸಮಿತಿಗಳು ಇದ್ದು, ಸಾರ್ವಜನಿಕರಿಗೆ ಕಾನೂನು ಅರಿವು, ನೆರವು ನೀಡಲಿದೆ ಎಂದು ಹೇಳಿದರು.

ತಾಲೂಕು ಕಾನೂನು ಸೇವೆಗಳ ಸಮಿತಿ ವತಿಯಿಂದ ಶಾಲಾ ಮಕ್ಕಳಿಗೆ ಹೆಚ್ಚು ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ. ವಿವಿಧ ಬಗೆಯ ಸ್ಪರ್ಧೆಗಳ ಆಯೋಜನೆಗಳ ಮೂಲಕ ಮಕ್ಕಳಿಗೆ ಕಾನೂನು ಅರಿವು ನೆರವಿನ ಬಗ್ಗೆ ತಿಳಿವಳಿಕೆ ನೀಡಿ, ಬಹುಮಾನ ನೀಡುವ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ ಎಂದರು.

ಪ್ರತಿದಿನ ಕಾನೂನು ಬಳಕೆ: ವಕೀಲರ ಸಂಘದ ಅಧ್ಯಕ್ಷ ಪಿ.ಮಹಾದೇವ ಮಾತನಾಡಿ, ಕಾನೂನನ್ನು ಪ್ರತಿದಿನ ಬಳಕೆ ಮಾಡಿಕೊಳ್ಳಬೇಕು. ಕಾನೂನು ತಿಳಿವಳಿಕೆ ಇಲ್ಲದವರಿಗೆ ಉಚಿತ ತಿಳಿವಳಿಕೆ ನೀಡಲಾಗುತ್ತಿದೆ. ಇದರ ಪ್ರಯೋಜವನ್ನು ಪ್ರತಿಯೊಬ್ಬ ಗ್ರಾಮೀಣ ಪ್ರದೇಶದ ಜನರು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

Advertisement

ಒಂದೇ ದಿನ ಕಾನೂನು ಅರಿವು ಅಸಾಧ್ಯ: ಕಾನೂನು ತಿಳಿದುಕೊಳ್ಳಲು ಅಪಾರ ವಿಷಯಗಳು ಇದೆ. ಕಾನೂನುಗಳ ಬಗ್ಗೆ ಒಂದೇ ದಿನದಲ್ಲಿ ಎಲ್ಲಾವನ್ನು ಅರಿಯಲು ಸಾಧ್ಯವಿಲ್ಲ. ಇದನ್ನು ಪ್ರತಿನಿತ್ಯ ಅರಿತುಕೊಳ್ಳುವ ಪ್ರಯತ್ನವನ್ನು ವಿದ್ಯಾರ್ಥಿಗಳು ಮಾಡಿದಾಗ ಮಾತ್ರ ರಾಷ್ಟ್ರೀಯ ಕಾನೂನು ಸೇವೆಗಳ ದಿನ ಸಾರ್ಥಕವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬಹುಮಾನ ವಿತರಣೆ: ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಬಾಲ್ಯ ವಿವಾಹ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ಆಯ್ಕೆಯಾದ ವಿಜಯ ಕುಮಾರಿಗೆ ಪ್ರಥಮ, ಸೋನ.ಬಿ ದ್ವಿತೀಯ, ಐಶ್ವರ್ಯಗೆ ತೃತೀಯ ಬಹುಮಾನ ನೀಡಲಾಯಿತು.

ಮ್ಯೂಸಿಕಲ್‌ ಛೇರ್‌: ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಮ್ಯೂಸಿಕಲ್‌ ಛೇರ್‌ ಪಂದ್ಯದಲ್ಲಿ ಭಾಗವಹಿಸಿದ್ದ ಕೀರ್ತನ ಪ್ರಥಮ ಸ್ಥಾನ, ಬಾಮಿನಿ ದ್ವೀತಿಯ, ಜ್ಯೋತಿ ತೃತೀಯ ಬಹುಮಾನ ನೀಡಲಾಯಿತು.

ಸನ್ಮಾನ: ಕಾನೂನು ಸೇವಾ ಸಮಿತಿಯಲ್ಲಿ ಉತ್ತಮ ಸೇವೆ ಸಲ್ಲಿಸಿದ ನ್ಯಾಯಾಲಯದ ಸಿಬ್ಬಂದಿ ಸುಂದರ್‌, ಸಮಿತ್ರ ಅವರನ್ನು ಸನ್ಮಾನಿಸಲಾಯಿತು. ನ್ಯಾಯಾಧೀಶರಾದ ಟಿ.ಶ್ರೀಕಾಂತ್‌, ಸಂತೋಷ್‌ ಕೊಠಾರಿ, ಕಾಲೇಜಿನ ಪ್ರಾಂಶುಪಾಲೆ ಉಷಾದೇವಿ, ಉಪ ಪ್ರಾಂಶುಪಾಲ ಮಹದೇವ, ಅಭಿಯೋಜಕ ಎಂ.ನಾಗೇಶ, ವಕೀಲರಾದ ನಿರ್ಮಲ ಮಧುಸೂಧನ್‌, ವಕೀಲರ ಸಂಘದ ಕಾರ್ಯದರ್ಶಿ ಕೆಂಪಯ್ಯ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next