Advertisement
ಇ-ಲೈಬ್ರರಿಯ ಮೂಲಕ ಸಾವಿರಾರು ಪಠ್ಯ ವಿಷಯ, ಲ್ಯಾಬ್‌ಗಳ ಆಡಿಯೋ ವಿಡಿಯೋ, ಜರ್ನಲ್ ಮೊದಲಾದ ಸೌಲಭ್ಯ ಸಿಗುತ್ತಿವೆ. ಹೆಚ್ಚಿನ ವಿದ್ಯಾರ್ಥಿಗಳು ಈ ಸರಕಾರಿ ಇ-ಲೈಬ್ರರಿ ಆ್ಯಪ್ ಮತ್ತು ವೆಬ್‌ಸೈಟ್ ಮೂಲಕ ಮಾಹಿತಿ ಪಡೆಯುತ್ತಿದ್ದಾರೆ.
www.karnatakadigitalpubliclibrary.org ಮೂಲಕ ಡಿಪಾರ್ಟ್‌ಮೆಂಟ್ ಆಫ್ ಪಬ್ಲಿಕ್ ಲೈಬ್ರರಿ ಪೇಜ್‌ಗೆ ಹೋಗಬೇಕು. ಅಲ್ಲಿ ಲಾಗಿನ್ ಅಥವಾ ರಿಜಿಸ್ಟರ್ ಬಟನ್ ಕ್ಲಿಕ್ ಮಾಡಬೇಕು. ಕ್ರಿಯೇಟ್ ನ್ಯೂ ಆಯ್ಕೆ ಮಾಡಿ, ಹೆಸರು ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ ಮತ್ತು ರಾಜ್ಯದ ವಿವಿಧ ವ್ಯಾಪ್ತಿಯ ಗ್ರಂಥಾಲಯಗಳಲ್ಲಿ ನಮ್ಮ ಜಿಲ್ಲೆಯ ಗ್ರಂಥಾಲಯವನ್ನು ಆಯ್ಕೆ ಮಾಡಿ ಲಾಗಿನ್ ಆಗಬೇಕು. ಅನಂತರ ನಾವು ನೀಡಿದ ನಂಬರ್‌ಗೆ ಒಟಿಪಿ ಬಂದು ಬಳಿಕ ಪಾಸ್‌ವರ್ಡ್ ಹಾಕಿದಾಗ ಲಾಗಿನ್ ಆಗುತ್ತದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲೂ ಇ-ಸಾರ್ವಜನಿಕ ಗ್ರಂಥಾಲಯ ಲಭ್ಯವಿದ್ದು ಅದನ್ನು ನೇರವಾಗಿ ಡೌನ್‌ಲೋಡ್ ಮಾಡಬಹುದಾಗಿದೆ.
Related Articles
35,500 ಇ-ಪುಸ್ತಕ, 4,800 ವಿಡಿಯೋ ಮಾದರಿಯ ಲ್ಯಾಬ್, ಇತರ ಪಠ್ಯ ವಿಷಯ, 59,980 ಜರ್ನಲ್, 1,112 ಕಿಡ್ ಜೋನ್‌ಗಳ ಮಾಹಿತಿಗಳ ಭಂಡಾರ ಲಭ್ಯವಿದೆ.
Advertisement
ಆರ್ಟ್ ಆ್ಯಂಡ್ ಹ್ಯುಮಾನಿಟಿ ಸಂಬಂಧಿಸಿದಂತೆ ಸಮಾಜಶಾಸ್ತ್ರ, ಇತಿಹಾಸ, ಮನಃಶಾಸ್ತ್ರ, ರಾಜ್ಯಶಾಸ್ತ್ರ, ಲೀಗಲ್ ಸ್ಟಡೀಸ್, ಪತ್ರಿಕೋದ್ಯಮ ವಿಷಯಗಳು, ಕ್ಲಾಸಿಕ್ ಆ್ಯಂಡ್ ಲಿಟರೇಚರ್‌ನಲ್ಲಿ ಪ್ರಬಂಧ, ಕಾದಂಬರಿ, ಸಾಹಿತ್ಯ ಕೃತಿ, ವಿಮರ್ಶೆ, ವ್ಯಾಕರಣಗಳು ಲಭ್ಯವಿವೆ.
ಕಾಮರ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್‌ನಲ್ಲಿ ಬ್ಯಾಂಕಿಂಗ್, ಮಾರ್ಕೆಟ್ -ಮ್ಯಾನೇಜ್‌ಮೆಂಟ್, ಇನ್ಶೂರೆನ್ಸ್, ಇಕಾನಮಿ, ಫಿನಾನ್ಶಿಯಲ್, ಅಕೌಂಟ್ ಮೊದಲಾದ ವಿಷಯ. ಸೈನ್ಸ್ ಆ್ಯಂಡ್ ಟೆಕ್ನಾಲಜಿಯಲ್ಲಿ ಕೆಮಿಸ್ಟ್ರಿ, ಫಿಸಿಕ್ಸ್, ಮ್ಯಾಥಮ್ಯಾಟಿಕ್ಸ್, ಮೆಡಿಸಿನ್, ಹೆಲ್ತ್ ಸೈನ್ಸ್, ಕಂಪ್ಯೂಟರ್ ಸೈನ್ಸ್, ಐಟಿ ವಿಷಯ ಲಭ್ಯ.
ಉಳಿದಂತೆ ಸಿಮ್ಯುಲೇಶನ್ ಲ್ಯಾಬ್, ಮ್ನಾಗಜಿನ್, ನ್ಯೂಸ್ ಪೇಪರ್‌ಗಳು ಹೀಗೆ ಸಾವಿರಕ್ಕೂ ಹೆಚ್ಚಿನ ಪುಸ್ತಕಗಳು, ವಿಡಿಯೋ ರೀತಿಯ ಮಾಹಿತಿಗಳು ಲಭ್ಯವಿವೆ. ಜತೆಗೆ ಸಿಇಟಿ, ನೆಟ್, ಯುಪಿಎಸ್‌ಸಿ, ಕೆಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆಯ ವಿವಿಧ ಪುಸ್ತಕಗಳು, ಹಳೆಯ ಪ್ರಶ್ನೆಪತ್ರಿಕೆಗಳು ಲಭ್ಯವಿವೆ.ಇಂಗ್ಲಿಷ್ ಹಿಂದಿ, ಕನ್ನಡ, ಮರಾಠಿ, ಸಂಸ್ಕೃತ, ತಮಿಳು, ತೆಲುಗು ಉರ್ದು ಹಿಂದಿ ಹೀಗೆ 9 ಬಗೆಯ ಭಾಷೆಗಳ ಆಯ್ಕೆ ಇದೆ.
ಉತ್ತಮ ಅವಕಾಶಈ ಲಾಕ್‌ಡೌನ್ ಸಮಯದಲ್ಲೂ ಇ-ಲೈಬ್ರರಿ ಬಳಸಿ ಬೇಕಾದ ಮಾಹಿತಿಯನ್ನು ಪಡೆಯಲು ಸಾಧ್ಯವಿದೆ. ಪರೀಕ್ಷೆಗೆ ತಯಾರಾಗುತ್ತಿರುವ ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಪುಸ್ತಕಗಳು ಲಭ್ಯವಿದ್ದು, ಪ್ರಯೋಜನ ಪಡೆದುಕೊಳ್ಳಬಹುದು. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುವವರಿಗೂ ಬೇಕಾದ ಪುಸ್ತಕಗಳು ಲಭ್ಯವಿವೆ. ಮೊಬೈಲ್ ಮೂಲಕ ಸುಲಭವಾಗಿ ಎಲ್ಲ ಮಾಹಿತಿ ಪಡೆಯಬಹುದು.
-ನಳಿನಿ ಜಿ.,
ಮುಖ್ಯ ಗ್ರಂಥಾಲಯ ಅಧಿಕಾರಿ,
ಜಿಲ್ಲಾ ಕೇಂದ್ರ ಗ್ರಂಥಾಲಯ, ಉಡುಪಿ.