Advertisement

ಅಸಂಘಟಿತ ಕಾರ್ಮಿಕರ ಪ್ರತಿಭಟನೆ

06:58 PM Jul 07, 2021 | Team Udayavani |

ಕೆಜಿಎಫ್: ಅಸಂಘಟಿತ ಕಾರ್ಮಿಕರಿಗೆ ಕೋವಿಡ್‌ ಸಂದರ್ಭದಲ್ಲಿ ಸಿಗುವಪ್ರಯೋಜನವನ್ನು ಕೂಡಲೇ ಮಂಜೂರು ಮಾಡಬೇಕೆಂದು ಒತ್ತಾಯಿಸಿ ಅಸಂಘಟಿತಕಾರ್ಮಿಕರ ಸಂಘದಿಂದ ಮಂಗಳವಾರ ತಾಲೂಕು ಕಚೇರಿಯಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿ, ತಹಶೀಲ್ದಾರ್‌ಕಚೇರಿಗೆ ಮನವಿ ಸಲ್ಲಿಸಲಾಯಿತು.

Advertisement

ಕೋವಿಡ್‌ ಸಂದರ್ಭದಲ್ಲಿ ಹಲವು ಅಸಂಘಟಿತ ಕಾರ್ಮಿಕರು ತಮ್ಮ ಬಂಧುಬಳಗವನ್ನುಕಳೆದುಕೊಂಡರು.ಕೆಲಸವಿಲ್ಲದೆ ಪರದಾಡಿದರು. ಅವರಿಗೆ ಸರ್ಕಾರದಿಂದಸಿಗಬೇಕಾದ ನ್ಯಾಯಯುತ ಸೌಲಭ್ಯಗಳು ಸಿಗಲಿಲ್ಲ. ಆದ್ದರಿಂದ ಅವರಿಗೆ ಎಲ್ಲಾಸೌಲಭ್ಯಗಳನ್ನುಕೂಡಲೇ ನೀಡಬೇಕು ಎಂದು ಆಗ್ರಹಿಸಲಾಯಿತು.

ಶಾಮಿಯಾನ, ಟೆಂಟ್‌, ಬ್ಯಾಂಡ್‌ ಸೆಟ್‌, ಫೋಟೋಗ್ರಾಫ‌ರ್‌, ಎಲೆಕ್ಟ್ರಿಕಲ್‌ ವರ್ಕ,ಅಡುಗೆ ವಲಯದಕಾರ್ಮಿಕರಿಗೆ ಸರ್ಕಾರದ ಪ್ರಯೋಜನ ಸಿಕ್ಕಿಲ್ಲ. ಅವರಿನ್ನೂ ಜಾತಕಪಕ್ಷಿಯಂತೆ ಸೌಲಭ್ಯಕ್ಕಾಗಿ ಕಾಯುತ್ತಿದ್ದಾರೆ ಎಂದು ಸಂಘದ ಅಧ್ಯಕ್ಷ ಶೇಷಬಾಬುದೂರಿದರು.

ನಂತರ ಉಪ ತಹಶೀಲ್ದಾರ್‌ ಶ್ರೀನಿವಾಸಯ್ಯ ಅವರಿಗೆ ಮನವಿಸಲ್ಲಿಸಲಾಯಿತು. ನಗರಸಭೆ ಮಾಜಿ ಸದಸ್ಯರಾದ ನಟರಾಜ್‌, ಮುರುಗೇಶ್‌,ಕರುಣಾ,ಓಂಪ್ರಕಾಶ್‌, ರಾಜ, ಆಟೋಕುಮಾರ್‌, ಸ್ಟೀಫ‌ನ್‌,ಕುಮರೇಶ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next