Advertisement
ಕರ್ನಾಟಕ ಕೃಷಿ ಬೆಲೆ ಆಯೋಗವು ಸೋಮ ವಾರ ನಾಗರಭಾವಿಯ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆ (ಐಸೆಕ್) ಸಭಾಂಗಣದಲ್ಲಿ ಆಯೋಜಿಸಿದ್ದ “ರೈತರ ಆದಾಯ ಮತ್ತು ಕಲ್ಯಾಣ ವೃದ್ಧಿ ಪ್ರಾಯೋಗಿಕ ಯೋಜನೆ’ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, “ಮಾದರಿ ಗುತ್ತಿಗೆ ಕಾಯ್ದೆ’ ರೂಪಿಸುವಂತೆ ನೀತಿ ಆಯೋಗ ನೀಡಿರುವ ಸಲಹೆಯನ್ನು ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೂ ಕಳುಹಿಸಿದೆ ಎಂದು ತಿಳಿಸಿದರು.
Related Articles
Advertisement
ಸರ್ಕಾರಗಳ ವೈಫಲ್ಯ: ಖ್ಯಾತ ಕೃಷಿ ಮತ್ತು ಆಹಾರ ನೀತಿ ವಿಮರ್ಶಕ ಡಾ.ದೇವೇಂದ್ರ ಶರ್ಮಾ ಮಾತನಾಡಿ, ರೈತರ ಆದಾಯ ಇತರೆ ಕ್ಷೇತ್ರದ ಜನರಂತೆ ಹೆಚ್ಚಳವಾಗದಿರುವುದಕ್ಕೆ ಸರ್ಕಾರಗಳೇ ಕಾರಣ. ರೈತರು ಕೃಷಿಯಲ್ಲಿ ಎಂದೂ ಸೋತಿಲ್ಲ. ಆದರೆ, ರೈತರಿಗೆ ಸೂಕ್ತ ಸಾಲ, ಸೌಲಭ್ಯ, ಬೆಂಬಲ ಬೆಲೆ, ಮಾರುಕಟ್ಟೆ, ಸಹಕಾರ ನೀಡುವಲ್ಲಿ ಸರ್ಕಾರಗಳು ಸಂಪೂರ್ಣ ನಿರ್ಲಕ್ಷ್ಯಧೋರಣೆ ಅನುಸರಿಸಿಕೊಂಡು ಬಂದಿವೆ ಎಂದರು.
ಕಳೆದ 45 ವರ್ಷಗಳಲ್ಲಿ ಸರ್ಕಾರಿ ನೌಕರರ ವೇತನ ಪರಿಷ್ಕರಣೆಯಿಂದ ಅವರ ಆದಾಯ ಶೇ. 120ರಿಂದ 150ರಷ್ಟು ಹೆಚ್ಚಳವಾಗಿದೆ. ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರ ವೇತನ 150 ರಿಂದ 170ರಷ್ಟು ಹೆಚ್ಚಿದೆ. ಐಟಿ, ಬಿಟಿಯವರ ಆದಾಯ ಶೇ.280ರಷ್ಟು ಹೆಚ್ಚಿದೆ. ಆದರೆ, ರೈತರ ಆದಾಯ ಶೇ.19ರಷ್ಟು ಮಾತ್ರ ಹೆಚ್ಚಾಗಿದೆ.
ತಿದ್ದುಪಡಿ ಅಗತ್ಯ: ಐಸೆಕ್ ಆಡಳಿತ ಮಂಡಳಿ ಅಧ್ಯಕ್ಷ ಡಾ.ಎ. ರವೀಂದ್ರ ಮಾತನಾಡಿ, ರೈತರ ಆದಾಯ ಹೆಚ್ಚಬೇಕಾದರೆ ಕೃಷಿ ಉತ್ಪಾದನೆ ಹೆಚ್ಚಬೇಕು. ಪ್ರತಿ ಬೆಳೆಗೂ ವೈಜ್ಞಾನಿಕ ಬೆಂಬಲ ಬೆಲೆ, ಮಧ್ಯವರ್ತಿ ರಹಿತ ಮಾರುಕಟ್ಟೆ ವ್ಯವಸೆ ಕಲ್ಪಿಸಬೇಕು, ಜತೆಗೆ ಕೃಷಿಯನ್ನೂ ಒಂದು ವ್ಯಾಪಾರ ಆಗಿ ಮಾರ್ಪಡಿಸಬೇಕು. ಇದಕ್ಕಾಗಿ ಭೂ ಸುಧಾರಣಾ ಕಾಯ್ದೆಗೆ ಅಗತ್ಯ ತಿದ್ದುಪಡಿ ತರಬೇಕು ಎಂದು ಪ್ರತಿಪಾದಿಸಿದರು.
ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ.ಟಿ.ಎನ್. ಪ್ರಕಾಶ್ ಕಮ್ಮರಡ್ಡಿ ಮಾತನಾಡಿ, ಆಯೋಗವು ರೈತರ ಆದಾಯ ಕಲ್ಯಾಣ ವೃದ್ಧಿಗೆ ಕಾರ್ಯಯೋಜನೆ ರೂಪಿಸಿದ್ದು, ಯೋಜನೆಗೆ ತುಮಕೂರು, ಕೋಲಾರ, ಚಿತ್ರದುರ್ಗ ಸೇರಿದಂತೆ ರಾಜ್ಯದ ಎಂಟು ಜಿಲ್ಲೆಗಳಲ್ಲಿ ತಲಾ ಒಂದೊಂದು ಗ್ರಾಮಗಳನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಆಯಾ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರಗಳು ಯೋಜನೆ ಕಾರ್ಯಗತಗೊಳಿಸುವ ಜವಾಬ್ದಾರಿ ಹೊಂದಿವೆ. ಆಯ್ಕೆ ಮಾಡಿದ ಗ್ರಾಮದ ರೈತರಿಗೆ ಸರ್ಕಾರದ ಎಲ್ಲಾ ಯೋಜನೆಗಳನ್ನೂ ಸಮರ್ಪಕವಾಗಿ ತಲು ಪಿಸಿ ವರ್ಷದಿಂದ ವರ್ಷಕ್ಕೆ ಅವರ ಆದಾಯ ದಲ್ಲಾಗುವ ಹೆಚ್ಚಳ ಗಮನಿಸಲಾಗುವುದು ಎಂದು ವಿವರಿಸಿದರು.
ಐಸೆಕ್ ನಿರ್ದೇಶಕ ಡಾ.ಎಂ.ಜಿ. ಚಂದ್ರಕಾಂತ್, ಕೃಷಿ ಬೆಲೆ ಆಯೋ ಗದ ಸದಸ್ಯ ಹನುಮನಗೌಡ ಬೆಳಗುರ್ಕಿ, ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಉಪಕುಲಪತಿ ಡಾ.ಎಂ.ಮಹದೇವಪ್ಪ ಹಾಗೂ ಕರುಬೂರು ಶಾಂತ ಕುಮಾರ್ ಸೇರಿದಂತೆ ಹಲವು ರೈತ ಮುಖಂಡರು ಪಾಲ್ಗೊಂಡಿದ್ದರು.
ಬರ ಹಿನ್ನೆಲೆಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಬಿಡುಗಡೆಯಾಗಿರುವ 450 ಕೋಟಿ ರೂ. ಬರ ಪರಿಹಾರ ಮೊತ್ತವನ್ನು ರೈತರಿಗೆ ಹಂಚಿದರೆ ಪುಡಿಗಾಸೂ ಸಿಗುವುದಿಲ್ಲ. ಹೀಗಾಗಿ, ಇನ್ನೂ ಆ ಹಣ ಹಂಚಿಕೆ ಮಾಡಿಲ್ಲ. ಕೇಂದ್ರ ಸರ್ಕಾರಕ್ಕೆ ಇನ್ನಷ್ಟು ಹಣಕ್ಕಾಗಿ ಬೇಡಿಕೆ ಇಡಲಾಗಿದ್ದು ಸೂಕ್ತ ಭರವಸೆಯೂ ಸಿಕ್ಕಿದೆ. ಹೆಚ್ಚುವರಿ ಹಣ ಬಂದ ಬಳಿಕ ರೈತರ ಖಾತೆಗಳಿಗೆ ನೇರ ಜಮೆ ಮಾಡಲಾಗುವುದು. -ಕೃಷ್ಣಬೈರೇಗೌಡ, ಕೃಷಿ ಸಚಿವ ನೀತಿ ಆಯೋಗದ ರೈತರ ಬೀಳು ಭೂಮಿ ಗುತ್ತಿಗೆ ನೀಡುವ “ಮಾಡೆಲ್ ಲೀಸ್ ಆ್ಯಕ್ಟ್’ ಪ್ರಸ್ತಾವನೆಯ ಹಿಂದೆ ರೈತರನ್ನು ಒಕ್ಕಲೆಬ್ಬಿಸಿ ಕೈಗಾರಿಕೆಗಳಿಗೆ, ಕಂಪನಿಗಳಿಗೆ ಲ್ಯಾಂಡ್ ಬ್ಯಾಂಕ್ ಸೃಷ್ಟಿಸಿ ಭೂಮಿ ವಶಪಡಿಸಿಕೊಳ್ಳುವ ಪರೋಕ್ಷ ಹುನ್ನಾರದ ಜತೆಗೆ ಕಡಿಮೆ ವೇತನಕ್ಕೆ ಕೈಗಾರಿಕೆಗಳಿಗೆ ಕಾರ್ಮಿಕರನ್ನು ಒದಗಿಸುವ ಕುತಂತ್ರ ಅಡಗಿದೆ. ಇದರ ಬದಲು ರೈತರಿಗೆ ಕೃಷಿಯಲ್ಲಿ ಕೌಶಲ್ಯ ತರಬೇತಿ, ಅಗತ್ಯ ಸಾಲ ಸೌಲಭ್ಯ, ನೀರಾವರಿ ಯೋಜನೆ, ತಾಂತ್ರಿಕ ಸಹಕಾರ, ಸಹಾಯಧನ ನೀಡುವ ಅಗತ್ಯವಿದೆ.
-ಡಾ.ದೇವೇಂದ್ರ ಶರ್ಮಾ, ಖ್ಯಾತ ಕೃಷಿ ಮತ್ತು ಆಹಾರ ನೀತಿ ವಿಮರ್ಶಕ