ವಿಜಯಪುರ: ಮೂರು ಕೋಟಿ ಉದ್ಯೋಗ ಸೃಷ್ಟಿಯಾಗುತ್ತದೆ. ಯುವಕರಿಗೆ ಉದ್ಯೋಗದ ಚಿಂತೆ ಇಲ್ಲ ಎಂದು ಪ್ರಧಾನ ಮಂತ್ರಿ ಮೋದಿ ಆಶ್ವಾಸನೆ ನೀಡಿದ್ದರು. ಆದರೆ, ಅದೆಷ್ಟೋ ಉದ್ಯೋಗಿಗಳು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖೀಲ್‌ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದರು.
ವಿಜಯಪುರಸಮೀಪದಗೊಡ್ಲುಮುದ್ದೇನಹಳ್ಳಿಯ ಜೆಡಿಎಸ್ ಯುವ ಮುಖಂಡ ಸುರೇಶ್ ಅವರ ಗೃಹ ದಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ಜನರ ಕಷ್ಟ, ನೋವುಗಳಿಗೆ ಸ್ಪಂದಿಸುವ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಬೇಕು. ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸಿದ ಸಂದರ್ಭದಲ್ಲಿ ಏನೆಲ್ಲಾ ಆಯಿತು ಎಂದು ಜನರಿಗೆ ತಿಳಿಸಿದೆ ಎಂದರು.
ಕ್ಷೇತ್ರದ ಜನರ ಋಣ ತೀರಿಸಿ: ಮಂಡ್ಯ ಕ್ಷೇತ್ರದ ಸಂಸದರಾದವರು ಜನರಿಗೆ ನೀಡುತ್ತಿರುವ ಸಹಕಾರ, ಬೆಂಬಲವಾದರೂ ಏನು? ಅದರಲ್ಲೂ ಕೊರೊನಾ ಸಂದರ್ಭದಲ್ಲಿ ಯಾರ ಕಷ್ಟಕ್ಕೆ ಆಗಿದ್ದಾರೆ ಎಂದು ಜನರೇ ಟ್ವೀಟ್ ಮಾಡಿ ತಿಳಿಸಿದ್ದಾರೆ. ಕ್ಷೇತ್ರದ ಜನರ ಋಣ ತೀರಿಸುವ ಕೆಲಸವನ್ನು ಸಂಸದೆ ಸುಮಲತಾ ಅವರು ಮಾಡಬೇಕು. ಇಂತಹ ವಿಚಾರಗಳನ್ನು ಜನರಿಗೇ ಬಿಟ್ಟಿದ್ದು, ಜನ ಮುಂದೆ ಜನಪರಕೆಲಸ ಮಾಡುವ ಪಕ್ಷಕ್ಕೆ ಮತ ನೀಡಲಿ. ಇಂದು ಜನರಿಗೆ ಜೀವನ ನಡೆಸುವುದೇ ಕಷ್ಟ ಎಂಬ ಪರಿಸ್ಥಿತಿ ಇದೆ. ಒತ್ತಡ ಇದೆ. ಜನರು ನಿರ್ಲ ಕ್ಷ್ಯಕ್ಕೆ ಒಳಗಾಗಿದ್ದಾರೆ. ಈ ಎಲ್ಲಾ ವಿಚಾರಗಳು ಜನರಿಗೆ ಮನದಟ್ಟಾಗಬೇಕು ಎಂದು ಹೇಳಿದರು.
ದೇಶದಲ್ಲಿಕಾಂಗ್ರೆಸ್ ನಿರ್ನಾಮ:ದೇಶದಲ್ಲಿಕಾಂಗ್ರೆಸ್ ಈಗಾಗಲೇ ನಿರ್ನಾಮವಾಗಿದೆ. ಬೇರೆ ಪಕ್ಷದಂತೆ ಕುರ್ಚಿಯ ಕಿತ್ತಾಟ ನಮ್ಮ ಜೆಡಿಎಸ್ ಪಕ್ಷದಲ್ಲಿ ಇಲ್ಲ. ಜನರ ಸಮಸ್ಯೆಗಳನ್ನು ಅರಿಯಲು ನಿರಂತರವಾಗಿ ಶಾಸಕರೊಂದಿಗೆ ಸಂಪರ್ಕದಲ್ಲಿ ಇರುತ್ತೇನೆ. ಯುವ ಘಟಕವೇ ಆಗಲಿ ರಾಜ್ಯ ಘಟಕವೇ ಆಗಲಿ ಜೆಡಿಎಸ್ ಪಕ್ಷ ಕುಮಾರಣ್ಣನವರ ಪರ ಕೆಲಸ ಮಾಡಿ, ಜೆಡಿಎಸ್ ಪಕ್ಷವನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತರುವ ಪ್ರಾಮಾ ಣಿಕ ಪ್ರಯತ್ನ ನಮ್ಮದಾಗಬೇಕು. ಕೊರೊನಾದಂತಹ ಸಂದರ್ಭದಲ್ಲಿ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಯಾವ ನ್ಯಾಯ? ಯುವಕರಿಗೆಕೆಲಸವಿಲ್ಲ. ಸಾಮಾನ್ಯ ಜನ ಬೀದಿಗೆ ಬಂದಿದ್ದಾರೆ. ಇದೆಲ್ಲಾ ಜನರ ಮನದಾಳದಲ್ಲಿ ಉಳಿದಿದೆ ಎಂದು ತಿಳಿಸಿದರು.
ಶಾಸಕ ನಿಸರ್ಗ ನಾರಾಯಣ ಸ್ವಾಮಿ, ತಾಲೂಕು ಅಧ್ಯಕ್ಷಮುನೇಗೌಡ, ತಾಪಂಮಾಜಿಸದಸ್ಯಮಹೇಶ್, ವಿಜಯಪುರ ಹೋಬಳಿ ಅಧ್ಯಕ್ಷ ವೀರಪ್ಪ, ಪ್ರಧಾನ ಕಾರ್ಯದರ್ಶಿ ರವೀಂದ್ರ, ಕಲ್ಯಾಣ್ ಕುಮಾರ್ ಬಾಬು ಮತ್ತು ಮುಖಂಡರು ಹಾಜರಿದ್ದರು.