Advertisement

Perfect: ಎಡ್‌ ಶಿರನ್‌ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್‌ ಆದ ಉಡುಪಿಯ ಹುಡುಗ | Video

01:15 PM Dec 26, 2024 | Team Udayavani |

ಉಡುಪಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಖ್ಯಾತ ಗಾಯಕ ಎಡ್‌ ಶಿರನ್ (Ed Sheeran) ಅವರ ಹಾಡೊಂದನ್ನು ಹಾಡಿ ಅದಕ್ಕೆ ಕೊಳಲಿನ ನಾದದ ಮೂಲಕ ವಿಶಿಷ್ಟ ಟಚ್‌ ನೀಡಿದ ಉಡುಪಿಯ ಹುಡುಗನೊಬ್ಬ ಇದೀಗ ಇಂಟರ್ನೆಟ್‌ ಸೆನ್ಸೇಶನ್‌ ಆಗಿದ್ದಾನೆ.

Advertisement

ಉಡುಪಿ ಪೂರ್ಣಪ್ರಜ್ಞಾ ಕಾಲೇಜಿನ ಶ್ರೀಕೃಷ್ಣ ರೇವಂಕರ್ (Srikrishna Revankar) ಎಂಬ ವಿದ್ಯಾರ್ಥಿ ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಎಡ್‌ ಶಿರನ್‌ ಅವರ ʼಪರ್ಫೆಕ್ಟ್‌ʼ (Perfect) ಎಂಬ ಹಾಡನ್ನು ಹಾಡಿದ್ದಾರೆ. ಬಳಿಕ ಅದರ ಒಂದು ತುಣುಕನ್ನು ಇನ್ಸ್ಟಾಗ್ರಾಮ್‌ ನಲ್ಲಿ ಹಾಕಿಕೊಂಡಿದ್ದು, ಭಾರೀ ವೈರಲ್‌ ಆಗಿದೆ.

ವಿದ್ಯಾರ್ಥಿಯು ತನ್ನ ಕಾಲೇಜು ಸಮವಸ್ತ್ರವನ್ನು ಧರಿಸಿ, ಶಿರನ್‌ ನ ಹಾಡನ್ನು ಅನ್ನು ಸುಮಧುರ ಧ್ವನಿಯೊಂದಿಗೆ ಪ್ರದರ್ಶಿಸಿದ್ದಾರೆ. ಪ್ರೇಕ್ಷಕರು ಕೂಡಾ ಶ್ರೀಕೃಷ್ಣ ಅವರೊಂದಿಗೆ ದನಿಗೂಡಿಸಿದರು. ಜನರು ಹಾಡನ್ನು ಆಸ್ವಾದ ಮಾಡುತ್ತಿದ್ದಂತೆ ಕೊಳಲು ನಾದ ಆರಂಭಿಸಿದ ಶ್ರೀಕೃಷ್ಣ ಹಾಡಿನ ಸಾಂಪ್ರದಾಯಿಕ ರಾಗವನ್ನು ನುಡಿಸಿದರು. ಇದು ಪ್ರದರ್ಶನದ ಮಟ್ಟವನ್ನು ಮತ್ತಷ್ಟು ಎತ್ತರಕ್ಕೆ ಏರಿಸಿದೆ.

ಶ್ರೀಕೃಷ್ಣ ಅವರು ಯೂಟ್ಯೂಬ್‌ ನಲ್ಲಿಯೂ ಪೂರ್ಣ ಹಾಡನ್ನು ಅಪ್ಲೋಡ್‌ ಮಾಡಿದ್ದಾರೆ. ಅಂದಿನಿಂದ ವಿಡಿಯೋ ಆನ್‌ಲೈನ್‌ನಲ್ಲಿ ಪ್ರಶಂಸೆ ಗಳಿಸಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಹಾಡಿನ ಕೊಳಲು ಆವೃತ್ತಿಗೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದರು. “ಅವನು ಕೊಳಲು ನುಡಿಸಲು ನಾನು ಕಾಯುತ್ತಿದ್ದೆ” ಎಂದು ಒಬ್ಬ ಬಳಕೆದಾರ ಹೇಳಿದರೆ, “ಆ ಕೊಳಲು ಭಾಗವು ಅದ್ಭುತವಾಗಿದೆ” ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. “ಅದ್ಭುತವಾಗಿತ್ತು, ಇದು ನಿಜಕ್ಕೂ ‘ಪರ್ಫೆಕ್ಟ್’” ಎಂದು ಬಳಕೆದಾರರಲ್ಲಿ ಒಬ್ಬರು ಹೇಳಿದರು. ಈ ಹಾಡು ಲಕ್ಷಗಟ್ಟಲೆ ವೀಕ್ಷಣೆ ಪಡೆದಿದೆ.

ʼಉದಯವಾಣಿ ವೆಬ್‌ ಸೈಟ್‌ʼ ನೊಂದಿಗೆ ಮಾತನಾಡಿದ ಶ್ರೀಕೃಷ್ಣ ರೇವಂಕರ್, ಸಾವಿರಾರು ಹೃದಯಗಳಿಗೆ ನನ್ನ ಹಾಡು ತಲುಪಿದ್ದು ಸಂತಸ ತಂದಿದೆ. ಇದು ನನ್ನ ಮ್ಯೂಸಿಕಲ್ ಕಂಟೆಂಟ್‌ ಕ್ರಿಯೇಶನ್‌ ಪಯಣದ ಆರಂಭ. ಮುಂದಿನ ದಿನಗಳಲ್ಲೂ ಇದೇ ರೀತಿಯ ಬೆಂಬಲವನ್ನು ಬಯಸುತ್ತೇನೆ ಎನ್ನುತ್ತಾರೆ.

Advertisement

ʼಪರ್ಫೆಕ್ಟ್‌ʼ ಹಾಡನ್ನು ಎಡ್‌ ಶಿರನ್‌ ಅವರು ಅವರು ತಮ್ಮ ಈಗ-ಪತ್ನಿ ಶೆರ್ರಿ ಸೀಬಾರ್ನ್‌ಗಾಗಿ ಬರೆದಿದ್ದಾರೆ. ಇದು ಸಾರ್ವಕಾಲಿಕ ಅತ್ಯಂತ ಪ್ರಸಿದ್ಧ ರೊಮ್ಯಾಂಟಿಂಕ್ ಬಲ್ಲಾಡ್‌‌ ಗಳಲ್ಲಿ ಒಂದಾಗಿದೆ. ಅವರ ಆಲ್ಬಮ್ ಡಿವೈಡ್ ನ ಭಾಗವಾಗಿ 2017 ರಲ್ಲಿ ಈ ಹಾಡು ಬಿಡುಗಡೆಯಾಯಿತು.

Advertisement

Udayavani is now on Telegram. Click here to join our channel and stay updated with the latest news.

Next