Advertisement

ವಿದ್ಯಾರ್ಥಿಗಳ ಸಮಸ್ಯೆ; ಮುಗಿಯದ ಬಿಕ್ಕಟ್ಟು

05:07 PM Jan 20, 2022 | Team Udayavani |

ದೇವದುರ್ಗ: ಪಟ್ಟಣದ ಹೊರವಲಯದಲ್ಲಿ ಇರುವ ಮೊರಾರ್ಜಿ ದೇಸಾಯಿ ಪ.ಪೂ ವಿಜ್ಞಾನ ಕಾಲೇಜು ವಸತಿ ನಿಲಯ ವಿದ್ಯಾರ್ಥಿಗಳ ಸಮಸ್ಯೆ ಮುಗಿಯದ ಬಿಕ್ಕಟ್ಟಾಗಿದೆ.

Advertisement

ವಸತಿ ನಿಲಯದಲ್ಲಿ 142 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಊಟ, ಕುಡಿವ ನೀರು, ಕಾಯಂ ವಾರ್ಡ್‌, ಸ್ಟಾಫ್‌ನರ್ಸ್‌ ಸೇರಿದಂತೆ ಬೇಡಿಕೆ ಈಡೇರಿಸುವಂತೆ ಸೋಮವಾರ ನೂರಾರು ವಿದ್ಯಾರ್ಥಿಗಳು ದಿಢೀರ್‌ ಮಿನಿ ವಿಧಾನಸೌಧದ ಎದುರು ಪ್ರತಿಭಟಿಸಿದ್ದರು.

ಆಗ ಜಿಲ್ಲಾ ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿ ಆಲೋಚಿಸಿ ಸೂಕ್ತ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿ ವಾಪಸ್‌ ಹೋಗಿದ್ದಾರೆ. ಈಗಿರುವ ಪ್ರಾಚಾರ್ಯರನ್ನು ವಟಗಲ್‌ ಕಾಲೇಜಿಗೆ ಎರವಲು ನೀಡಿದ್ದು, ಕರ್ತವ್ಯ ನಿರ್ವಹಿಸುತ್ತಿರುವ ಉಪನ್ಯಾಸಕರಿಗೆ ಪ್ರಭಾರ ಚಾರ್ಜ್‌ ನೀಡುವ ಭರವಸೆ ನೀಡಿದ್ದಾರೆ. ಆದರೆ ಇಲ್ಲಿಯವರೆಗೆ ಯಾವ ಭರವಸೆಯೂ ಈಡೇರಿಲ್ಲ. ಎಸ್‌ಟಿ ಹಾಸ್ಟೆಲ್‌ ಬಿರಾದರ ಅವರಿಗೆ ಮೊರಾರ್ಜಿ ಹಾಸ್ಟೆಲ್‌ ಸಮಸ್ಯೆ ತಿಳಿದುಕೊಂಡು ಎರಡು ದಿನದಲ್ಲಿ ವರದಿ ನೀಡುವಂತೆ ಮೇಲಾಧಿಕಾರಿಗಳು ಸೂಚನೆ ನೀಡಿದ್ದಾರೆ.

ಜವಾಬ್ದಾರಿ ವಹಿಸಿಕೊಂಡಿರುವ ವಾರ್ಡನ್‌ ಬುಧವಾರ ಹಾಸ್ಟೆಲ್‌ಗೆ ಹೋಗಿ ಸಮಸ್ಯೆ ಅವಲೋಕಿಸಿದ್ದಾರೆ. ಸೂಕ್ತ ಮಾಹಿತಿ ಕಲೆ ಹಾಕುವ ನಿಟ್ಟಿನಲ್ಲಿ ವರದಿ ನೀಡಿದ ನಂತರವೇ ವಿದ್ಯಾರ್ಥಿಗಳಿಗೆ ಪೂರಕ ಮಾಹಿತಿ ತಿಳಿಯಲಿದೆ. ಆದರೆ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಮಾತ್ರ ಇನ್ನೂ ಪರಿಹಾರ ಸಿಕ್ಕಿಲ್ಲ.

ಮೇಲಾಧಿಕಾರಿಗಳು ಕಾದು ನೋಡುವ ತಂತ್ರ ಹಣೆಯುತ್ತಿರುವುದು ಬೇಸರಕ್ಕೆ ಕಾರಣ ಎನ್ನಲಾಗುತ್ತಿದೆ. ಶಾಶ್ವತ ಪರಿಹಾರ ಕಲ್ಪಿಸಬೇಕೆನ್ನುವ ವಿದ್ಯಾರ್ಥಿಗಳ ಆಸೆಗೆ ಧಕ್ಕೆ ತರುತ್ತಿದೆ. ಇದು ಒಂದೆರಡು ದಿನದ ಸಮಸ್ಯೆಯಲ್ಲ. ಆರೇಳು ತಿಂಗಳಿಂದ ನಡೆಯುತ್ತಿರುವ ಸಮಸ್ಯೆ. ಹಲವು ಸಮಸ್ಯೆಗೆ ಒಬ್ಬರೂ ಪರಿಹಾರ ನೀಡಿಲ್ಲ. ಸುಸಜ್ಜಿತ ಕಟ್ಟಡಗಳು ಆದರೂ ನಿರ್ವಹಣೆ ಕೊರತೆ ಎದುರಾಗಿದೆ. ನೂರಾರು ವಿದ್ಯಾರ್ಥಿಗಳು ದಿನವಿಡೀ ಸಮಸ್ಯೆ ಎದುರಿಸುವ ಸ್ಥಿತಿ ಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next