Advertisement

ದಾರಿ ಸಮಸ್ಯೆ: 4ನೇ ದಿನಕ್ಕೆ ರೈತರ ಆಮರಣ ಸತ್ಯಾಗ್ರಹ

03:59 PM Feb 19, 2018 | |

ವಿಜಯಪುರ: ರೈತರು ಜಮೀನಗಳಿಗೆ ಹೋಗಲು ದಾರಿ ಸಮಸ್ಯೆ ಇತ್ಯರ್ಥಕ್ಕೆ ಆಗ್ರಹಿಸಿ ರೈತರು ನಡೆಸುತ್ತಿರುವ
ಆಮರಣ ಉಪವಾಸ ನಾಲ್ಕನೇ ದಿನಕ್ಕೆ ಕಾಲಿರಿಸಿದೆ. ಈ ಮಧ್ಯೆ ಧರಣಿ ಸಳಕ್ಕೆ ರವಿವಾರ ಭೇಟಿ ನೀಡಿದ ಶಾಸಕರೊಬ್ಬರನ್ನು ರೈತರು ತರಾಟೆಗೆ ತೆಗೆದುಕೊಂಡು ಹರಿಹಾಯ್ದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಸಂಘಟನೆ ಜಿಲ್ಲಾ
ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಶಿವಪ್ಪ ಬುಜರಿ ಹಾಗೂ ದೇವೇಂದ್ರಪ್ಪ ಕುಂಬಾರ ಇವರು ಆಮರಣ ಉಪವಾಸ ಆರಂಭಿಸಿದ್ದಾರೆ. 3ನೇ ದಿನ ಮುಕ್ತಾಯವಾಗಿ 4ನೇ ದಿನಕ್ಕೆ ಕಾಲಿರಿಸಿದೆ.

ಈ ಮಧ್ಯೆ ರೈತರು ಆಮರಣ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿದ ಸಿಂದಗಿ ಶಾಸಕ ರಮೇಶ ಭೂಸನೂರ, ರೈತರು ಅನುಭವಿಸುತ್ತಿರುವ ಹೊಲಕ್ಕೆ ಹೋಗುವ ದಾರಿ ಸಮಸ್ಯೆಯನ್ನು ಸದನದಲ್ಲಿ ಪ್ರಸ್ತಾಪಿಸುವ ಭರವಸೆ ನೀಡಿದರು. ಸದರಿ ಬಜೆಟ್‌ ಅಧಿವೇಶನದಲ್ಲೇ ಸರ್ಕಾರದ ಗಮನ ಸೆಳೆದು ಅಧಿವೇಶನದಲ್ಲಿ ಚರ್ಚಿಸಿ, ಸಮಸ್ಯೆಗೆ ಪರಿಹಾರ ಕಂಡುಕೊಡುವ ಭರವಸೆ ನೀಡಿದರು.

ಶಾಸಕ ರಮೇಶ ಭೂಸನೂರ ಅವರ ಮಾತಿನಿಂದ ಸಿಡುಕಿದ ಅರವಿಂದ ಕುಲಕರ್ಣಿ, ಜಿಲ್ಲೆಯಲ್ಲಿ 8 ಶಾಸಕರಿದ್ದು ಕಳೆದ ಹಲವು ಬಾರಿ ಈ ಕುರಿತು ರೈತರು ನಡೆಸಿದ ಪ್ರತಿಭಟನೆಗೆ ಕನಿಷ್ಠ ಸ್ಪಂದಿಸುವ ಸೌಜನ್ಯ ತೋರಿಲ್ಲ. ರೈತರ ಮತಗಳಿಂದಲೇ ಅಧಿಕಾರಕ್ಕೆ ಬಂದಿರುವ ಎಲ್ಲ ಶಾಸಕರು ರೈತರ ಕುರಿತು ಕನಿಷ್ಠ ಕಾಳಜಿಯನ್ನೂ ತೋರುತ್ತಿಲ್ಲ. ರೈತರ ಸಮಸ್ಯೆಗಳ ಮೇಲೆ ರಾಜಕಾರಣ ಮಾಡಿ ನಿಮ್ಮ ಕೆಲಸ ಈಡೇರಿಸಿಕೊಳ್ಳುತ್ತಿದ್ದೀರಿ ಎಂದು ಕಿಡಿ ಕಾರಿದರು.

ಸಂಘಟನೆ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ರಂಜಣಗಿ, ಸಿದ್ರಾಮ ಅಂಗಡಗೇರಿ, ಕೃಷ್ಣಪ್ಪ ಪವಾರ, ಪಾಂಡು ಹ್ಯಾಡಿ, ಡಾ|
ಎಂ.ರಾಮಚಂದ್ರ ಬಮ್ಮನಜೋಗಿ, ವಿಠ್ಠಲ ಅಮಾತೆಗೌಡರ, ಭೀಮಶಿ ಚಲವಾದಿ, ರಾಜಶೇಖರ ಗುಜ್ಜರ, ಇಂಡಿ ತಾಲೂಕಾಧ್ಯಕ್ಷ ಮುದ್ದಗೌಡ ಪಾಟೀಲ, ಶಿವಪ್ಪ ರೂಗಿ, ಶ್ಯಾಮರಾಯ ಕಾಗನರಿ, ಬಸವರಾಜ ಜೇವರ್ಗಿ ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next