ಈ ಬಗ್ಗೆ ಕೇಂದ್ರ ಕೃಷಿ ಮತ್ತು ರೈತರ ಕ್ಷೇಮಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.ರೈತರ ಗುರುತಿನ ಚೀಟಿಯು ಅರ್ಜಿದಾರ ಕೃಷಿ ಭೂಮಿ ಹೊಂದಿರುವುದನ್ನು ದೃಢಪಡಿಸುವ ಕಾರಣ, ನೋಂದಣಿ ಪ್ರಕ್ರಿಯೆಯೂ ಸುಲಭವಾಗುತ್ತದೆ. ಹೀಗಾಗಿ, ಎಲ್ಲ ಹೊಸ ಅರ್ಜಿದಾರರೂ “ಫಾರ್ಮರ್ಸ್ ರಿಜಿಸ್ಟ್ರಿ’ಯಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಜ.1ರಿಂದಲೇ 10 ರಾಜ್ಯಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬಂದಿದೆ. ಮುಂದಿನ ದಿನಗಳಲ್ಲಿ ಉಳಿದ ರಾಜ್ಯಗಳಲ್ಲೂ ಇದು ಜಾರಿಯಾಗಲಿವೆ ಎನ್ನಲಾಗಿದೆ.
Advertisement
ಏನಿದು ರೈತ ಚೀಟಿ?ಕಿಸಾನ್ ಪೆಹಚಾನ್ ಪತ್ರ ಅಥವಾ ರೈತ ಗುರುತಿನ ಚೀಟಿಎನ್ನುವುದು ರಾಜ್ಯಗಳ ಭೂ ದಾಖಲೆಗಳೊಂದಿಗೆ ಲಿಂಕ್ ಆಗಿರುವ ಆಧಾರ್ ರೀತಿಯ ವಿಶಿಷ್ಟ ಡಿಜಿಟಲ್ ಗುರುತಿನ ಸಂಖ್ಯೆಯಾಗಿದೆ. ಇದರಲ್ಲಿ ರೈತನ ಹೆಸರು, ಭೂಮಿಯ ಮಾಹಿತಿ, ಆ ಭೂಮಿಯಲ್ಲಿ ಬೆಳೆಯಲಾಗುತ್ತಿರುವ ಬೆಳೆ ಮತ್ತಿತರ ವಿವರಗಳನ್ನು ಇರುತ್ತವೆ.