Advertisement

ಯುವ ನ್ಯಾಯವಾದಿಗಳಿಗೆ ಸವಲತ್ತು : ಮೋತಕಪಳ್ಳಿ

09:01 PM Jan 10, 2022 | Team Udayavani |

ಕಲಬುರಗಿ: ಕೋವಿಡ್‌-19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ವಕೀಲರಿಗೆ ಹೆಚ್ಚಿನ ರೀತಿಯಲ್ಲಿ ಆರ್ಥಿಕ ಸಹಾಯ ಒದಗಿಸುವುದರ ಜತೆಗೆ ಕಲ್ಯಾಣ ಕರ್ನಾಟಕ ಪ್ರದೇಶದಿಂದ ನೋಂದಾಯಿತರಾಗುವ ನವ ವಕೀಲರಿಗೆ 371(ಜೆ) ವಿಧಿ ಅನ್ವಯ ಇನ್ನು ಹೆಚ್ಚಿನ ಸಹಾಯ, ಸವಲತ್ತುಗಳ ದೊರಕುವ ನಿಟ್ಟಿನಲ್ಲಿ ಆದ್ಯತೆ ನೀಡುವುದಾಗಿ ಕರ್ನಾಟಕ ರಾಜ್ಯ ವಕೀಲರ ಪರಿಷತ್‌ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕಲಬುರಗಿಯ ಕಾಶೀನಾಥ ಮೋತಕಪಳ್ಳಿ ಹೇಳಿದರು.

Advertisement

ವಕೀಲರ ಪರಿಷತ್‌ನ ಕೇಂದ್ರ ಕಚೇರಿ ಬೆಂಗಳೂರಿನಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಸನ್ಮಾನಿತಗೊಂಡು ಮಾತನಾಡಿದ ಅವರು, ಗ್ರಾಮೀಣ ಭಾಗದಿಂದ ಬಂದು ರಾಜ್ಯಾಧ್ಯಕ್ಷ ಸ್ಥಾನ ವಹಿಸಿಕೊಂಡಿರುವುದು ಸಂತಸ ತಂದಿದೆ. ತಮ್ಮ ಅವಧಿಯುದ್ದಕ್ಕೂ ಗಾಮೀಣ ಪ್ರದೇಶದಿಂದ ಬಂದು ನೂತನವಾಗಿ ವಕೀಲ ವೃತ್ತಿ ನಡೆಸುವವರಿಗೆ ಆರ್ಥಿಕ ಸಹಾಯವನ್ನು ಒದಗಿಸುವುದು, ವಕೀಲರಿಗೆ ಮೂಲಭೂತ ಸೌಕರ್ಯಗಳಾದ ಗ್ರಂಥಾಲಯ, ನೂತನ ತಂತ್ರಜ್ಞಾನ, ಗಣಕಯಂತ್ರಗಳನ್ನು ಒದಗಿಸುವುದಕ್ಕೆ ಹೆಚ್ಚಿನ ಆಸಕ್ತಿ ವಹಿಸುವುದಾಗಿ ಭರವಸೆ ನೀಡಿದರು.

ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಮೈಸೂರಿನ ಚಂದ್ರಮೌಳಿ ಬಿ ಆರ್‌. ಮಾತನಾಡಿದರು. ಭಾರತೀಯ ವಕೀಲರ ಪರಿಷತ್‌ ಸದಸ್ಯ, ಕೋ-ಛೇರಮನ್‌ ಆರ್‌. ಸದಾಶಿವರೆಡ್ಡಿ ಮತ್ತು ಪರಿಷತ್‌ನ ಸದಸ್ಯರು ಶುಭಾಶಯ ಕೋರಿದರು. ನಿರ್ಗಮಿತ ಅಧ್ಯಕ್ಷ ಶ್ರೀನಿವಾಸ ಬಾಬು ಎಲ್‌., ಉಪಾಧ್ಯಕ್ಷ ಕೆ. ಕಲ್ಲೇಶ್ವರ ತುಕಾರಾಮ ನೂತನ ಅಧ್ಯಕ್ಷರಿಗೆ ಹಾಗೂ ಉಪಾಧ್ಯಕ್ಷರಿಗೆ ಅಧಿ ಕಾರ ಹಸ್ತಾಂತರಿಸಿದರು

 

Advertisement

Udayavani is now on Telegram. Click here to join our channel and stay updated with the latest news.

Next