Advertisement
ಮೋದಿ ಅವರು ಈಗಾಗಲೇ ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ಸಂಪರ್ಕದಲ್ಲಿದ್ದು ಕೇಂದ್ರದಿಂದ ಸರ್ವ ರೀತಿಯ ನೆರವು ನೀಡುವ ಭರವಸೆಯಿತ್ತಿದ್ದಾರೆ.
Related Articles
ರಾಜ್ಯದಲ್ಲಿ ಮಳೆ ಹಾಗೂ ಪ್ರವಾಹದಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿರುವ ಹಿನ್ನೆಲೆಯಲ್ಲಿ ಬಿಎಸ್‌ಎನ್‌ಎಲ್, ಜಿಯೊ, ಏರ್‌ಟೆಲ್, ವೊಡಾಫೋನ್ ಮತ್ತು ಐಡಿಯಾ ಸಹಿತ ಟೆಲಿಕಾಂ ಕಂಪೆನಿಗಳು ಜನರಿಗೆ ಉಚಿತ ಕರೆ ಹಾಗೂ ಡೇಟಾ ಸೇವೆಗಳನ್ನು ನೀಡಲು ಮುಂದಾಗಿವೆ.
Advertisement
ಬಿಎಸ್‌ಎನ್‌ಎಲ್ 20 ನಿಮಿಷಗಳ ಉಚಿತ ಕರೆಯ ಕೊಡುಗೆ ನೀಡಿದೆ. ಜನರು ಬಿಎಸ್‌ಎನ್‌ಎಲ್ ಹಾಗೂ ಇತರ ನೆಟ್‌ವರ್ಕ್‌ಗಳಿಗೆ ಪ್ರತಿದಿನ 20 ನಿಮಿಷಗಳ ತನಕ ಉಚಿತ ಕರೆಗಳನ್ನು ಮಾಡಬಹುದಾಗಿದೆ. ಅಲ್ಲದೆ 7 ದಿನಗಳ ಕಾಲ ಉಚಿತ ಡೇಟಾ ಹಾಗೂ ಉಚಿತ ಎಸ್‌ಎಂಎಸ್ ಸೇವೆಗಳನ್ನು ನೀಡುವುದಾಗಿ ತಿಳಿಸಿದೆ.
ಐಡಿಯಾ ಕಂಪೆನಿ 10 ರೂ.ಗಳಿಗೆ ಉಚಿತ ಕರೆಗಳ ಕೊಡುಗೆ ನೀಡಿದೆ. ಅಲ್ಲದೆ 1 ಜಿಬಿ ಉಚಿತ ಡೇಟಾವನ್ನು ನೀಡಿದ್ದು ಇದನ್ನು 7 ದಿನಗಳ ಕಾಲ ಬಳಸಬಹುದಾಗಿದೆ. ಜಿಯೊ ಒಂದು ವಾರ ಕಾಲ ಅಪರಿಮಿತ ಕರೆ ಹಾಗೂ ಡೇಟಾವನ್ನು ಒದಗಿಸಿದೆ. ವೊಡಾಫೋನ್ 30 ರೂ.ಗಳಿಗೆ ಉಚಿತ ಕರೆ ವ್ಯವಸ್ಥೆ ಹಾಗೂ 1 ಜಿಬಿ ಡೇಟಾವನ್ನು ಒದಗಿಸಿದೆ. ಅಂತೆಯೇ ಏರ್‌ಟೆಲ್ ಕೂಡ ಒಂದು ವಾರ ಅವಧಿಗೆ 30 ರೂ.ಗಳಿಗೆ 1 ಜಿಬಿ ಉಚಿತ ಡೇಟಾ ಹಾಗೂ ಉಚಿತ ಕರೆ ಸೌಲಭ್ಯವನ್ನು ಕಲ್ಪಿಸಿದೆ.
ಸಾಮಾಜಿಕ ಮಾಧ್ಯಮ ಮೂಲಕ ಜನರ ಮೊರೆಮಳೆಯಿಂದ ಜರ್ಝರಿತ ರಾಜ್ಯ ದಲ್ಲಿ ರಸ್ತೆಗಳೇ ನದಿಗಳಾಗಿ ಪರಿವರ್ತಿತವಾಗಿರುವ ಸಂದರ್ಭದಲ್ಲಿ ಗಗನಚುಂಬಿ ಕಟ್ಟಡಗಳಲ್ಲಿ ವಾಸಿಸುತ್ತಿರುವ ಕುಟುಂಬಗಳು, ಹಾಸ್ಟೆಲ್‌ಗಳಲ್ಲಿ ಸಿಲುಕಿಕೊಂಡಿರುವ ವಿದ್ಯಾರ್ಥಿಗಳು ಹಾಗೂ ಚರ್ಚ್‌ಗಳಲ್ಲಿ ಸಿಕ್ಕಿಬಿದ್ದಿರುವ ಶ್ರದ್ಧಾಳುಗಳು ಸಹಾಯವನ್ನು ಯಾಚಿಸುವು ದಕ್ಕಾಗಿ ಮತ್ತು ತಾವಿರುವ ಸ್ಥಳದ ಕುರಿತು ಮಾಹಿತಿ ದಾಟಿಸುವುದಕ್ಕಾಗಿ ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಿದ್ದಾರೆ. ಜನರು ಕೈಮುಗಿದು ಸಹಾಯಕ್ಕಾಗಿ ಮೊರೆಯಿಡುತ್ತಿರುವ ವಿಡಿಯೋಗಳನ್ನು ವಾಟ್ಸ್‌ಆ್ಯಪ್ ಗ್ರೂಪ್‌ಗ್ಳಲ್ಲಿ ಪೋಸ್ಟ್ ಮಾಡಲಾಗುತ್ತಿದೆ ಮತ್ತು ನೂರಾರು ಮಂದಿ ಶೇರ್ ಮಾಡುತ್ತಿದ್ದಾರೆ. ತಮ್ಮ ಪ್ರೀತಿಪಾತ್ರರು ಸಿಲುಕಿಹಾಕಿಕೊಂಡಿರುವ ವಿವಿಧ ಪ್ರದೇಶಗಳ ಕುರಿತು ಆತಂಕಿತ ಜನರು ಗೂಗಲ್ ಮ್ಯಾಪ್ ಬಳಸಿ ಲೊಕೇಶನ್ ಅನ್ನು ಹಂಚಿಕೊಳ್ಳುತ್ತಿದ್ದಾರೆ. ಅನೇಕ ಪ್ರಾದೇಶಿಕ ಚಾನೆಲ್‌ಗಳು ಸಂಕಷ್ಟದಲ್ಲಿರುವವರು ತಮ್ಮನ್ನು ಸಂಪರ್ಕಿಸುವುದಕ್ಕಾಗಿ ಮತ್ತು ಅವರು ಇರುವ ಸ್ಥಳದ ಕುರಿತು ವಿವರಗಳನ್ನು ಹಂಚಿಕೊಳ್ಳುವುದಕ್ಕಾಗಿ ನ್ಯೂಸ್ ಬುಲೆಟಿನ್‌ಗಳ ಮೂಲಕ ತಮ್ಮ ನಂಬರ್‌ಗಳನ್ನು ಪ್ರಕಟಿಸಿವೆ. ಬಹುತೇಕ ನೀರಲ್ಲಿ ಮುಳುಗಿರುವ ಪತ್ತನಂತಿಟ್ಟದಲ್ಲಿ ವಿದ್ಯಾರ್ಥಿಗಳು ಹಾಗೂ ಚರ್ಚ್‌ಗಳಲ್ಲಿ ಸಿಕ್ಕಿಬಿದ್ದಿರುವ ಜನರು ಸಾಮಾಜಿಕ ಮಾಧ್ಯಮ ಮೂಲಕ ಸಹಾಯ ಯಾಚಿಸುತ್ತಿದ್ದಾರೆ. 25 ರೈಲುಗಳ ಯಾನ ರದ್ದು
ರಾಜ್ಯದಲ್ಲಿ ಸಂಭವಿಸಿರುವ ಅಭೂತಪೂರ್ವ ನೆರೆ ಹಾಗೂ ಭೂಕುಸಿತಗಳ ಹಿನ್ನೆಲೆಯಲ್ಲಿ ಗುರುವಾರ 25ಕ್ಕೂ ಅಧಿಕ ಟ್ರೈನ್‌ಗಳನ್ನು ರದ್ದುಗೊಳಿಸಲಾಯಿತು ಇಲ್ಲವೇ ಸಮಯವನ್ನು ಮರುನಿಗದಿಗೊಳಿಸಲಾಯಿತು. ರದ್ದುಗೊಳಿಸಲಾದ ದೂರ ಪ್ರಯಾಣದ ಟ್ರೈನ್‌ಗಳಲ್ಲಿ ಟ್ರೈನ್ ಸಂಖ್ಯೆ 12202 ಕೊಚ್ಚುವೇಲಿ ಲೋಕಮಾನ್ಯ ತಿಲಕ್ ಟರ್ಮಿನಸ್(ಗರೀಬ್ ರಥ್ ಎಕ್ಸ್‌ಪ್ರೆಸ್)ಮತ್ತು ಟ್ರೈನ್ ಸಂಖ್ಯೆ 12617 ಎರ್ನಾಕುಳಂ ಹಜ್ರತ್ ನಿಜಾಮುದ್ದೀನ್ (ಮಂಗಳಾ ಲಕ್ಷದ್ವೀಪ ಎಸ್‌ಎಫ್ ಎಕ್ಸ್‌ಪ್ರೆಸ್) ಸೇರಿವೆ. ರೈಲ್ವೇ ಅಧಿಕಾರಿಗಳು ವಿವಿಧ ಸೂಕ್ಷ್ಮ ಪ್ರದೇಶಗಳಲ್ಲಿ ಪ್ರವಾಹದಿಂದ ರೈಲು ಹಳಿ, ಸೇತುವೆ ಮತ್ತು ಕಟ್ಟಡಗಳ ಮೇಲಾಗುತ್ತಿರುವ ಪರಿಣಾಮಗಳನ್ನು ನಿಕಟವಾಗಿ ಗಮನಿಸುತ್ತಿದ್ದಾರೆ. ಟ್ರೈನ್‌ಗಳನ್ನು ತಾಸಿಗೆ 10 ಕಿ.ಮೀ.ಗಳಿಂದ 45 ಕಿ.ಮೀ.ಗಳ ತನಕ ಸೀಮಿತ ವೇಗದಲ್ಲಿ ಓಡಿಸಲಾಗುತ್ತಿದೆ ಎಂದು ಪ್ರಕಟನೆಯೊಂದು ತಿಳಿಸಿದೆ.