Advertisement

ಕೃಷಿಕರ ಆದಾಯ ದ್ವಿಗುಣವೇ ಪ್ರಧಾನಿ ಆಶಯ

12:15 PM Jan 14, 2018 | |

ನಂಜನಗೂಡು: ಕೃಷಿಕರ ಆದಾಯವನ್ನು ದ್ವಿಗುಣಗೊಳಿಸುವುದೇ ಪ್ರಧಾನಿ ಮೋದಿಯವರ ಪ್ರಥಮ ಆದ್ಯತೆ ಎಂದು ಕೇಂದ್ರದ ಸಂಸದೀಯ ವ್ಯವಹಾರ  ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತಕುಮಾರ್‌ ತಿಳಿಸಿದರು. 

Advertisement

ಸುತ್ತೂರು ಜಾತ್ರೋತ್ಸವದ ಮಾಹಿತಿ ಕೇಂದ್ರವನ್ನು ಲೋಕಾರ್ಪಣೆಗೊಳಿಸಿದ ಮಾತ ನಾಡಿದ ಅವರು, ಕೇಂದ್ರದ ಈ ಯೋಜನೆಗೆ ರಾಜ್ಯವು ಕೈಜೋಡಿಸಬೇಕು ಎಂದು ಕೋರಿದರು. ರಸಾಯನಿಕ ಮಾμಯಾ ತಮ್ಮ ಹಿಂದೆ ಬಿದ್ದಿದೆ ಎಂದ ರಾಸಾಯನಿಕ ಸಚಿವರು, ಮಾμಯಾದ ವಿರುದ್ಧದ ಹೋರಾಟಕ್ಕೆ ಸುತ್ತೂರು ಮಠವೇ ನಮಗೆ ಪ್ರೇರಣೆಯಾಗಿದೆ ಎಂದರು. 

ಕಡುಬಡವರಿಗೆ ಅತೀ ಕಡಿಮೆ ದರದಲ್ಲಿ ಔಷಧಿ ನೀಡುವ ಮೋದಿ ಸರ್ಕಾರದ ಪ್ರಥಮ ಪ್ರಯತ್ನವಾಗಿ 2014 ರವರೆಗೆ ರಾಷ್ಟ್ರದಲ್ಲಿ ಕೇವಲ 99  ರಷ್ಟೆ ಇದ್ದ ಜನೌಷಧಿ ಮಾರಾಟ ಕೇಂದ್ರ ಇಂದು 3049 ಘಟಕವನ್ನು ಮೀರಿ ಮುನ್ನಡೆದಿದೆ ಎಂದರು.

ಜಾತ್ಯತೀತ ಎಂಬ ಪದ ಪುಸ್ತಕಕ್ಕೆ, ಭಾಷಣಕ್ಕೆ ಮತ್ತು ವಿಚಾರ ಸಂಕಿರಣಕ್ಕೆ ಮಾತ್ರ ಸೀಮಿತವಾಗಿದೆ ಎಂದ ಅನಂತ್‌ ಕುಮಾರ್‌, ಈ ಮನೋಭಾವದ ವಿರುದ್ಧ ಹೋರಾಟವನ್ನು ಹುಟ್ಟು ಹಾಕಿದವರು ಬಸವಣ್ಣನವರು ಎಂದರು.

ಜಾತ್ಯತೀತತೆ ಮನೆಯ ಹೊರಗಲ್ಲ ಮನೆಯ ಹೊಸಲಿನ ಒಳಗೆ ಆಚರಣೆಯ ಪದ್ಧತಿಯಾಗಬೇಕು ಎಂದು ಆಶಿಸಿದವರು ಬಸವಣ್ಣ, ಬೇರೆಯವರಿಗೆ ಆದರ್ಶವಾದ ಸ್ವಂತಕ್ಕೆ ಮಾತ್ರ ಅನುಕೂಲ ವಾದ ಎನ್ನುವ ಮನೋಭಾವವನ್ನು ಧಿಕ್ಕರಿಸಲು 12ನೇ ಶತಮಾನದಲ್ಲಿ ಬಸವಣ್ಣ ಹಂಚಿದ ಬೆಳಕು  ಇಂದಿಗೂ ಬೆಳಗುತ್ತಿರುವುದು ಸುತ್ತೂರಿನಲ್ಲಿ ಮಾತ್ರ ಕಾಣಬಹುದು ಎಂದು ಶ್ರೀಮಠದ ಕಾರ್ಯವನ್ನು ಅವರು ಶ್ಲಾಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next