Advertisement

Puttur ಕರಿಮಣಿ ಮುತ್ತಿನ ಕೈ ಬಳೆ ಕಳವು ಪ್ರಕರಣ ಬಾಲಾಪರಾಧಿ ಸಹಿತ ನಾಲ್ವರಿಗೆ ಜಾಮೀನು

12:11 AM Jun 16, 2024 | Team Udayavani |

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ಜಾತ್ರಾ ಗದ್ದೆಯಲ್ಲಿ ಮಗುವಿನ ಕೈಯಲ್ಲಿದ್ದ ಕರಿಮಣಿ ಮುತ್ತಿನ ಕೈ ಬಳೆಯನ್ನು ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿ 6 ಮಂದಿ ಆರೋಪಿಗಳ ಪೈಕಿ ಬಾಲಾಪರಾಧಿ ಸಹಿತ ನಾಲ್ವರಿಗೆ ಪುತ್ತೂರು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

Advertisement

ದರ್ಬೆ ಪಾಂಗಳಾಯಿ ನಿವಾಸಿ ಪದ್ಮಿನಿ ಸಿ ಅವರು ರಥೋತ್ಸವದಂದು ರಾತ್ರಿ ರಥಬೀದಿಯಲ್ಲಿ ಹೋಗುತ್ತಿದ್ದ ವೇಳೆ ಮಗುವಿನ ಎಡ ಕೈಯಲ್ಲಿದ್ದ ಕರಿಮಣಿ ಮುತ್ತಿನ ಕೈ ಬಳೆಯನ್ನು ಮಹಿಳೆಯೊಬ್ಬರು ಕತ್ತರಿಸಿ ಎಳೆದುಕೊಂಡಿರುವುದು ಗಮನಕ್ಕೆ ಬಂದು ತತಕ್ಷಣ ಆಕೆಯನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಆಕೆ ಓಡಲು ಯತ್ನಿಸಿದ್ದು ಕಳವುಗೈದಿದ್ದ ಬಳೆ ಕೆಳಗೆ ಬಿದ್ದಿತ್ತು.

ಆರೋಪಿ ಮಹಿಳೆಯನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಆಕೆಗೆ ಪೊಲೀಸರು ಎಚ್ಚರಿಕೆ ನೀಡಿ ಬಿಟ್ಟಿದ್ದರೆಂಬ ಆರೋಪ ವ್ಯಕ್ತವಾಗಿತ್ತು. ಇದನ್ನು ದೂರುದಾರರು ಪ್ರಶ್ನಿಸಿದ್ದರಲ್ಲದೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದರು. ಆಬಳಿಕದ ಬೆಳವಣಿಗೆಯಲ್ಲಿ ಪೊಲೀಸರು ದೂರುದಾರರ ಮನೆಗೆ ತೆರಳಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಗಳಾದ ರಾಧಾ, ದತ್ತಾತ್ರೆಯ, ಗಣೇಶ್‌, ಬೈರನಾಥ್‌, ವೈಶಾಲಿ ಮತ್ತು ಬಾಲಾಪರಾಧಿಯೊಬ್ಬನನ್ನು ಬಂಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next