Advertisement

ಸೋಂಕಿತರ ಪ್ರಾಥಮಿಕ ಸಂಪರ್ಕಿತರಿಗೂ ಪಾಸಿಟಿವ್‌

11:41 AM Jul 28, 2020 | Suhan S |

ಮೊಳಕಾಲ್ಮೂರು: ಪಟ್ಟಣ ಹಾಗೂ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೋವಿಡ್ ಸೋಂಕು ಉಲ್ಬಣವಾಗುತ್ತಿದ್ದು, ಪಟ್ಟಣದಲ್ಲಿ 6 ಮತ್ತು ಗ್ರಾಮೀಣ ಪ್ರದೇಶದಲ್ಲಿ 11 ಸೇರಿದಂತೆ ಒಟ್ಟು 17 ಕೋವಿಡ್ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿವೆ. ಇದರಿಂದಾಗಿ ತಾಲೂಕಿನ ಜನತೆ ಆತಂಕಗೊಂಡಿದ್ದಾರೆ.

Advertisement

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಸೋಂಕಿತರಪ್ರಾಥಮಿಕ ಸಂಪರ್ಕದಲ್ಲಿದ್ದ 31 ಜನರನ್ನು ಪರೀಕ್ಷಿಸಲಾಗಿದ್ದು, ಅದರಲ್ಲಿ 6 ಪ್ರಕರಣಗಳು ಪಾಸಿಟಿವ್‌ ಎಂದು ದೃಢಪಟ್ಟಿವೆ. ತಾಲೂಕಿನ ಸಿದ್ದಯ್ಯನಕೋಟೆ ಗ್ರಾಮದಲ್ಲಿ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಪರೀಕ್ಷಿಸಿದ ಪರಿಣಾಮ 23 ವರ್ಷದ ಪುರುಷ, 12 ವರ್ಷದ ಬಾಲಕ, 10 ವರ್ಷದ ಬಾಲಕ, 56 ವರ್ಷದ ವೃದ್ಧೆಯಲ್ಲಿ ಸೋಂಕು ದೃಢಪಟ್ಟಿದೆ. ಕೊಂಡ್ಲಹಳ್ಳಿ ಗ್ರಾಮದಲ್ಲಿ ಪ್ರಾಥಮಿಕ ಸಂಪರ್ಕದಲ್ಲಿದ್ದ 15 ಜನರನ್ನು ಪರೀಕ್ಷಿಸಿದಾಗ 63 ವರ್ಷದ ವೃದ್ಧೆ, 54 ವರ್ಷದ ವೃದ್ಧೆ, 3 ವರ್ಷದ ಬಾಲಕಿ ಹಾಗೂ 48 ವರ್ಷದ ಮಹಿಳೆ ಸೇರಿದಂತೆ ಒಟ್ಟು 4 ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿವೆ. ರಾಂಪುರದಲ್ಲಿ 64 ವರ್ಷದ ವೃದ್ಧ, 37 ವರ್ಷದ ಯುವಕ, 52 ವರ್ಷದ ಪುರುಷ ಸೇರಿದಂತೆ ಒಟ್ಟು 3 ಪ್ರಕರಣಗಳು ಪತ್ತೆಯಾಗಿವೆ.

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಸಂಪರ್ಕದಲ್ಲಿದ್ದ 31 ಜನರ ಪೈಕಿ 53 ವರ್ಷದ ವೈದ್ಯರು, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ 46 ವರ್ಷದ ಗ್ರೂಪ್‌ ಡಿ ಹೊರಗುತ್ತಿಗೆ ನೌಕರ ಮತ್ತು ಗ್ರೂಪ್‌ ಡಿ ನೌಕರನ 3 ವರ್ಷದ ಮಗ, ಪಶು ಇಲಾಖೆಯ 27 ವರ್ಷದ ಮಹಿಳೆ, ಈ ಮಹಿಳೆಯ 53 ವರ್ಷದ ತಾಯಿ ಹಾಗೂ 25 ವರ್ಷದ ತಮ್ಮನಿಗೆ ಸೋಂಕು ದೃಢಪಟ್ಟಿದೆ.

ಸೋಂಕಿತರನ್ನು ರಾಂಪುರ ಮತ್ತು ಚಿತ್ರದುರ್ಗದ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಲೂಕು ಆರೋಗ್ಯಾಧಿ ಕಾರಿಗಳ ಕಚೇರಿ ಮತ್ತು ಸಿದ್ದಯ್ಯನಕೋಟೆ ಗ್ರಾಮವನ್ನು ಸೀಲ್‌ ಡೌನ್‌ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next