Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನಾಳೆ ದಿಲ್ಲಿಗೆ ತೆರಳುತ್ತಿದ್ದು, ಎಲ್ಲವೂ ಸರಿಧಿಯಾಗಿದ್ದಲ್ಲಿ ಮಸೂದೆಯನ್ನು ಅದೇ ದಿನ ರಾಜಧಿಭವನಕ್ಕೆ ಕಳುಹಿಸಲಾಗುತ್ತದೆ ಎಂದು ಹೇಳಿದರು. ರಾಜ್ಯ ಸರಕಾರ ಕೇಂದ್ರಕ್ಕೆ ಸಲ್ಲಿಸಿದ ಕಂಬಳ ಮಸೂದೆ ನಿಯಮಾವಳಿಗಳನ್ನು ಯಾರು ರೂಪಿಸಧಿಬೇಕು ಎಂಬುದು ಸ್ಪಷ್ಟವಾಗಿಲ್ಲ. ತಮಿಳುಧಿನಾಡಿನ ಜಲ್ಲಿಕಟ್ಟು ಸಂಬಂಧಿಸಿ ರಾಜ್ಯವೇ ನಿಯಮಾಧಿವಳಿಗಳನ್ನು ರೂಪಿಸಲಿದೆ ಎಂದು ಹೇಳಿಕೊಂಡಿದೆ. ಈ ಮಾದರಿಯಲ್ಲಿ ಕಂಬಳ ಮಸೂದೆಯಲ್ಲೂ ಕರ್ನಾಟಕ ಸರಕಾರ ಉಲ್ಲೇಖೀಸಬೇಕು ಎಂದು ಹಿಂದೆ ಸಚಿವಾಲಯ ಅಭಿಪ್ರಾಯಪಟ್ಟಿತ್ತು. ನಾನು ಗೃಹ ಸಚಿವರಿಗೆ ಈ ಬಗ್ಗೆ ತಿಳಿಸಿದಾಗ ಕೇಂದ್ರ ಮತ್ತು ರಾಜ್ಯ ಕಾನೂನು ಕಾರ್ಯದರ್ಶಿಗಳ ಮಟ್ಟದಲ್ಲಿ ಸಭೆ ನಡೆಸಿ ಇತ್ಯರ್ಥಗೊಳಿಸೋಣ. ಇಲ್ಲವಾದರೆ ಮತ್ತಷ್ಟು ವಿಳಂಬವಾಗುತ್ತದೆ ಎಂದು ಹೇಳಿ ಸಭೆಯನ್ನೂ ನಡೆಸಿದರು ಎಂದರು.
ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿ ರಾಜ್ಯ ಸರಕಾರ ಉತ್ತರಿಸಬೇಕು. ನಾನು ಉತ್ತರಿಸುವುದಿಲ್ಲ ಎಂದ ಸಚಿವರು ಮತ್ತೆ ಪ್ರಶ್ನಿಸಿದಾಗ ಜನರಿಗೆ ಮನವರಿಕೆ ಮಾಡುವಲ್ಲಿ ಸರಕಾರ ವಿಫಲವಾಗಿದೆ. 1,300 ಟಿಎಂಸಿ ನೀರು ಮಳೆಗಾಲದಲ್ಲಿ ಸಮುದ್ರ ಸೇರುತ್ತಿದೆ. 10-15 ಟಿಎಂಸಿ ನೀರನ್ನು ಬೇರೆಡೆ ಹರಿಸಿದರೆ ತೊಂದರೆಯಾಗದು ಎಂದು ಅಧ್ಯಯನ ನಡೆಸಿ ನಿರ್ಧರಿಸಲಾಗಿತ್ತು. ನೀರು ಕೊಡುವುದು ಸರಕಾರದ ಕರ್ತವ್ಯ ಎಂದು ಹೇಳಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದ ಕಾರಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದೆ. ಆರೇಳು ಸಾವಿರ ಮತ ಗಳಿಸುತ್ತಿದ್ದ ಬಿಜೆಪಿಗೆ ಈಗ 80,000 ಮತ ಬಿದ್ದಿದೆ. ಒಟ್ಟಾರೆ ಪಕ್ಷದ ವರ್ಚಸ್ಸು ಮತ್ತು ನೆಲೆ ಹೆಚ್ಚಿದೆ ಎಂದು ಡಿ.ವಿ. ಸದಾನಂದ ಗೌಡ ಅವರು ಹೇಳಿದರು.