Advertisement
ಹವಾಮಾನ ಇಲಾಖೆಯ ಅಂಕಿಅಂಶಗಳ ಪ್ರಕಾರ, 2018ರ ಜನವರಿ ತಿಂಗಳಿನಿಂದ ಮೇ 8ರ ವರೆಗೆ ದ.ಕ. ಜಿಲ್ಲೆಯ ಐದು ತಾಲೂಕುಗಳಲ್ಲಿ ಒಟ್ಟು 450.2 ಮಿ.ಮೀ. ನಷ್ಟು ವಾಡಿಕೆ ಮಳೆಯಾಗಬೇಕಿತ್ತು. ಆದರೆ ಈ ಅವಧಿಯಲ್ಲಿ ಒಟ್ಟು 634.7 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದು 461.7 ಮಿ.ಮೀ. ಆಗಿತ್ತು. ಉಡುಪಿ ಜಿಲ್ಲೆಯಲ್ಲಿ ಇದೇ ಅವಧಿಯಲ್ಲಿ 168.1 ಮಿ.ಮೀ. ಮಳೆಯಾಗಬೇಕಿತ್ತು; 301.3 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದು ಕೇವಲ 59.9 ಮಿ.ಮೀ. ಆಗಿತ್ತು.
ಕರಾವಳಿ ಪ್ರದೇಶದಲ್ಲಿ ಮಳೆ ಬಂದರೂ ತಾಪಮಾನದಲ್ಲಿ ಇಳಿಕೆ ಆಗಿಲ್ಲ; ಬದಲಾಗಿ ವಾತಾವರಣದಲ್ಲಿ ತೇವಾಂಶ ಹೆಚ್ಚಿ ಸೆಕೆ ಜಾಸ್ತಿ ಅನುಭವಕ್ಕೆ ಬರುತ್ತಿದೆ. ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ ಗವಾಸ್ಕರ್ ಅವರು ‘ಉದಯವಾಣಿ’ಗೆ ಪ್ರತಿಕ್ರಿಯೆ ನೀಡಿ, ಕರಾವಳಿ ಪ್ರದೇಶದಲ್ಲಿ ಮುಂದಿನ ದಿನಗಳಲ್ಲಿ ಬೆಳಗ್ಗಿನಿಂದ ಮಧ್ಯಾಹ್ನದ ಸಮಯದಲ್ಲಿ ತಾಪಮಾನದಲ್ಲಿ ಹೆಚ್ಚಳವಾಗಲಿದೆ.
Related Articles
Advertisement
ವಾಡಿಕೆಗಿಂತ ಹೆಚ್ಚು ಮಳೆಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಕರಾವಳಿ ಪ್ರದೇಶದಲ್ಲಿ ಈ ವರ್ಷ ಪೂರ್ವ ಮುಂಗಾರಿನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಮುಂದಿನ ಕೆಲವು ದಿನಗಳ ಕಾಲ ಸಂಜೆಯ ವೇಳೆಗೆ ಕರಾವಳಿ ಪ್ರದೇಶದ ಅನೇಕ ಕಡೆಗಳಲ್ಲಿ ಮಳೆಯಾಗಲಿದೆ. ಅಲ್ಲದೆ, ಈಗಾಗಲೇ ‘ಸೌತ್ ಏಶಿಯನ್ ಕ್ಲೈಮೆಟ್ ಔಟ್‌ಲುಕ್ ಪೋರಂ’ ಮಾನ್ಸುನ್ ಬಗ್ಗೆ ವರದಿ ನೀಡಿದ್ದು, ಕರಾವಳಿ ಪ್ರದೇಶದಲ್ಲಿ ವಾಡಿಕೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ಮೇ ತಿಂಗಳ ಕೊನೆಯ ವಾರದಲ್ಲಿ ಹವಾಮಾನ ಇಲಾಖೆ ಮತ್ತೊಂದು ವರದಿಯನ್ನು ಬಿಡುಗಡೆ ಮಾಡಲಿದೆ.
– ಡಾ| ಜಿ.ಎಸ್. ಶ್ರೀನಿವಾಸ ರೆಡ್ಡಿ, ನಿರ್ದೇಶಕ , ಕೆಎಸ್‌ಎನ್‌ಡಿಎಂಸಿ ಸುಳ್ಯ, ಕಾರ್ಕಳದಲ್ಲಿ ಮಳೆ ಪ್ರಮಾಣ ಹೆಚ್ಚಳ
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ತುಲನೆ ಮಾಡಿದರೆ 2018ರ ಜನವರಿಯಿಂದ ಮೇ 8ರ ವರೆಗೆ ಸುಳ್ಯ ತಾಲೂಕಿನಲ್ಲಿ 117.8 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ 190.6 ಮಿ.ಮೀ.. ಮಳೆಯಾಗಿದೆ. ಅಂದರೆ, 72.3 ಮಿ.ಮೀ.ನಷ್ಟು ಮಳೆ ಹೆಚ್ಚಳವಾಗಿದೆ. ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ 77.3 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ 160.7 ಮಿ.ಮೀ. ಮಳೆಯಾಗಿದೆ. ಒಟ್ಟಾರೆ 83.4 ಮಿ.ಮೀ. ಮಳೆ ಹೆಚ್ಚಳವಾಗಿದೆ. ಈ ಬಾರಿಯ ಮಾನ್ಸೂನ್ ಕೂಡ ಉತ್ತಮ
ಹವಾಮಾನ ಇಲಾಖೆಯ ನಿರ್ದೇಶಕ ಡಾ| ಶ್ರೀನಿವಾಸ ರೆಡ್ಡಿ ಉದಯವಾಣಿಗೆ ಪ್ರತಿಕ್ರಿಯೆ ನೀಡಿ ‘ಹವಾಮಾನ ಇಲಾಖೆಯ ಲೆಕ್ಕಾಚಾರದ ಪ್ರಕಾರ ಈ ಬಾರಿ ಕರಾವಳಿ ಪ್ರದೇಶದಲ್ಲಿ ಮುಂಗಾರು ಉತ್ತಮವಾಗಲಿದೆ. ಈ ಬಾರಿ ವಾಡಿಕೆಯಂತೆ ಮಳೆಯಾಗಲಿದ್ದು, ಮೇ ಕೊನೆಯ ವಾರ ಅಥವಾ ಜೂನ್ 2ರ ಒಳಗೆ ಮುಂಗಾರು ಕರ್ನಾಟಕದ ಕರಾವಳಿ ಕಡೆಗೆ ಅಪ್ಪಳಿಸಲಿದೆ ಎಂದು ತಿಳಿಸಿದ್ದಾರೆ. ನವೀನ್ ಭಟ್ ಇಳಂತಿಲ