Advertisement

ಅಂಚೆ ಕಚೇರಿ ಇನ್ನು ಡಿಜಿಟಲ್‌ ಸೇವಾ ಕೇಂದ್ರ; ಇಂಡಿಯಾ ಪೋಸ್ಟ್‌ ಹೊಸ ಹೆಜ್ಜೆ

01:41 AM Nov 23, 2020 | mahesh |

ಮಂಗಳೂರು: ಗ್ರಾಮೀಣ ಭಾಗದ ಜನರು ಪಾನ್‌ ಕಾರ್ಡ್‌, ಪಡಿತರ ಚೀಟಿ, ಚಾಲನಾ ಪರವಾನಿಗೆ, ಪಾಸ್‌ಪೋರ್ಟ್‌ ಇತ್ಯಾದಿಗಳಿಗಾಗಿ ಅರ್ಜಿ ಹಾಕಲು ಇನ್ನು ಮುಂದೆ ವಿವಿಧ ಕಚೇರಿಗಳಿಗೆ ಅಲೆದಾಡಬೇಕಿಲ್ಲ. ಅವರ ವ್ಯಾಪ್ತಿಯ ಅಂಚೆ ಕಚೇರಿಯಲ್ಲಿ ಈ ಎಲ್ಲ ಸೇವೆಗಳು ಲಭ್ಯವಾಗಲಿವೆ.
ಡಿಜಿಟಲ್‌ ಸೇವೆಗಳು ಜನಪ್ರಿಯವಾಗುತ್ತಿರುವ ಮತ್ತು ಕಾಮನ್‌ ಸರ್ವೀಸ್‌ ಸೆಂಟರ್‌ಗಳು ಹೆಚ್ಚು ಪ್ರಚಲಿತವಾಗುತ್ತಿರುವ ಕಾರಣ ಕಂಪ್ಯೂಟರ್‌ ವ್ಯವಸ್ಥೆ ಹೊಂದಿರುವ ಅಂಚೆ ಕಚೇರಿಗಳನ್ನು ಕೂಡ ಇದೇ ಸ್ವರೂಪದಲ್ಲಿ ಜನಹಿತ ಸೇವೆಗೆ ಬಳಸಿಕೊಳ್ಳಲು ಕೇಂದ್ರ ಸರಕಾರ ಉದ್ದೇಶಿಸಿದೆ. ಹೀಗಾಗಿ ಡಿಜಿಟಲ್‌ ಸೇವಾ ಕೇಂದ್ರಗಳು ಅಂಚೆ ಕಚೇರಿಯಲ್ಲಿ ಸಾಕಾರವಾಗಲಿವೆ.

Advertisement

ಯಾವೆಲ್ಲ ಸೇವೆ ಲಭ್ಯ?
ಪಾನ್‌ ಕಾರ್ಡ್‌, ಪಡಿತರ ಚೀಟಿ, ಪಾಸ್‌ಪೋರ್ಟ್‌, ಚಾಲನಾ ಪರವಾನಿಗೆ (ಡಿಎಲ್‌), ಎಲ್‌ಎಲ್‌ಆರ್‌, ಸಂಧ್ಯಾ ಸುರಕ್ಷಾ, ಎಸ್‌ಸಿಎಸ್‌ಎಸ್‌ ಕಾರ್ಡ್‌, ಬಸ್‌, ರೈಲು, ವಿಮಾನ ಟಿಕೆಟ್‌ ಬುಕ್ಕಿಂಗ್‌, ಎನ್‌ಪಿಎಸ್‌/ಎಪಿವೈ/ಜಿಎಸ್‌ಟಿ/ಐಟಿ,ಟಿಡಿಎಸ್‌ ರಿಟರ್ನ್ಸ್ ಸಲ್ಲಿಕೆ, ಜೀವನ್‌ ಪ್ರಮಾಣ್‌, ವಿವಿಧ ಪ್ರಧಾನಮಂತ್ರಿ ಯೋಜನೆಗಳು, ವಿದ್ಯುತ್‌ ಬಿಲ್‌, ನೀರಿನ ಬಿಲ್‌ ಪಾವತಿ, ಮೊಬೈಲ್‌ ರೀಚಾರ್ಜ್‌, ವೋಟರ್‌ ಐಡಿ, ಜನನ/ಮರಣ ಪ್ರಮಾಣ ಪತ್ರ, ಆಯುಷ್ಮಾನ್‌ ಕಾರ್ಡ್‌, ಫಾಸ್ಟಾಗ್‌, ವಿಮಾ ಕಂತು ಪಾವತಿ, ಇಎಂಐ ಪಾವತಿ ಇತ್ಯಾದಿ.

ಜೀವಿತ ಪ್ರಮಾಣ ಪತ್ರ: ಮಂಗಳೂರು ಹಿರಿಮೆ ಪಿಂಚಣಿದಾರರಿಗೆ ಅಂಚೆಯಣ್ಣನೇ ಮನೆ ಬಾಗಿಲಲ್ಲಿ “ಜೀವಿತ ಪ್ರಮಾಣ ಪತ್ರ’ ಒದಗಿಸುವ ಸೌಲಭ್ಯ ಮಂಗಳೂರಿನಲ್ಲೂ ಆರಂಭವಾಗಿದೆ. ರಾಜ್ಯದಲ್ಲಿ ಇಲ್ಲಿಯ ವರೆಗೆ 6,349 ಮಂದಿ ಈ ಸೇವೆ ಪಡೆದಿದ್ದಾರೆ. ಈ ಪೈಕಿ ದ.ಕ. (1,627) ಉತ್ತಮ ಸಾಧನೆ ತೋರಿದ್ದು, ಉಡುಪಿಯಲ್ಲಿ 207 ಮಂದಿ ಪ್ರಮಾಣಪತ್ರ ಪಡೆದಿದ್ದಾರೆ.

ಅಂಚೆ ಕಚೇರಿಗಳಲ್ಲಿ ಡಿಜಿಟಲ್‌ ಸೇವಾ ಕೇಂದ್ರ ಆರಂಭಿಸುವಂತೆ ಕೇಂದ್ರದ ಸಿಎಸ್‌ಐ ಮೂಲಕ ಸೂಚನೆ ಬಂದಿದ್ದು, ಪ್ರಾರಂಭಿಕವಾಗಿ ಕೆಲವು ಕಚೇರಿಯಲ್ಲಿ ಆರಂಭಿಸಲಾಗಿದೆ. ಈ ಮಾಸಾಂತ್ಯಕ್ಕೆ ಶೇ. 50ರಷ್ಟು ಕಚೇರಿಗಳಲ್ಲಿ ಸೇವಾ ಕೇಂದ್ರ ರಚನೆಯಾಗಲಿದೆ. ಇದಕ್ಕಾಗಿ ಸಿಬಂದಿಗೆ ಆನ್‌ಲೈನ್‌ ಮೂಲಕ ತರಬೇತಿ ನಡೆಯುತ್ತಿದೆ.
– ಶ್ರೀಹರ್ಷ, ಹಿರಿಯ ಅಂಚೆ ಅಧೀಕ್ಷಕರು, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next