Advertisement

ದೇವರಿಗೆ ಪಾದಸ್ಪರ್ಶ ಮಾಡಲು ಒಪ್ಪದ ಮಠಾಧೀಶರು

06:45 AM Jan 25, 2019 | Team Udayavani |

ಮೈಸೂರು: ನಡೆದಾಡುವ ದೇವರು, ಡಾ.ಶಿವಕುಮಾರ ಮಹಾಸ್ವಾಮಿಗಳ ಕ್ರಿಯಾ ಸಮಾಧಿ ವೇಳೆ ವೀರಶೈವ ಪರಂಪರೆ ಅನುಸರಿಸಲು ಮಠಾಧೀಶರು ಹಿಂಜರಿದ ಸಂಗತಿ ಬೆಳಕಿಗೆ ಬಂದಿದೆ.

Advertisement

ವೀರಶೈವ ಪರಂಪರೆಯಲ್ಲಿ ಲಿಂಗೈಕ್ಯರಾದವರ ಸಮಾಧಿ ವೇಳೆ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸು ವಾಗ ಅಂತಿಮವಾಗಿ ಲಿಂಗೈಕ್ಯರಾದವರ ತಲೆಯ ಮೇಲೆ ಮಠಾಧೀಶರೊಬ್ಬರು ಪಾದಗಳನ್ನಿಟ್ಟು ಪೂಜೆ ನೆರವೇರಿಸಿದ ಬಳಿಕ ಸಮಾಧಿ ಮಾಡಲಾಗುತ್ತದೆ.

ಶಿವಕುಮಾರ ಸ್ವಾಮಿಗಳ ಕ್ರಿಯಾ ಸಮಾಧಿಯ ವೇಳೆ ಯಾವ್ಯಾವ ವಿಧಿ ವಿಧಾನಗಳನ್ನು ಅನುಸರಿಸಬೇಕು ಎಂಬ ಬಗ್ಗೆ ನಾಡಿನ ವಿವಿಧ ಮಠಾಧೀಶರು ಸಭೆ ಸೇರಿ ಚರ್ಚಿಸಿ ಎಲ್ಲಾ ಕಾರ್ಯವನ್ನು ನಿರ್ಧರಿಸಿದರಾದರೂ ವೀರಶೈವ ಪರಂಪರೆಯಂತೆ ಶಿವಕುಮಾರ ಮಹಾಸ್ವಾಮಿಯವರಿಗೆ ಪಾದ ಸ್ಪರ್ಶ ಮಾಡಲು ಯಾವ ಸ್ವಾಮೀಜಿಯೂ ಒಪ್ಪಲಿಲ್ಲ ಎಂದು ತಿಳಿದುಬಂದಿದೆ.

ಆದರೆ, ಕ್ರಿಯಾ ಸಮಾಧಿ ವೇಳೆ ಪಾದ ಸ್ಪರ್ಶ ಮಾಡದಿದ್ದರೆ ಪರಂಪರೆಗೆ ಲೋಪವಾಗುತ್ತದೆ ಎಂಬ ಮಾತುಗಳೂ ಕೇಳಿ ಬಂದ ಹಿನ್ನೆಲೆಯಲ್ಲಿ ಸುತ್ತೂರು ಮಠಾಧೀಶರಾದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರು ಯಡಿಯೂರು ನಿಂದ ಸಿದ್ಧಲಿಂಗೇಶ್ವರರ ಪಾದುಕೆಗಳನ್ನು ತರಿಸಿ, ಶಿವಕುಮಾರ ಮಹಾಸ್ವಾಮಿಗಳ ತಲೆಯ ಮೇಲಿಟ್ಟು ಪೂಜೆ ಸಲ್ಲಿಸಿದ ನಂತರ ಕ್ರಿಯಾ ಸಮಾಧಿ ಮಾಡಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next