Advertisement

ಶೂ ಧರಿಸಿ ಸನ್ನಿಧಾನಂ ಪ್ರವೇಶಿಸಿದ ಪೊಲೀಸರು!

10:40 AM Dec 19, 2018 | Harsha Rao |

ಶಬರಿಮಲೆ: ಶಬರಿಮಲೆಯ ಅಯ್ಯಪ್ಪ ದೇಗುಲಕ್ಕೆ ನಾಲ್ವರು ತೃತೀಯ ಲಿಂಗಿಗಳು ಭೇಟಿ ನೀಡಿ ದೇವರ ದರ್ಶನವನ್ನು ಮಂಗಳವಾರ ಪಡೆದುಕೊಂಡಿದ್ದಾರೆ. ಆದರೆ ಅವರಿಗೆ ಭದ್ರತೆ ನೀಡಿದ್ದ ಪೊಲೀಸರು ಬೂಟು ಧರಿಸಿಯೇ ದೇಗುಲ ಆವರಣ ಪ್ರವೇಶ ಮಾಡಿದ್ದು ತೀವ್ರ ವಿವಾದ ಹುಟ್ಟುಹಾಕಿದೆ. ನಾಲ್ವರು ತೃತೀಯ ಲಿಂಗಿಗಳು ಬೆಳಗ್ಗೆ 10 ಗಂಟೆ ಸುಮಾರಿಗೆ ಹಲವು ಮಂದಿ ಪೊಲೀಸರ ಭದ್ರಕೋಟೆಯಲ್ಲಿ ದೇಗುಲಕ್ಕೆ ಆಗಮಿಸಿದ್ದಾರೆ.

Advertisement

ಸನ್ನಿಧಾನಂ ವರೆಗೆ ಪೊಲೀಸರು ಬೂಟು ಧರಿಸಿಯೇ ಪ್ರವೇಶಿಸಿದ್ದರು. ಅದನ್ನು ಗಮನಿಸಿದ ಅಯ್ಯಪ್ಪ ಭಕ್ತರು ದೊಡ್ಡ ಧ್ವನಿಯಿಂದ ಆಕ್ಷೇಪ ವ್ಯಕ್ತಪಡಿಸಿದರೂ ಪೊಲೀಸರು ಅದನ್ನು ನಿರ್ಲಕ್ಷಿಸಿದ್ದಾರೆ. ಸನ್ನಿಧಾನಂನಲ್ಲಿ ಭದ್ರತೆಯ ಉಸ್ತುವಾರಿ ಹೊತ್ತಿದ್ದ ಪೊಲೀಸ್‌ ಅಧಿಕಾರಿ ಜಿ.ಜಯದೇವ, ಭದ್ರತೆ ಉಸ್ತುವಾರಿ ಹೊತ್ತಿದ್ದವರಿಂದ ತಪ್ಪಾಗಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಮುಂದಿನ ದಿನಗಳಲ್ಲಿ ಪುನರಾವರ್ತನೆ ಆಗದು ಎಂದು ಭರವಸೆ ನೀಡಿದ್ದಾರೆ.

ಇನ್ನು ತೃತೀಯ ಲಿಂಗಿಗಳು ಬೆಳಗ್ಗೆ 8 ಗಂಟೆಗೆ ಪಂಪಾ ತೀರದಿಂದ ದೇಗುಲಕ್ಕೆ ಪ್ರಯಾಣ ಆರಂಭಿಸಿದ್ದರು. 9.45ರ ವೇಳೆಗೆ ಅವರು 18 ಮೆಟ್ಟಿಲುಗಳನ್ನೇರಿದರು.

Advertisement

Udayavani is now on Telegram. Click here to join our channel and stay updated with the latest news.

Next