Advertisement

Maharashtra: 24 ಗಂಟೆಗಳಲ್ಲಿ ತಲೆಎತ್ತಿತು ಪೊಲೀಸ್‌ ಪೋಸ್ಟ್‌!

01:33 AM Jan 17, 2024 | Team Udayavani |

ಗಡ್ವಿರೋಲಿ: ಈ ಹಿಂದೆ ನಕ್ಸಲರ ಬಿಗಿ ಹಿಡಿತದಲ್ಲಿದ್ದ ಮಹಾರಾಷ್ಟ್ರದ ಗಡ್ವಿರೋಲಿ ಜಿಲ್ಲೆಯ ಗಾರ್ಡೆವಾಡ ಪ್ರದೇಶದಲ್ಲಿ 1,000ಕ್ಕೂ ಹೆಚ್ಚು ಪೊಲೀಸ್‌ ಸಿಬಂದಿ ಸೇರಿಕೊಂಡು ಕೇವಲ 24 ಗಂಟೆಗಳಲ್ಲಿ ಪೊಲೀಸ್‌ ಪೋಸ್ಟ್‌ ಸ್ಥಾಪಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪೊಲೀಸ್‌ ಪೋಸ್ಟ್‌ ಸುಮಾರು 750 ಚದರ ಕಿ.ಮೀ. ಪ್ರದೇಶದಲ್ಲಿ ಕಣ್ಗಾವಲು ಬಲಪಡಿಸಲಿದೆ. ಈ ಸೌಲಭ್ಯವು 1947ರ ಅನಂತರ ಮೊದಲ ಬಾರಿಗೆ ಸೂಕ್ಷ್ಮ ಪ್ರದೇಶದಲ್ಲಿ ಶಾಶ್ವತ ಪೊಲೀಸ್‌ ಉಪಸ್ಥಿತಿಗೆ ದಾರಿ ಮಾಡಿಕೊಡಲಿದೆ.

Advertisement

ನಕ್ಸಲರಿಂದ ಸಂಭಾವ್ಯ ದಾಳಿ ತಪ್ಪಿಸಲು ಹಾಗೂ ನೆಲಬಾಂಬ್‌ಗಳನ್ನು ತೆರವುಗೊಳಿಸಲು 600 ಕಮಾಂಡೊ ಗಳು ಗಾರ್ಡೆವಾಡಾದವರೆಗೆ 60 ಕಿ.ಮೀ. ವರೆಗೆ ನಡೆದು ಕೊಂಡು ಹೋಗಿ, ಸುರಕ್ಷೆಯನ್ನು ಖಾತರಿಪಡಿಸಿದರು. 1,000ಕ್ಕೂ ಹೆಚ್ಚು ಪೊಲೀಸ್‌ ಸಿಬಂದಿ ಸೇರಿಕೊಂಡು ಕೇವಲ 24 ಗಂಟೆಗಳಲ್ಲಿ ಪೊಲೀಸ್‌ ಪೋಸ್ಟ್‌ ನಿರ್ಮಿಸಿದರು. ಇದಕ್ಕಾಗಿ 10 ಜೆಸಿಬಿ, 10 ಟ್ರೈಲರ್‌, 4 ಪೊಕ್ಲೈನ್‌ ಯಂತ್ರಗಳನ್ನು ಬಳಸಲಾಗಿದೆ ಎಂದು ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next