Advertisement

Navy ಸೆರೆ ಹಿಡಿದಿದ್ದ ಕಡಲ್ಗಳ್ಳರು ಮುಂಬಯಿ ಪೊಲೀಸ್‌ ವಶಕ್ಕೆ

01:06 AM Apr 05, 2024 | Team Udayavani |

ಹೊಸದಿಲ್ಲಿ: ಕಳೆದವಾರ ಸೊಮಾಲಿಯಾ ಸಮುದ್ರ ತೀರದಲ್ಲಿ ಕೈಗೊಳ್ಳಲಾಗಿದ್ದ ರಕ್ಷಣ ಕಾರ್ಯಾಚರಣೆ ವೇಳೆ ಸೆರೆಹಿಡಿಯ ಲಾ ಗಿದ್ದ 9 ಮಂದಿ ಕಡಲ್ಗಳ್ಳರನ್ನು ಭಾರತೀಯ ನೌಕಾಪಡೆಯು ಮುಂಬಯಿ ಪೊಲೀಸರ ವಶಕ್ಕೆ ನೀಡಿದೆ. ಐಎನ್‌ಎಸ್‌ ತ್ರಿಶೂಲ್‌ ನೌಕೆ ಎ.3ರಂದು ಮುಂಬಯಿಗೆ ಬಂದಿದ್ದು, ಪೊಲೀಸರ ವಶಕ್ಕೆ ನೀಡಲಾಗಿದೆ. ಮಾ.29ರಂದು ಕಡಲ್ಗಳ್ಳರು ಪಾಕಿಸ್ಥಾನ ಮೂಲದ ಹಡಗಿನ ಮೇಲೆ ದಾಳಿ ಮಾಡಿದ್ದರು. ಈ ವೇಳೆ, ಭಾರತೀಯ ನೌಕಾಪಡೆ ಯೋಧರು ಕಾರ್ಯಾಚರಣೆ ನಡೆಸಿ 23 ಪಾಕಿಸ್ಥಾನೀಯರನ್ನು ರಕ್ಷಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next