Advertisement
ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ರಾಜ್ಯ ರಾಜಕಾರಣದಲ್ಲಿಮುಳುಗಿ ಹೋಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಅವರು ಕ್ಷೇತ್ರವನ್ನು ಮರತೇ ಬಿಟ್ಟಿದ್ದಾರೆ. ಇದರಿಂದ ಕ್ಷೇತ್ರದಲ್ಲಿ ಜನರ ಸಮಸ್ಯೆ ಕೇಳುವವರು ಇಲ್ಲದಂತಾಗಿದೆ.ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ತಾಲೂಕು ಕಚೇರಿಯಲ್ಲಿ ಅಧಿಕಾರಿಗಳು ಜನರಿಗೆ ಸ್ಪಂದಿಸುತ್ತಿಲ್ಲ.ಯಾವುದೇ ಕೆಲಸ-ಕಾರ್ಯಗಳನ್ನು ಮಾಡಿ ಕೊಡಬೇಕಾದರೆ ಜನರು ಹತ್ತಾರು ಬಾರಿ ಅಲೆದಾಡುವಂತಾಗಿದೆ ಎಂದರು.
Related Articles
Advertisement
ರೈತರ ಮೇಲೆ ದೌರ್ಜನ್ಯ: ತಾಲೂಕಿನ ರೇಷ್ಮೆ ಮಾರುಕಟ್ಟೆಯಲ್ಲಿ ರಾಜಕಾರಣಿಗಳ ಬೆಂಬಲಿಗರಿಂದಲೇ ರೈತರಿಗೆ ದೌರ್ಜನ್ಯ ಅನ್ಯಾಯ ನಡೆಯುತ್ತಿದೆ. ಇಲ್ಲಿನ ಕೆಲ ರೀಲರ್‌ಗಳು ರೈತರಮೇಲೆ ದೌರ್ಜನ್ಯ ದಬ್ಟಾಳಿಕೆ ಮಾಡುತ್ತಿದ್ದಾರೆ. ರಾಜಕಾರಣಿಗಳ ಬೆಂಬಲಿಗರ ದೌರ್ಜನ್ಯ ದಬ್ಬಾಳಿಕೆಗೆಬೇಸತ್ತು ರೈತರು ಹಲವು ಬಾರಿ ಬೀದಿಗಿಳಿದುಹೋರಾಟ ಮಾಡಿದ್ದಾರೆ. ಆದರೂ, ಸ್ಥಳೀಯಜನಪ್ರತಿನಿಧಿಗಳು ಮಾತ್ರ ರೈತರ ಸಮಸ್ಯೆಗಳನ್ನುಬಗೆಹರಿಸುವುದಿರಲಿ, ಸೌಜನ್ಯಕ್ಕಾದರೂ ರೇಷ್ಮೆಮಾರುಕಟ್ಟೆಗೆ ಭೇಟಿ ನೀಡಿ ರೈತರ ಸಮಸ್ಯೆಗಳೆನ್ನು ಎಂದು ಇದುವರೆಗೂ ಕೇಳಲಿಲ್ಲ. ಕಂಡು ಕಾಣದಂತೆವರ್ತಿಸುತ್ತಿದ್ದಾರೆ. ಇದರ ವಿರುದ್ಧ ಮುಂದೆಪ್ರತಿಭಟನೆಗೂ ಸಿದ್ಧರಿದ್ದೇವೆ. ಕ್ಷೇತ್ರದ ಜನರ ಸಮಸ್ಯೆ ಬಗೆಹರಿಯಬೇಕಾದರೆ ಬದಲಾವಣೆಯಿಂದ ಮಾತ್ರ ಸಾಧ್ಯ. ಮುಂದಿನ ಚುನಾವಣೆಯಲ್ಲಿ ಅದು ಆಗಬೇಕು ಎಂದರು.
ಬಿಜೆಪಿ ಮಾಜಿ ಪ್ರಧಾನ ಕಾರ್ಯದರ್ಶಿ ಇಲಿಯಾಸ್ ಶರೀಫ್, ಉಯ್ಯಂಬಳ್ಳಿ ಶಿವು, ಉದಾರಹಳ್ಳಿ ಶ್ರೀನಿವಾಸ್, ಮುನಿರಾಜು,ಮಂಜುನಾಥ್, ಮರಿಗೌಡ, ಮುತ್ತು ರಾಮಶೆಟ್ಟಿ, ಉಮೇಶ್, ಕೋಟೆ ಕೊಪ್ಪ ಕೃಷ್ಣ, ಸುಮಂತ, ದೊಡ್ಡೇಗೌಡ, ಹೆಗ್ಗನೂರು ಉಮೇಶ್, ಉಯ್ಯಂಬಳ್ಳಿ ಲೋಕೇಶ್, ಶಿವರಾಜು ಹಾಗೂ ಮತ್ತಿತರರು ಇದ್ದರು.
ನರೇಗಾದಲ್ಲಿ 31 ಕೋಟಿ ರೂ. ಹಣ ದುರ್ಬಳಕೆ: ಬಿಜೆಪಿ ಶೇ.40ರಷ್ಟು ಸರ್ಕಾರ ಎಂದು ಟೀಕಿಸುತ್ತಿರುವ ಶಾಸಕ ಡಿ.ಕೆ. ಶಿವಕುಮಾರ್ ನರೇಗಾ ಯೋಜನೆಯಲ್ಲಿ ದೇಶಕ್ಕೆ ಮಾದರಿ ಎಂದು ಹೇಳಿಕೊಳ್ಳುವ ತಮ್ಮ ಕ್ಷೇತ್ರದಲ್ಲೇ ನರೇಗಾಹಣ ದುರ್ಬಳಕೆ ಆಗುತ್ತಿದೆ. ಈ ಹಿಂದೆತೋಕಸಂದ್ರ ಗ್ರಾಮ ಪಂಚಾಯಿತಿಯಲ್ಲಿ ನಡೆದ ಸಾಮಾಜಿಕ ಲೆಕ್ಕಪರಿಶೋಧನಾ ಗ್ರಾಮಸಭೆಯಲ್ಲಿಅಧಿಕಾರಿಯೊಬ್ಬರು ತಾಲೂಕಿನಲ್ಲಿ ನರೇಗಾ ಯೋಜನೆಯಲ್ಲಿ 31 ಕೋಟಿ ರೂಪಾಯಿ ದುರ್ಬಳಕೆಯಾಗಿದೆ ಎಂದು ಸಾರ್ವಜನಿಕ ಸಭೆಯಲ್ಲಿ ಬಹಿರಂಗ ಮಾಡಿದ್ದಾರೆ. ತಾಲೂಕಿನ ಬಹುತೇಕ ಗ್ರಾಪಂಗಳಲ್ಲಿ ಡಿಕೆಶಿ ಬೆಂಬಲಿಗರೇ ಅಧಿಕಾರದಲ್ಲಿದ್ದಾರೆ. ಯಾರಿಂದ ಹಣ ದುರ್ಬಳಕೆಯಾಗಿದೆ ಇದಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳು ಯಾವ ಕ್ರಮ ಕೈಗೊಂಡಿದ್ದಾರೆ. ಇದರ ಬಗ್ಗೆ ಸಂಪೂರ್ಣವಾಗಿ ತನಿಖೆ ನಡೆಸಬೇಕು. ದುರ್ಬಳಕೆಯಾಗಿರುವ ಹಣವನ್ನು ಸರ್ಕಾರಕ್ಕೆ ಮರುಪಾವತಿ ಮಾಡಿ ದುರ್ಬಳಕೆ ಮಾಡಿಕೊಂಡಿರುವ ಅಧಿಕಾರಿಗಳು ಮತ್ತುಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ನಂದಿನಿಗೌಡ ಆಗ್ರಹಿಸಿದರು.