ಬಾಗಲಕೋಟೆ: ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಕ್ವಿಟ್ ಇಂಡಿಯಾ ಚಳವಳಿಯನ್ನು ಮುನ್ನಡೆಸಿದ್ದರು. ಅವರು ಭಾರತ ಗಣರಾಜ್ಯ ಸ್ಥಾಪನೆ ಮತ್ತು ಏಕೀಕರಣದಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದ್ದಾರೆ. ಭಾರತದ ಮೊದಲ ಉಪ ಪ್ರಧಾನಿ, ಮೊದಲ ಗೃಹ ಸಚಿವರಾಗಿ ಕಾರ್ಯ ನಿರ್ವಹಿಸಿ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ. ನಂಜ್ಯಯನಮಠ ಹೇಳಿದರು.
ನಗರದ ಕಾಂಗ್ರೆಸ್ ಜಿಲ್ಲಾ ಕಾರ್ಯಾಲಯದಲ್ಲಿ ರವಿವಾರ ಹಮ್ಮಿಕೊಂಡಿದ್ದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜಯಂತಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾಜಿ ಸಚಿವ ಎಚ್.ವೈ. ಮೇಟಿ ಮಾತನಾಡಿ, ಭಾರತದ ಪ್ರಧಾನ ಮಂತ್ರಿಗಳಾಗಿ ಹಲವಾರು ಕ್ರಾಂತಿಕಾರಕ ಯೋಜನೆಗಳು, ದಿಟ್ಟ ನಿರ್ಧಾರಗಳ ಮೂಲಕ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣರಾದರು. ಕೇಂದ್ರ ಸರ್ಕಾರದ ಹಲವಾರು ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದ ಉಕ್ಕಿನ ಮಹಿಳೆ, ಭಾರತ ರತ್ನ ಇಂದಿರಾ ಗಾಂಧಿ ಅವರ ಪುಣ್ಯಸ್ಮರಣೆಯಂದು ಅವರನ್ನು ಗೌರವ ಹಾಗೂ ಕೃತಜ್ಞತಾ ಪೂರ್ವಕವಾಗಿ ನೆನೆಯೋಣ ಎಂದರು.
ಕೆಪಿಸಿಸಿ ಸದಸ್ಯ ನಿಂಗನಗೌಡ ಪಾಟೀಲ, ಜಿಲ್ಲಾ ಮಾಧ್ಯಮ ವಕ್ತಾರ ನಾಗರಾಜ ಹದ್ಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆನಂದ ಶಿಲ್ಪಿ, ಕುತುಬುದಿನ್ ಖಾಜಿ ವಿಜಯ ಕಮತಗಿ, ಎನ್.ಬಿ.ಗಸ್ತಿ, ಕಾಂಗ್ರೆಸ್ ಪಕ್ಷದ ಬ್ಲಾಕ್‌ನ ಅಧ್ಯಕ್ಷ ಎಸ್.ಎನ್. ರಾಂಪುರ, ಹಾಜಿಸಾಬ ದಂಡಿನ, ಮುತ್ತು ಜೋಳದ, ನಗರಸಭೆಯ ಸದಸ್ಯ ಚೆನ್ನವೀರ ಅಂಗಡಿ, ಮುಖಂಡರಾದ ಅಮಿನಸಾಬ ನಧಾಪ, ವೆಂಕಟೇಶ ಜಂಬಗಿ, ಮುಖಂಡರಾದ ಮಂಜುಳಾ ಭುಸಾರೆ, ಶಶಿಕಾಂತ ಪೂಜಾರಿ, ಮಲ್ಲು ಶಿರೂರ, ಶ್ರವಣ ಖಾತೆದಾರ, ಸುರೇಶ ಝಿಂಗಾಡೆ, ರೇಣುಕಾ ನ್ಯಾಮಗೌಡ, ಇಮಾಮಸಾಬ ಬಳಬಟ್ಟಿ, ರಜಾಕ್ ಬೇಣೂರ, ತೌಸೀಪ ಬಾಗಲವಾಡ, ಮುಮತಾಜ ಸುತಾರ, ಜಮೇಲಾ ಮನಿಯಾರ, ಮಂಜುನಾಥ ಬೀರಣ್ಣವರ, ಮಲ್ಲಿಕಾರ್ಜುನ ಮೇಟಿ, ಶಾಂತಾ ಸೋಮಾಪುರ, ಜೈಬುನಿ ಇಲಕಲ್ಲ, ಅನುಪಮಾ ಅಕ್ಕಿ, ರೇಣುಕಾ ನಾರಾಯಣಕರ, ಸಾವಿತ್ರಿ ಗೋಲಪ್ಪನವರ, ಲ ಕ್ಷ್ಮೀ ಹೊಸಮನಿ, ದಾನಮ್ಮ ಹಾದಿಮನಿ ಉಪಸ್ಥಿತರಿದ್ದರು.