Advertisement

“ಸರಕಾರಿ’ಹೆಸರಲ್ಲಿ ಪಕ್ಷ ಪ್ರಚಾರ ಸಂವಿಧಾನ ಬಾಹಿರ: ಬಿಜೆಪಿ

09:24 AM Jan 09, 2018 | |

ಕುಂದಾಪುರ: ರಾಜ್ಯ ಸರಕಾರದ ಸಾಧನಾ ಸಮಾವೇಶ ಎಂಬುದಾಗಿ ಬಿಂಬಿಸುತ್ತಾ, ಸರಕಾರಿ ಎಂಬ ಹೆಸರಿನಲ್ಲಿ ಪಕ್ಷದ ಪ್ರಚಾರ ಕಾರ್ಯ ನಡೆಸುತ್ತಿರುವುದು ಸಂವಿಧಾನ ಬಾಹಿರವಾಗಿದೆ. ಸರಕಾರಿ ಹೆಸರಿನ ಕಾರ್ಯಕ್ರಮದಲ್ಲಿ ಪ್ರಧಾನಿ, ಕೇಂದ್ರ ಸಚಿವರು, ಸಂಸದರನ್ನು ಟೀಕಿಸುವುದು ಸರಿಯಲ್ಲ ಎಂದು ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಶೆಟ್ಟಿ ಹೇಳಿದರು.

Advertisement

ಹೆಮ್ಮಾಡಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಚಾರಕ್ಕೆ ಕಾಂಗ್ರೆಸ್‌ ಅಧಿಕಾರ ದುರ್ಬಳಕೆ ಮಾಡುತ್ತಿದೆ. 250 ಕೆಎಸ್‌ಆರ್‌ಟಿಸಿ ಬಸ್‌ ಬಳಕೆ ಮಾಡುತ್ತಿದೆ. ಪಿಡಿಒಗಳಿಗೆ ಜನ ಕರೆತರಲು, ಮೀನುಗಾರರಿಗೆ ಬರಲು ಒತ್ತಡ ಹಾಕಿದ್ದಾರೆ. ಕಲ್ಲಡ್ಕ ಶಾಲೆಗೆ ಬಿಸಿಯೂಟ ಸ್ಥಗಿತಗೊಳಿಸಿದ ಸಿಎಂ ಸಿದ್ದರಾಮಯ್ಯ ಈಗ ಸಾಧನಾ ಸಮಾವೇಶಕ್ಕೆ ಅಲ್ಲಿಂದ ಊಟ ತರಿಸಿರುವುದು ಸರಿಯೇ ಎಂದವರು ಪ್ರಶ್ನಿಸಿದರು. 

ಬಿಜೆಪಿ ಅವಧಿಯಲ್ಲಿ ಮಂಜೂರಾದ ಯೋಜನೆಗಳನ್ನು ಕಾಂಗ್ರೆಸ್‌ ಈಗ ಮತ್ತೆ ತನ್ನದೆಂದು ಬಿಂಬಿಸಿ ಉದ್ಘಾಟಿಸುತ್ತಿದೆ. ಈ ಬೊಗಳೆ ಸರಕಾರಕ್ಕೆ ಜನ ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸಲಿದ್ದಾರೆ ಎಂದರು. ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಬಿ.ಎಂ. ಸುಕುಮಾರ ಶೆಟ್ಟಿ, ಜಿಲ್ಲಾ ಪ್ರ. ಕಾರ್ಯದರ್ಶಿ ಸಂಧ್ಯಾ ರಮೇಶ್‌, ಬೈಂದೂರು ಕ್ಷೇತ್ರಾಧ್ಯಕ್ಷ ಸದಾನಂದ ಉಪ್ಪಿನಕುದ್ರು, ಕಾರ್ಯದರ್ಶಿ ಬಾಲಚಂದ್ರ ಭಟ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next