Advertisement
ಪ್ರಧಾನಿ ನರೇಂದ್ರ ಆಗಮನ ಹಿನ್ನೆಲೆಯಲ್ಲಿ ರವಿವಾರ ಎಚ್ ಕೆಸಿಸಿಐ ಸಭಾಂಗಣದಲ್ಲಿ ಬಿಜೆಪಿ ಪಕ್ಷದ ಶಾಸಕರ, ಮುಖಂಡರ, ಪದಾಧಿಕಾರಿಗಳ ಹಾಗೂ ಅಭಿಮಾನಿಗಳ ಪೂರ್ವಭಾವಿ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
Related Articles
Advertisement
ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗಿಂತ ಸಾರ್ವಜನಿಕರೇ ದೇಶದ ಭದ್ರತೆ ದೃಷ್ಟಿಯಿಂದ ಮೋದಿ ಇನ್ನೊಮ್ಮೆ ಪ್ರಧಾನಿ ಆಗಬೇಕು ಎನ್ನುತ್ತಿದ್ದಾರೆ. ಹೀಗಾಗಿ ಪಕ್ಷದವರೆಲ್ಲರೂ ಸ್ವಲ್ಪವೂ ಹಿಂದೆ ಬೀಳಬಾರದು. ಆದ್ದರಿಂದ ಇಂದಿನಿಂದ ಮಾರ್ಚ್ 1ರ ವರೆಗೆ ವಿಶ್ರಮಿಸದೇ ಎಲ್ಲ ಹಂತದ ಸಿದ್ಧತೆಗಳಲ್ಲಿ ತೊಡಗಿಸಿಕೊಳ್ಳಬೇಕು. ಕಟಿಂಗ್ಸ್, ಬ್ಯಾನರ್, ಜಾಹೀರಾತು ಬಳಸಬೇಕೆಂದು ಸಲಹೆ ನೀಡಿದರು.
ಸಭೆಯಲ್ಲೇ ಕಲಬುರಗಿ, ಬೀದರ್ ಹಾಗೂ ಯಾದಗಿರಿ ಜಿಲ್ಲೆಯ ಕ್ಷೇತ್ರವಾರು ಜನರು ಮೋದಿ ರ್ಯಾಲಿಗೆ ಬರುವವರ ಸಂಖ್ಯೆಯನ್ನು ತಾಳೆ ಹಾಕಲಾಯಿತು. ಒಂದೂವರೆ ಲಕ್ಷ ಜನರು ಬರುವ ಬಗ್ಗೆ ಅಭಿಪ್ರಾಯ ವ್ಯಕ್ತವಾಯಿತು.
ಸಂಸದ ಭಗವಂತ ಖೂಬಾ, ಶಾಸಕರಾದ ರಘುನಾಥ ಮಲ್ಕಾಪುರೆ, ಬಿ.ಜಿ. ಪಾಟೀಲ, ದತ್ತಾತ್ರೇಯ ಪಾಟೀಲ ರೇವೂರ, ರಾಜಕುಮಾರ ಪಾಟೀಲ್ ತೇಲ್ಕೂರ, ಬಸವರಾಜ ಮತ್ತಿಮಡು, ವೆಂಕಟರೆಡ್ಡಿ ಮುದ್ನಾಳ, ಪ್ರಭು ಚವ್ಹಾಣ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುವರ್ಣಾ ಮಲಾಜಿ, ಮಾಜಿ ಸಚಿವರಾದ ಮಾಲೀಕಯ್ಯ ಗುತ್ತೇದಾರ, ಬಾಬುರಾವ್ ಚಿಂಚನಸೂರ, ಸುನೀಲ ವಲ್ಲಾಪುರೆ, ಬಾಬುರಾವ ಚವ್ಹಾಣ, ಮಾಜಿ ಶಾಸಕರಾದ ವಿಶ್ವನಾಥ ಪಾಟೀಲ ಹೆಬ್ಟಾಳ, ವಾಲ್ಮೀಕಿ ನಾಯಕ, ಅಮರನಾಥ ಪಾಟೀಲ್, ಮುಖಂಡರಾದ ಚಂದು ಪಾಟೀಲ, ಡಿ.ಕೆ. ಸಿದ್ರಾಮ, ನಾಗರತ್ನ ಕುಪ್ಪಿ, ಬೀದರ್ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ| ಶೈಲೇಂದ್ರ ಬೆಲ್ದಾಳೆ ಮುಂತಾದವರಿದ್ದರು.
ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಸ್ವಾಗತಿಸಿದರು. ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ಬಿರಾದಾರ ಕಮಲಾಪುರ ನಿರೂಪಿಸಿದರು.
ಪೂರ್ವಭಾವಿ ಸಭೆ ನಂತರ ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆಯಲ್ಲಿ ರ್ಯಾಲಿ ಆಯೋಜಿಸುವ ಸ್ಥಳವನ್ನು ಅದರಲ್ಲೂ ಪ್ರಮುಖವಾಗಿ ಜಿಲ್ಲಾ ಪೊಲೀಸ್ ಇಲಾಖೆ ಪರೇಡ್ ಮೈದಾನದ ಸ್ಥಳವನ್ನು ಆರ್. ಅಶೋಕ ವೀಕ್ಷಿಸಿದರು. ಪೊಲೀಸ್ ಪರೇಡ್ ಮೈದಾನವೇ ಅತ್ಯಂತ ಸುರಕ್ಷತೆ ಹಾಗೂ ಸೂಕ್ತವಾಗಿದೆ ಎಂದು ಒಮ್ಮತಕ್ಕೆ ಬರಲಾಯಿತು