Advertisement
ಗೋವಾ ರಾಜ್ಯ ಸರ್ಕಾರ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಇಂಟನ್ರ್ಯಾಷನಲ್ ಸೆಂಟರ್ ಫಾರ್ ಕಲ್ಚರಲ್ ಸ್ಟಡೀಸ್ ಮತ್ತು ಭಾರತೀಯ ವಿದ್ಯಾ ಭವನ, ನವದೆಹಲಿ ಈ ಸಂಸ್ಥೆಗಳ ಸಂಯುಕ್ತ ಸಹಯೋಗದೊಂದಿಗೆ ಆಯೋಜಿಸಿದ್ದ ಸಿ 20 ಪರಿಷತ್ತಿನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ದಾಬೋಲಿ, ವಾಸ್ಕೊ, ಗೋವಾದ ರಾಜಹಂಸ ನೌದಳ ಸಭಾಗೃಹದಲ್ಲಿ, ವಿವಿಧತೆ, ಸಮಾವೇಶಕತೆ ಮತ್ತು ಪರಸ್ಪರ ಗೌರವ ಈ ವಿಷಯದ ಬಗ್ಗೆ ಸಿ 20 ಪರಿಷತ್ತಿಗೆ ದೇಶ ವಿದೇಶದಿಂದ ಬಂದಿರುವ ಗೌರವಾನ್ವಿತರು ಮತ್ತು 350 ಕೂ ಹೆಚ್ಚಿನ ವಿಶೇಷಜ್ಞರು ಉಪಸ್ಥಿತರಿದ್ದರು.
Related Articles
ಇಂದು ಜಗತ್ತಿನಲ್ಲಿ ಸಂಘರ್ಷ, ಭಯೋತ್ಪಾದನೆ ಮತ್ತು ಅರಾಜಕತೆಯ ವಾತಾವರಣವಿದೆ. ಮನುಷ್ಯ ನಿಸರ್ಗದ ಮಾಲಿಕನಾಗಿದ್ದಾನೆ. ಕಮ್ಯುನಿಸ್ಟ್, ಬಂಡವಾಳಶಾಹಿ ಮತ್ತು ವ್ಯಾಪಾರಿಕರಣದಿಂದ ಜಗತ್ತಿನಾದ್ಯಂತ ಅಗೌರವ, ಹಾಗೂ ವಿಶಿಷ್ಟ ವರ್ಗವನ್ನು ಬಹಿಷ್ಕರಿಸುವ ಪ್ರವೃತ್ತಿ ಹೆಚ್ಚಿದೆ. ಜಗತ್ತಿನಲ್ಲಿ ಹೆಚ್ಚಿರುವ ಈ ಸಂಘರ್ಷ ತ್ಯಾಗ, ತಪ, ಕರುಣೆ ಮತ್ತು ಪ್ರೇಮ ಇವುಗಳಿಂದ ನಷ್ಟವಾಗಬಹುದು. ಭಾರತೀಯ ಋಷಿಮುನಿಗಳು ಪ್ರತಿಪಾದಿಸಿರುವ ಕಲಿಕೆಯಿಂದ ಭಾರತ ಜಗತ್ತಿಗೆ ಮಾರ್ಗದರ್ಶನ ಮಾಡಬಹುದು. ಆಧ್ಯಾತ್ಮಿಕ ಮಾರ್ಗದಲ್ಲಿ ಜಗತ್ತಿನಲ್ಲಿ ಎಲ್ಲಾ ಸಮಸ್ಯೆಗಳಿಗೆ ಉಪಾಯ ಹುಡುಕುವ ಕ್ಷಮತೆ ಇದೆ. ನಾವು ಶ್ರದ್ಧೆಯುಳ್ಳವರು (ಬಿಲಿವರ್ಸ್) ಮತ್ತು ಅಶ್ರದ್ದೆ (ನಾನ್ ಬಿಲಿವರ್ಸ್) ಇವರಲ್ಲಿ ಜಗತ್ತನ್ನು ವಿಭಜಿಸಬಾರದು, ಎಂದು ಸಿ 20 ಪರಿಷತ್ತಿನ ಅಂತರಾಷ್ಟ್ರೀಯ ಸಮನ್ವಯಕರಾದ ಡಾ. ಶಶೀಬಾಲಾ ಇವರು ಪ್ರತಿಪಾದಿಸಿದರು.
Advertisement
ದೇವಸ್ಥಾನದಲ್ಲಿನ ಸಕಾರಾತ್ಮಕ ಊರ್ಜೆಯು ಎಲ್ಲರ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ ! – ಶ್ವೇತಾ ಕ್ಲಾರ್ಕ್ಭಾರತದಲ್ಲಿನ ದೇವಸ್ಥಾನಗಳು ಭಾರತದ ಗೌರವಶಾಲಿ ಪರಂಪರೆಗೆ ಮೂರ್ತಿರೂಪ ನೀಡಿದೆ, ಜೊತೆಗೆ ಭಾರತದ ಸಮೃದ್ಧ ಸಾಂಸ್ಕೃತಿಕ ಸಾಕ್ಷಿ ನೀಡುತ್ತದೆ. ದೇವಸ್ಥಾನದ ಅದ್ವಿತೀಯತೆಯ ಬಗ್ಗೆ ಮಾಹಿತಿ ನೀಡುವಾಗ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಶೋಧನಾ ಸಮನ್ವಯಕರಾದ ಶ್ವೇತಾ ಕ್ಲಾರ್ಕ್ ಇವರು ಧನಬಾದ್(ಜಾಖರ್ಂಡ್) ಇಲ್ಲಿಯ ಸ್ವಯಂಭೂ ಮಹಾದೇವ ದೇವಸ್ಥಾನದಲ್ಲಿನ ತಮ್ಮ ಸ್ವಂತದ ಅನುಭವ ಹಂಚಿಕೊಂಡರು. ಶ್ವೇತಾ ಇವರು, ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರ ಮೇಲೆ ಅವರು ಯಾವುದೇ ಧರ್ಮದವರಾಗಿರಲಿ ಅಲ್ಲಿಯ ಸಕಾರಾತ್ಮಕ ಊರ್ಜೆಯು ಅವರ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ, ಇದು ಯೂನಿವರ್ಸಲ್ ಔರಾ ಸ್ಕ್ಯಾನರ್ ಈ ವೈಜ್ಞಾನಿಕ ಉಪಕರಣದ ಮೂಲಕ ನಡೆಸಿರುವ ಪ್ರಯೋಗದಲ್ಲಿ ಸಿದ್ದವಾಗಿದೆ ಎಂದರು. ಈ ವೇಳೆ ಪ್ರತಿಷ್ಠಿತ ಗೌರವಾನ್ವಿತರಲ್ಲಿ ಸಿಂಗಾಪೂರ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ, ಸಮೂಹದ ಸದಸ್ಯರಾದ ಮನೀಶ ತ್ರಿಪಾಠೀ, ಪ್ರಾಚೀನ ಪರಂಪರೆ ಮತ್ತು ತಂತ್ರಜ್ಞಾನದ ಮೂಲಕ ಮಾನವೀಯತೆಯ ಸಾಮೂಹಿಕ ಚೇತನ ಹೆಚ್ಚಿಸುವ ಅಜಿತ ಪದ್ಮನಾಭ, ಗೋವಾದ ಶ್ರೀನಿವಾಸ್ ಸಿನಾಯಿ ಟೆಂಪೋ ಕಾಲೇಜ್ ಆಫ್ ಕಾಮರ್ಸ್ ಅಂಡ್ ಎಕನಾಮಿಕ್ಸ್‍ನ ಪ್ರಾಚಾರ್ಯ ಹಾಗೂ ಸಾಹಿತಿ, ಲೇಖಕ ಪ್ರಾ.(ಡಾ.) ಮನೋಜ ಕಾಮತ್, ಗೋವಾ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಮಹೇಶ ಪಾಟೀಲ, ಸಂತ ಈಶ್ವರ್ ಫೌಂಡೇಶನ್‍ನ ರಾಷ್ಟ್ರೀಯ ಸಚಿವ ವೃಂದಾ ಖನ್ನಾ, ಆಯುರ್ವೇದ ಮತ್ತು ನಿಸರ್ಗೋಪಚಾರ ತಜ್ಞ ಡಾ. ನಿಶಿ ಭಟ್ಟ, ಪಾರ್ಕ್ ಹಾಸ್ಟೆಲ್‍ನ ಮಹಾವ್ಯವಸ್ಥಾಪಕರಾದ ಸೌರಭ ಖನ್ನಾ ಮತ್ತಿತರರು ಉಪಸ್ಥಿತರಿದ್ದರು. ಇದನ್ನೂ ಓದಿ : Car Accident: ಶೀಘ್ರದಲ್ಲಿ ಮದುವೆಯಾಗಲಿದ್ದ ಖ್ಯಾತ ನಟನ ಕಾರು ಅಪಘಾತ