Advertisement

ಕೋರೆಗಾಂವ ಹಿಂಸಾಚಾರ ಖಂಡಿಸಿ ಮೆರವಣಿಗ

10:06 AM Jan 09, 2018 | Team Udayavani |

ಕಲಬುರಗಿ: ಪುಣೆಯ ಭೀಮಾ ಕೋರೆಗಾಂವ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಹಿಂದೂ ಏಕತಾ ಆಘಾಡಿ ಪ್ರಮುಖರನ್ನು
ಬಂಧಿಸಬೇಕು ಹಾಗೂ ಹಿಂದೂ ಪರ ಸಂಘಟನೆಗಳನ್ನು ನಿಷೇಧಿಸಬೇಕೆಂಬ ಬೇಡಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಒಕ್ಕೂಟದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

Advertisement

ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ, ಜಿಗ್ನೇಶ ಮೇವಾನಿ ಮತ್ತಿತರರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಬೇಷರತ್ತಾಗಿ ಹಿಂದೆ ಪಡೆಯಬೇಕು. ಕೋರೆಗಾಂವ ಹಿಂಸಾಚಾರ ತಡೆಯಲು ವಿಫಲರಾದ ಜಿಲ್ಲಾಧಿಕಾರಿ ಹಾಗೂ ಎಸ್‌ಪಿ ಅವರನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು. 

ಹಿಂದೂ ಪರ ಕೋಮುವಾದಿ ಸಂಘಟನೆಗಳನ್ನು ನಿಷೇಧಿಸುವಂತೆ ಹಾಗೂ ಮಹಾರಾಷ್ಟ್ರದ ದಲಿತ ಸಮುದಾಯಕ್ಕೆ ಸೂಕ್ತ ರಕ್ಷಣೆ ನೀಡಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಡಾ| ಮಲ್ಲೇಶ ಸಜ್ಜನ, ಮರೆಪ್ಪ ಹಳ್ಳಿ, ಶಿವಯೋಗಿ ಕೊಲ್ಲೂರ, ಅರ್ಜುನ ಭದ್ರೆ, ಮಲ್ಲಿಕಾರ್ಜುನ ಕ್ರಾಂತಿ, ಮಹಾಂತೇಶ ಬಡದಾಳ, ಶಿವಶರಣಪ್ಪ ಕುರನಳ್ಳಿ, ಶಾಮರಾವ ಹರಸೂರ, ಶ್ರೀನಿವಾಸ ಖೇಳಗಿ, ಸಂಜು ಮಾಲೆ, ಶಿವಾನಂದ ಸಾವಳಗಿ, ಮಲ್ಲಿಕಾರ್ಜುನ ಖನ್ನಾ, ಮರೆಪ್ಪ ಮೇತ್ರೆ, ಸಂತೋಷ ತೆಗನೂರ, ಬಸವಂತರಾವ ಕೋವಿ,
ಪಾಂಡುರಂಗ ಕೊಟ್ರೆ, ನಾಮದೇವ ಬಬಲಾದಕರ, ಶರಣಬಸಪ್ಪ ಹೇರೂರ, ಶಿವಶಂಕರ ಖೇಳಗಿ ಹಾಗು ಇತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next