Advertisement

ಪಂಚಾಯತ್‌ ಅಧ್ಯಕ್ಷರ ಸ್ವ ಕ್ಷೇತ್ರದ ಮಿತ್ತಡ್ಕ ಶಾಲೆಯ ಛಾವಣಿ ಕುಸಿತ

03:45 AM Jul 02, 2017 | Harsha Rao |

ನಿಡ್ಪಳ್ಳಿ: ಜಿಲ್ಲಾ  ಪಂಚಾಯತ್‌ ಅಧ್ಯಕ್ಷರ ಸ್ವ ಕ್ಷೇತ್ರದಲ್ಲಿನ ಬೆಟ್ಟಂಪಾಡಿ ಗ್ರಾಮದ ಮಿತ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಸಿದು ಸೋರುತ್ತಿದೆ. ಹೇಗೆಂದರೆ ಕಟ್ಟಡದ ಒಂದು ಕೊಠಡಿಯ ಛಾವಣಿ ಕುಸಿದು ಕೊಠಡಿಯೊಳಗೆ ಮಳೆ ನೀರು ತುಂಬಿದೆ.

Advertisement

ಒಂದನೇ ತರಗತಿಯಿಂದ ಏಳನೇ ತರಗತಿ ತನಕ ಇರುವ ಈ ಶಾಲೆಯಲ್ಲಿ ಕಟ್ಟಡ ಕುಸಿಯುವ ಭೀತಿ ಬೇಸಗೆಯಲ್ಲೇ ಕಂಡು ಬಂದಿತ್ತು. ಶಾಲಾ ಎಸ್‌ಡಿಎಂಸಿ, ಮುಖ್ಯ ಶಿಕ್ಷಕರು, ಜನಪ್ರತಿನಿಧಿಗಳಿಗೆ, ಇಲಾಖೆಗೆ ನೀಡಿದ ಮನವಿಗೆ ಲೆಕ್ಕವೇ ಇಲ್ಲ. ಜನಪ್ರತಿನಿಧಿಗಳ ನಿರ್ಲಕ್ಷéಕ್ಕೆ ತಾಜಾ ಉದಾಹರಣೆಯೆನಿಸಿತ್ತು.

ಅನುದಾನ ಮಂಜೂರು
ಕೊನೆಗೂ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರು 1  ಲ.ರೂ. ಅನುದಾನ ಮಂಜೂರು ಮಾಡಿದ್ದಾರೆ. ಎಂಜಿನಿಯರ್‌ಗಳು ಎಸ್ಟಿಮೇಟ್‌ ತಯಾರಿಸಿದ್ದು ಬಂತು. ಆದರೆ ಛಾವಣಿ ಕುಸಿದು ಮಳೆ ನೀರು ಹೊಕ್ಕರೂ ಕೆಲಸ ಆರಂಭವಾಗಲೇ ಇಲ್ಲ. ಗುತ್ತಿಗೆ ನೀಡುವ ವಿಚಾರದಲ್ಲಿ ಉಂಟಾದ ಗೊಂದಲವೇ ವಿಳಂಬಕ್ಕೆ ಕಾರಣ ಎನ್ನಲಾಗಿದೆ.

ಪರಿಣಾಮ ಎರಡು ಮೂರು ದಿನದ ಹಿಂದೆ ಸುರಿದ ಮಳೆಗೆ ಛಾವಣಿ ಸಂಪೂರ್ಣ ಧರಾಶಾಯಿ ಆಗಿದೆ. ಛಾವಣಿ ಪೂರ್ಣ ಕುಸಿದು ಹೋದ ಅನಂತರ ಶುಕ್ರವಾರ ದುರಸ್ತಿ ಕಾಮಗಾರಿ ಆರಂಭಿಸಲಾಗಿದೆ. ಆದರೂ ಮಳೆ ತೀವ್ರಗೊಂಡರೆ, ಉಳಿದ ಕೊಠಡಿಯ ಸುರಕ್ಷಿತಯ ಬಗ್ಗೆಯು ಭೀತಿ ಉಂಟಾಗಲಿದೆ ಎಂದು ಸ್ಥಳೀಯರು ಪ್ರತಿಕ್ರಿಯಿಸಿದ್ದಾರೆ.

ತರಗತಿ ಸ್ಥಳಾಂತರ
ಕಟ್ಟಡ ಕುಸಿತದ ಭೀತಿಯಿಂದ ಅಸುರಕ್ಷಿತ ಕೊಠಡಿ ಪಕ್ಕದಿಂದ ಮಕ್ಕಳನ್ನು ಬೇರೆ ಶಾಲೆಗೆ ಸ್ಥಳಾಂತರಿಸಲಾಗಿದೆ. ಶಿಕ್ಷಕರು ತಮ್ಮ ಕಚೇರಿಯನ್ನು ಏಳನೇ ತರಗತಿಗೆ ವರ್ಗಾಯಿಸಿದ್ದಾರೆ. ಮಳೆ ಮುಂದುವರಿದರೆ ಗೋಡೆಯು ಕುಸಿದು ಬೀಳುವುದು ನಿಶ್ಚಿತ. ಮಕ್ಕಳನ್ನು ಶಾಲೆಗೆ ಕಳುಹಿಸುವ ಬಗ್ಗೆಯು ಆತಂಕ ವ್ಯಕ್ತವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next