Advertisement

ಅರಮನೆ ವೇದಿಕೆಯಲ್ಲಿ ಹರಿಯಲಿದೆ ಸಂಗೀತ ಸುಧೆ

11:28 AM Oct 08, 2018 | Team Udayavani |

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಪ್ರಯುಕ್ತ ಮೈಸೂರು ಅರಮನೆ ವೇದಿಕೆಯಲ್ಲಿ ಖ್ಯಾತ ಕಲಾವಿದರು ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅ.10ರಂದು ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟನೆ ಮಾಡುವುದರೊಂದಿಗೆ 2018ನೇ ಸಾಲಿನ ಸಂಗೀತ ವಿದ್ವಾನ್‌ ಪ್ರಶಸ್ತಿಯನ್ನು ಖ್ಯಾತ ಸರೋದ್‌ ವಾದಕ ಮೈಸೂರಿನ ಪಂಡಿತ್‌ ರಾಜೀವ್‌ ತಾರಾನಾಥ್‌ ಅವರಿಗೆ ಪ್ರದಾನ ಮಾಡಲಿದ್ದಾರೆ.

Advertisement

ನಂತರ 7 ಗಂಟೆಗೆ ಬೆಂಗಳೂರಿನ ಡಾ.ವೀಣಾಮೂರ್ತಿ ವಿಜಯ್‌ ಮತ್ತು ತಂಡದಿಂದ ಗಜ ಗೌರವ ನೃತ್ಯರೂಪಕ, ರಾತ್ರಿ 8ರಿಂದ 10 ಗಂಟೆವರೆಗೆ ಜಾನಪದ ಜಾತ್ರೆ ನಡೆಯಲಿದೆ. ಅ.11 ರಂದು ಸಂಜೆ 6 ಗಂಟೆಗೆ ವಿದ್ವಾನ್‌ ಎ.ವಿ.ದತ್ತಾತ್ರೇಯ ಅವರಿಂದ ಶಾಸ್ತ್ರೀಯ ಮ್ಯಾಂಡೋಲಿನ್‌ ವಾದನ, ಸಂಜೆ 6.45ರಿಂದ ಮೈಸೂರಿನ ಸಮೀರ್‌ ರಾವ್‌ ಮತ್ತು ವಂಶಿಧರ್‌ ಅವರಿಂದ ಕೊಳಲು ವಾದನ ಜುಗಲ್‌ ಬಂದಿ, ರಾತ್ರಿ 7.30ರಿಂದ ಬೆಂಗಳೂರಿನ ನಾಗಚಂದ್ರಿಕಾ ಭಟ್‌ ಮತ್ತು ರವಿ ಮುರೂರು ತಂಡದಿಂದ ಗೀತಗಾಯನ ಜುಗಲ್‌ ಬಂದಿ, ರಾತ್ರಿ 8.30ರಿಂದ ಪ್ರಸಿದ್ಧ ನೃತ್ಯ ಕಲಾವಿದೆ ಲಕ್ಷ್ಮೀ ಗೋಪಾಲಸ್ವಾಮಿ ಅವರಿಂದ ನೃತ್ಯ ವೈಭವ.

ಅ.12 ರಂದು ಸಂಜೆ 6 ಗಂಟೆಗೆ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ, ಕೇರಳ ತಂಡದಿಂದ ಮೋಹಿನಿ ಆಟ್ಟಂ, 6.30ಕ್ಕೆ ರಾಯಚೂರಿನ ಪಂಡಿತ್‌ ನರಸಿಂಹಲು ವಡವಾಟಿ ಅವರಿಂದ ಕ್ಲಾರಿಯೋನೆಟ್‌, ರಾತ್ರಿ 7.30ಕ್ಕೆ ಬೆಂಗಳೂರಿನ ಮಂಜುಳಾ ಪರಮೇಶ್‌ ಅವರಿಂದ ನೃತ್ಯ ರೂಪಕ, ರಾತ್ರಿ  8.30ಕ್ಕೆ ಸಂಗೀತ ನಿರ್ದೇಶಕ ಮನೋಮೂರ್ತಿ ಅವರಿಂದ ಸಂಗೀತ ಸಂಭ್ರಮ. 

ಅ.13ರಂದು ಸಂಜೆ 6 ಗಂಟೆಗೆ ಬೆಂಗಳೂರಿನ ಕಾಂಚನ ಸಹೋದರಿಯರ ಶ್ರೀರಂಜಿನಿ-ಶೃತಿ ರಂಜಿನಿ ತಂಡದಿಂದ ಕರ್ನಾಟಕ ಸಂಗೀತ ದ್ವಂದ್ವ ಗಾಯನ, 6.45ಕ್ಕೆ ಮೈಸೂರಿನ ಶಕ್ತಿಧಾಮ ತಂಡದಿಂದ ನೃತ್ಯರೂಪಕ, ರಾತ್ರಿ 7.15ರಿಂದ ಗ್ರ್ಯಾಮಿ ಪ್ರಶಸ್ತಿ ವಿಜೇತ ಬೆಂಗಳೂರಿನ ರಿಕಿಕೇಜ್‌ ಅವರಿಂದ ಸಂಗೀತ ಸಂಜೆ, ರಾತ್ರಿ 8.30ಕ್ಕೆ ಚೆನ್ನೈನ ಲಾಲ್‌ಗ‌ುಡಿ ಕೃಷ್ಣನ್‌-ಲಾಲ್‌ಗ‌ುಡಿ ವಿಜಯಲಕ್ಷ್ಮೀ ಅವರಿಂದ ಕರ್ನಾಟಿಕ್‌ ವಯೋಲಿನ್‌ ವಾದನ.

ಅ.14 ರಂದು ಸಂಜೆ 6ರಿಂದ ರಾತ್ರಿ 8 ಗಂಟೆವರೆಗೆ ಪೊಲೀಸ್‌ ಬ್ಯಾಂಡ್‌, ರಾತ್ರಿ 8 ಗಂಟೆಗೆ ಮೈಸೂರಿನ ನಿಮಿಷಾಂಭ ನೃತ್ಯಶಾಲೆಯ ಶ್ರೀಧರ್‌ ಜೈನ್‌ ಮತ್ತು ತಂಡದಿಂದ ನೃತ್ಯರೂಪಕ, ರಾತ್ರಿ 8.30ರಿಂದ 10 ಗಂಟೆವರೆಗೆ ಖ್ಯಾತ ಗಾಯನ ಡಾ.ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರಿಂದ ಕನ್ನಡ ರಸಮಂಜರಿ.
ಅ.15 ರಂದು ಸಂಜೆ 6 ಗಂಟೆಗೆ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ಅಂಡಮಾನ್‌-ನಿಕೋಬಾರ್‌ ತಂಡದಿಂದ ನಿಕೋಬಾರಿ ನೃತ್ಯ, ಸಂಜೆ 6.30ಕ್ಕೆ ರಂಗಗೀತೆಗಳು,ರಾತ್ರಿ 7.30ಕ್ಕೆ ಬೆಂಗಳೂರಿನ ಸೂರ್ಯ ಕಲಾವಿದರಿಂದ ಕರ್ನಾಟಕ ದರ್ಶನ ನೃತ್ಯರೂಪಕ, ರಾತ್ರಿ 8.30ಕ್ಕೆ ಬೆಂಗಳೂರಿನ ವಿದ್ಯಾಭೂಷಣ ಅವರಿಂದ ಹರಿದಾಸ ಕೀರ್ತನೆಗಳ ಗಾಯನ ರಾಗ-ತಾಳ-ಮೇಳ.

Advertisement

ಅ.16 ರಂದು ಸಂಜೆ 6ಕ್ಕೆ ಸುಪ್ರಿಯ ರಘುನಂದನ್‌, ರವೀಂದ್ರ ಸೊರಗಾವಿ, ಪಂಚಮ್‌ ಹಳಿಬಂಡಿ ಮತ್ತು ತಂಡದಿಂದ ಭಾವ ಬೆಳಗು ಗೀತ ನೃತ್ಯೋತ್ಸವ,ರಾತ್ರಿ 7.30ಕ್ಕೆ ಕದ್ರಿ ಗೋಪಾಲನಾಥ್‌- ಪಂಡಿತ್‌ ರೋನು ಮಜುಂದಾರ್‌ ಅವರಿಂದ ಸ್ಯಾಕೊಫೋನ್‌ ಕೊಳಲು ಜುಗಲ್‌ ಬಂದಿ, ರಾತ್ರಿ 8.30ಕ್ಕೆ ಮುಂಬೈನ ಖ್ಯಾತ ಗಾಯಕಿ ಅನುರಾಧಾ ಪೊಡ್ವಾಲ್‌ ಅವರಿಂದ ಭಜನ್‌ ಗಾಯನ.

ಅ.17ರಂದು ಸಂಜೆ 6ಕ್ಕೆ ದಕ್ಷಿಣವಲಯ ಸಾಂಸ್ಕೃತಿಕ ಕೇಂದ್ರ ಮಧ್ಯಪ್ರದೇಶ ತಂಡದಿಂದ ಬದಾಯಿ -ಬರೇಡಿ ನೃತ್ಯ,6.30ಕ್ಕೆ ನಾಗಪುರದ ಮುಕ್ತಿಯಾರ್‌ ಅಲಿಖಾನ್‌ ಅವರಿಂದ ಸೂಫಿ ಸಂಗೀತ, ರಾತ್ರಿ 7.30ಕ್ಕೆ ಬೆಂಗಳೂರಿನ ನಿರೂಪಮಾ ರಾಜೇಂದ್ರ ಮತ್ತು ತಂಡದಿಂದ ನೃತ್ಯ ಸಂಭ್ರಮ, ರಾತ್ರಿ 8.30ಕ್ಕೆ ಬೆಂಗಳೂರಿನ ಆಯಣ ನೃತ್ಯತಂಡದಿಂದ ದಕ್ಷಿಣ ಭಾರತ ನೃತ್ಯ ವೈಭವ ಕಾರ್ಯಕ್ರಮ ನಡೆಯಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next