Advertisement
ದೇಶಿ ಚಿತ್ರಕಲಾವಿದರ ಅಚ್ಚುಮೆಚ್ಚಿನ ಚಿತ್ರಸಂತೆ ಈ ವರ್ಷ ಯಾವ ರೀತಿ ನಡೆಯಬೇಕು ಎಂಬುವುದರ ಕುರಿತು ಚಿತ್ರಕಲಾ ಪರಿಷತ್ತಿನ ಉಪಾಧ್ಯಕ್ಷ ಹರೀಶ್ ಪದ್ಮನಾಭನ್ ಅಧ್ಯಕ್ಷತೆಯಲ್ಲಿ ಉಪಸಮಿತಿ ರಚಿಸಲಾಗಿದೆ. ಈ ಸಮಿತಿ ಸಂತೆಯ ರೂಪುರೇಷೆ ಸಿದ್ಧಪಡಿಸಿದೆ. ಕಳೆದ ಬಾರಿಯ ಹದಿನೈದನೇ ಚಿತ್ರಸಂತೆಯಲ್ಲಿ ಪಾಲ್ಗೊಂಡಿದ್ದ ಸುಮಾರು 1,300 ಕಲಾವಿದರಿಗೆ ಈಗಾಗಲೇ ಅಂಚೆ ಕಾರ್ಡ್ ಮೂಲಕ ಚಿತ್ರಸಂತೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.
Related Articles
Advertisement
ದೂರದೂರುಗಳಿಂದ ಕಲಾವಿದರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪರಿಷತ್ತು ಸಿದ್ಧತೆ ಮಾಡಿಕೊಂಡಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಕಲಾವಿದರಿಂದ ಪರಿಷತ್ತು 300 ರೂ. ನೋಂದಣಿ ಶುಲ್ಕ ಪಾವತಿಸಿಕೊಂಡು ಆ ನಂತರ ಒಂದು ದಿನ ವಸತಿ ಮತ್ತು ಊಟ ಕಲ್ಪಿಸಲಿದೆ.
ಅರಸು ಹೆಸರಲ್ಲಿ ಪ್ರಶಸ್ತಿ: ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ಸಿಎಂ ಆಗಿದ್ದ ವೇಳೆ ಕುಮಾರ ಕೃಪಾ ರಸ್ತೆಯಲ್ಲಿರುವ ಜಾಗವನ್ನು ಚಿತ್ರಕಲಾ ಪರಿಷತ್ತಿಗೆ ನೀಡಿದ್ದರು. ಹೀಗಾಗಿ ಕಳೆದ ವರ್ಷದಿಂದ ಅರಸು ಹೆಸರಿನಲ್ಲಿ ಚಿತ್ರಕಲಾ ಪರಿಷತ್ತು ಪ್ರಶಸ್ತಿ ಸ್ಥಾಪನೆ ಮಾಡಿದೆ. ಇದರ ಜತಗೆ ಸಂಸ್ಥಾಪಕ ಅಧ್ಯಕ್ಷ ಆರ್ಯ ಮೂರ್ತಿ ಹೆಸರಿನಲ್ಲಿ ಹಾಗೂ ಎಚ್.ಕೆ.ಕೇಜ್ರಿವಾಲ್ ಹೆಸರಿನಲ್ಲಿ ಕಲಾವಿದರಿಗೆ ಪ್ರಶಸ್ತಿ ನೀಡಲಿದೆ.
ಚಿತ್ರಕಲಾ ಪರಿಷತ್ತಿನ ಕಟ್ಟಡ ನಿರ್ಮಾಣಕ್ಕೆ ಎಚ್.ಕೆ.ಕೇಜ್ರಿವಾಲ್ ಅವರ ಕೊಡುಗೆ ಅಪಾರ. 1973-74ರ ಅವಧಿಯಲ್ಲೇ ಸುಮಾರು ಇಪ್ಪತ್ತು ಲಕ್ಷ ರೂ.ಗಳನ್ನು ದೇಣಿಗೆ ನೀಡಿದ್ದರು. ಈ ಹಿನ್ನೆಲೆಯಲ್ಲೇ ಅವರ ಹೆಸರಿನಲ್ಲಿ ಪರಿಷತ್ತು ಪ್ರಶಸ್ತಿ ನೀಡಲು ಮುಂದಾಗಿದೆ.
ಹದಿನಾರನೇ ಚಿತ್ರ ಸಂತೆಗೆ ಚಿತ್ರಕಲಾ ಪರಿಷತ್ತು ಸಜ್ಜಾಗಿದೆ. ಗಾಂಧೀಜಿಯವರ 150ನೇ ಜನ್ಮದಿನೋತ್ಸವದ ಹಿನ್ನೆಲೆಯಲ್ಲಿ ಚಿತ್ರಸಂತೆಯನ್ನು ಗಾಂಧೀಜಿಯವರಿಗೆ ಅರ್ಪಿಸಲು ಚಿತ್ರಕಲಾ ಪರಿಷತ್ತು ತೀರ್ಮಾನಿಸಿದೆ.-ಬಿ.ಎಲ್.ಶಂಕರ್, ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ * ದೇವೇಶ ಸೂರಗುಪ್ಪ