Advertisement

ಪಾದರಾಯನಪುರ ಗಲಭೆ: ಇರ್ಫಾನ್‌ ಪೊಲೀಸ್‌ ವಶಕ್ಕೆ

06:50 AM Apr 29, 2020 | mahesh |

ಬೆಂಗಳೂರು: ಪಾದರಾಯನಪುರ ದಾಂಧಲೆ ಪ್ರಕರಣದ ಪ್ರಮುಖ ಆರೋಪಿ ಇರ್ಫಾನ್‌ ನನ್ನು ಜೆ.ಜೆ.ನಗರ ಪೊಲೀಸರು ಹೆಚ್ಚಿನ ವಿಚಾರಣೆಗೆ ನಾಲ್ಕು ದಿನಗಳವರೆಗೆ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯನ್ನು ಮಂಗಳವಾರವೂ ವೈದ್ಯಕೀಯ ತಪಾಸಣೆಗೊಳಪಡಿಸಿದ ಪೊಲೀಸರು, ವಿಡಿಯೋ ಕಾನ್ಫರೆನ್ಸ್ ಮೂಲಕ ಮೂರನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಈ ವೇಳೆ ಆರೋಪಿಯೇ ಪ್ರಕರಣ ಮಾಸ್ಟರ್‌ ಮೈಂಡ್‌ ಆಗಿರುವುದರಿಂದ ಆತನನ್ನು ನಾಲ್ಕು ದಿನಗಳ ಕಾಲ ವಶಕ್ಕೆ ನೀಡಬೇಕೆಂದು ಮನವಿ ಮಾಡಿದರು. ಅದನ್ನು ಪುರಸ್ಕರಿಸಿದ ನ್ಯಾಯಾಲಯ ಆರೋಪಿ ಯನ್ನು ಮೇ 1ರವರೆಗೆ ವಶಕ್ಕೆ ನೀಡಿ ಆದೇಶಿಸಿದೆ.

Advertisement

ಗಲಭೆ ಬಳಿಕ ಇರ್ಫಾನ್‌ ಕೆ.ಜಿ. ಹಳ್ಳಿಯಲ್ಲಿ ತಲೆಮರೆಸಿ  ಕೊಂಡಿದ್ದ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಆರೋಪಿಗೆ ಕೋವಿಡ್‌-19 ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ವೈದ್ಯಕೀಯ ವರದಿ ಇನ್ನು ಬಂದಿಲ್ಲ. ಜತೆಗೆ ಆರೋಪಿಗೆ ಸೋಂಕಿನ ಲಕ್ಷಣಗಳು ಕಂಡು ಬಂದಿಲ್ಲ ಎಂದು ಪೊಲೀಸರು ಹೇಳಿದರು.

ಕೃತ್ಯಕ್ಕೆ ಕಾರಣ ನಾನಲ್ಲ?: “ಪಾದರಾಯನಪುರದಲ್ಲಿ ನಡೆದ  ಘಟನೆಗೂ ನನಗೂ ಯಾವುದೇ ಸಂಬಂಧವಿಲ್ಲ. ಅನಗತ್ಯವಾಗಿ ಘಟನೆಯಲ್ಲಿ ನನ್ನ ಹೆಸರು ಕೇಳಿಬರುತ್ತಿದೆ. ಘಟನಾ ಸಟಛಿಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿ, ಈ ಸಂದರ್ಭದಲ್ಲಿ ನಾನು ಏರಿಯಾದಲ್ಲೇ ಇರಲಿಲ್ಲ. ಒಂದು ವೇಳೆ ದೃಶ್ಯಾವಳಿಯಲ್ಲಿ ನಾನು ಕಂಡು ಬಂದರೆ, ಕಠಿಣ ಶಿಕ್ಷೆಗೊಳಪಡಿಸಿ ಎನ್ನುತ್ತಿದ್ದಾನೆ’. ಅಲ್ಲದೆ, ವಿಚಾ ರಣೆಗೂ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next