Advertisement

ಕಾಲುವೆಗೆ ಸತ್ತ ಕೋಳಿ ಎಸೆದಿರುವುದಕ್ಕೆ ಜನರ ಆಕ್ರೋಶ

06:43 PM Apr 29, 2021 | Team Udayavani |

ಹಗರಿಬೊಮ್ಮನಹಳ್ಳಿ: ತಾಲೂಕಿನ ಸಿಗೇನಹಳ್ಳಿ-3ಗ್ರಾಮದ ಬಳಿ ಇರುವ ತಂಬ್ರಹಳ್ಳಿ ಏತನೀರಾವರಿಯ ಬೃಹತ್‌ ಕಾಲುವೆಗೆ, ಕೋಳಿಫಾರಂನವರು ಸತ್ತುಹೋದ ಕೋಳಿಗಳನ್ನುಕಾಲುವೆಗೆ ಎಸೆದ ಪರಿಣಾಮ ದುರ್ವಾಸನೆಹೆಚ್ಚಾಗಿದ್ದು ಸುತ್ತಮುತ್ತಲಿನ ಹೊಲಗದ್ದೆಯವರುಮೂಗುಮುಚ್ಚಿಕೊಂಡು ಅಡ್ಡಾಡುವಂತಾಗಿದೆ.

Advertisement

ಈಗಾಗಲೇ ಕೋಳಿ ಎಸೆದು ನಾಲ್ಕುದಿನಗಳಾದರೂ ಈವರೆಗೂ ಸಂಬಂಧಪಟ್ಟಬನ್ನಿಗೋಳ ಗ್ರಾಪಂನವರು, ಆರೋಗ್ಯಇಲಾಖೆಯವರು ಕೋಳಿಫಾರಂನವರಿಗೆಎಚ್ಚರಿಕೆ ನೀಡದೆ ನಿರ್ಲಕ್ಷÂ ವಹಿಸಿದ್ದಾರೆ. ಕಾಲುವೆಪಕ್ಕದಲ್ಲಿರುವ ಹೊಲದವರು ಜೆಸಿಬಿಯಿಂದಮಣ್ಣು ತೆಗೆದು ಕೋಳಿಗಳನ್ನು ಮುಚ್ಚಿ ಎಂದುಹೇಳಿದರೂ ಕೋಳಿಫಾರಂನವರು ರೈತರಮಾತುಗಳಿಗೆ ಮನ್ನಣೆ ನೀಡದೆ ನೇರವಾಗಿಕಾಲುವೆಗೆ ಎಸೆದು ಹೋಗಿದ್ದಾರೆ.

ತುಂಗಾಭದ್ರಾ ಹಿನ್ನೀರು ಬರುವಕಾಲುವೆಗೆ ಕೋಳಿಗಳನ್ನು ಎಸೆದಿರುವುದರಿಂದದನಕರುಗಳಿಗೆ ನೀರು ಕುಡಿಸೋದು ಹೇಗೆಎಂದು ಸಿಗೇನಹಳ್ಳಿ ಗ್ರಾಮದ ಸಾರ್ವಜನಿಕರುಆಕ್ರೋಷ ವ್ಯಕ್ತಪಡಿಸಿದರು. ಸತ್ತಕೋಳಿಗಳನ್ನುಸಿಗೇನಹಳ್ಳಿ, ಬನ್ನಿಗೋಳ ಗ್ರಾಮದ ನಾಯಿಗಳುಊರಲ್ಲೇ ಎಳೆದುಕೊಂಡು ಹೋಗಿ ತಿನ್ನಲುಆರಂಭಿಸಿವೆ.

ಈ ಕೋಳಿಗಳನ್ನು ತಿಂದು ಮೂರು ನಾಯಿಗಳುಅನಾರೋಗ್ಯದಿಂದ ಸಾವಿಗೀಡಾಗಿದ್ದಾವೆ ಎಂದುಗ್ರಾಮದ ಭೀಮರೆಡ್ಡಿ ಬೇಸರದಿಂದ ತಿಳಿಸಿದರು.ಕೊರೊನಾ ವೈರಸ್‌ನಂತಹ ಮಹಾಮಾರಿಯನ್ನುಬಾರಿ ಆತಂಕದಿಂದ ಎದುರಿಸುತ್ತಿರುವಸಾರ್ವಜನಿಕರಿಗೆ ಸತ್ತಕೋಳಿಗಳ ದುರ್ವಾಸನೆನಲುಗುವಂತೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next