Advertisement

ರಸ್ತೆ ದುಸ್ಥಿತಿಗೆ ಜನಪ್ರತಿನಿಧಿಗಳ ಆಕ್ರೋಶ

11:43 AM Oct 08, 2017 | Team Udayavani |

ಹುಬ್ಬಳ್ಳಿ: ಅವಳಿನಗರದ ರಸ್ತೆಗಳ ಆವ್ಯವಸ್ಥೆ ಕುರಿತು ಜನಪ್ರತಿನಿಧಿಗಳ ಆಕ್ರೋಶದ ನಡುವೆಯೇ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ, ಮಳೆನಿಂತ 15 ದಿನಗಳೊಳಗೆ ರಸ್ತೆಗಳ ಗುಂಡಿ ಮುಚ್ಚುವಂತೆ ಖಡಕ್‌ ಸೂಚನೆ ನೀಡಿದರು. 

Advertisement

ಆದರ್ಶ ನಗರದ ಡಾ| ಡಿ.ಎಸ್‌. ಕರ್ಕಿ ಕನ್ನಡ ಭವನದಲ್ಲಿ ಶನಿವಾರ ನಡೆದ ಅವಳಿ ನಗರದ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಸ್ತೆಗಳ ದುಸ್ಥಿತಿ ಕುರಿತ ಚಿತ್ರಗಳ ಸಮೇತ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವರು, ರಸ್ತೆ ಗುಂಡಿ ಮುಚ್ಚಲು ಸ್ಕೆ Ìàರ್‌ ಆಕಾರದಲ್ಲಿ ಅಗೆದು ಗುಣಮಟ್ಟದೊಂದಿಗೆ ದುರಸ್ತಿ ಮಾಡಬೇಕು.

ರಸ್ತೆ ಅಗೆಯುವವರನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು. ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ರಸ್ತೆಗಳ ಗುಂಡಿ ಮುಚ್ಚಲು ಸಮರ್ಪಕ ಕ್ರಮ ಕೈಗೊಂಡಿಲ್ಲ. ಮುಚ್ಚಿದ ಗುಂಡಿಗಳು ಮತ್ತೆ ಬಾಯೆ¤ರೆದಿದ್ದು, ಕಳಪೆ ಕಾಮಗಾರಿ ಗೋಚರಿಸುತ್ತಿದೆ.  ಮ್ಯಾನ್‌ಹೋಲ್‌ ಮುಚ್ಚುವುದಕ್ಕೂ ಜನಪ್ರತಿನಿಧಿಗಳು ಬಂದು ಹೇಳಬೇಕೆ? ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಜನಪ್ರತಿನಿಧಿಗಳು ತಲೆ ತಗ್ಗಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ ಮಾತನಾಡಿ, ಲೋಕಪ್ಪನ ಹಕ್ಕಲದಲ್ಲಿ ಹೊಸ ರಸ್ತೆ ಅಗೆಯಲಾಗಿದೆ. ಇಲಾಖೆಗಳ ನಡುವೆ ಸಂಯೋಜನೆ ಇಲ್ಲದಿರುವುದೇ ಇದಕ್ಕೆ ಕಾರಣ. ರಸ್ತೆ ಅಗೆತಕ್ಕೆ ಪಡೆಯುವ ಶುಲ್ಕಕ್ಕೆ ಪ್ರತ್ಯೇಕ ನಿಧಿ ಸ್ಥಾಪಿಸಿ ಬಂದ ಹಣ ರಸ್ತೆ ದುರಸ್ತಿಗೆ ಬಳಸಿ ಎಂದರು. 

ವಿಪ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಪಾಲಿಕೆ ಸಿಬ್ಬಂದಿ ಹಾಗೂ ಅನೇಕ ಸದಸ್ಯರ ಸಂಬಂಧಿಗಳೇ ಗುತ್ತಿಗೆ ಕಾಮಗಾರಿ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು. ಶಾಸಕ ಅರವಿಂದ ಬೆಲ್ಲದ ಮಾತನಾಡಿ, ರಸ್ತೆ ದುರಸ್ತಿಗೆ ಒಟ್ಟಾರೆ ಎಷ್ಟು ಹಣ ಬೇಕು ಎಂಬುದನ್ನು ಸ್ಪಷ್ಟಪಡಿಸಿ ಎಂದು ಆಯುಕ್ತರಿಗೆ ಒತ್ತಾಯಿಸಿದರು. 

Advertisement

ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ ಮಾತನಾಡಿ, ಅವಳಿನಗರದಲ್ಲಿ ಒಟ್ಟು 1.20ಲಕ್ಷ ಚದರ ಮೀಟರ್‌ ರಸ್ತೆ ದುರಸ್ತಿ ಮಾಡಬೇಕಾಗಿದ್ದು, ಇದಕ್ಕೆ ಅಂದಾಜು 7.20ಕೋಟಿ ರೂ. ಅಗತ್ಯವಿದೆ. ಇದರಲ್ಲಿ ಮುಖ್ಯ ರಸ್ತೆ 40 ಸಾವಿರ ಚ.ಮೀಟರ್‌ ಇದ್ದು ಇದಕ್ಕೆ ಅಂದಾಜು 1.3ಕೋಟಿ ರೂ. ಅಗತ್ಯವಾಗಿದೆ. ಈಗಾಗಲೇ ವಿವಿಧೆಡೆ ರಸ್ತೆ ದುರಸ್ತಿ ಕೈಗೊಳ್ಳಲಾಗಿದೆ. ಮಳೆಯಿಂದಾಗಿ ಹೆಚ್ಚಿನ ಪ್ರಗತಿ ಸಾಧ್ಯವಾಗಿಲ್ಲ.

ಮಳೆ ನಿಂತ ನಂತರದಲ್ಲಿ ಕಾಮಗಾರಿ ತೀವ್ರಗೊಳಿಸಲಾಗುವುದು ಎಂದರು. ಡಿಸಿ ಡಾ| ಎಸ್‌.ಬಿ. ಬೊಮ್ಮನಹಳ್ಳಿ ಮಾತನಾಡಿ, ರಸ್ತೆ ದುರಸ್ತಿ ಕಾಮಗಾರಿ ಕಳಪೆ ಆರೋಪ ಕೇಳಿ ಬಂದಿದ್ದು, ಪಾಲಿಕೆ ಇಂಜಿನೀಯರ್‌ಗಳು ಪರಿಶೀಲನೆ ಮಾಡಬೇಕು. ಗುಣಮಟ್ಟ ಕಾಯ್ದುಕೊಳ್ಳದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.   

Advertisement

Udayavani is now on Telegram. Click here to join our channel and stay updated with the latest news.

Next