Advertisement

ಏಕಾಏಕಿ ಗುಡಿಸಲು ತೆರವು: ರಸ್ತೆಯಲ್ಲೇ ಸಂತ್ರಸ್ತೆಗೆ ಹೆರಿಗೆ 

06:15 AM Nov 23, 2017 | Team Udayavani |

ಬೀದರ: ಸರ್ಕಾರಿ ಜಾಗದಲ್ಲಿ ಹಲವು ವರ್ಷಗಳಿಂದ ಆಶ್ರಯ ಪಡೆದಿದ್ದ 80ಕ್ಕೂ ಹೆಚ್ಚು ಅಲೆಮಾರಿ ಸಮುದಾಯದ ಕುಟುಂಬಗಳ ಗುಡಿಸಲುಗಳನ್ನು ಮಂಗಳವಾರ ರಾತ್ರಿ ಏಕಾಏಕಿ ತೆರವುಗೊಳಿಸಲಾಗಿದ್ದು, ಈ ವೇಳೆ ಮನೆ ಕಳೆದುಕೊಂಡು ರಸ್ತೆಯಲ್ಲಿದ್ದ ಗರ್ಭಿಣಿಗೆ ರಸ್ತೆಯಲ್ಲೇ ಹೆರಿಗೆಯಾಗಿರುವ ಕರುಣಾಜನಕ ಘಟನೆ ನಡೆದಿದೆ.

Advertisement

ನಗರದ ನೌಬಾದ್‌ ಆಟೋನಗರ ಹತ್ತಿರ ಕೆಐಎಡಿಬಿ ಅಧಿಕಾರಿಗಳು ರಾತ್ರಿಯಿಡಿ ಪೊಲೀಸರ ಪಹರೆಯಲ್ಲಿ ಕಾರ್ಯಾಚರಣೆ ನಡೆಸಿ ಗುಡಿಸಲುಗಳನ್ನು ತೆರವುಗೊಳಿಸಿದರು. ವಿವಿಧ ವೃತ್ತಿಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಅಲೆಮಾರಿ ಸಮುದಾಯ ಗುಡಿಸಲು ದಿಢೀರ್‌ ತೆರವುಗೊಳಿಸಿದ್ದರಿಂದ ಬೀದಿಗೆ ಬಿದ್ದಿದ್ದಾರೆ. ರಾತ್ರಿಯಿಡೀ ಮಹಿಳೆ, ಮಕ್ಕಳು, ವಯೋವೃದಟಛಿರು ಮೈಕೊರೆವ ಚಳಿಯಲ್ಲೇ ರಸ್ತೆ ಪಕ್ಕ ಜಾಗರಣೆ ಮಾಡುವಂಥ ಸ್ಥಿತಿ ನಿರ್ಮಾಣವಾಗಿತ್ತು. ತೆರವು ಕಾರ್ಯಾಚರಣೆ ಸಂದರ್ಭದಲ್ಲೇ ಗರ್ಭಿಣಿಯೊಬ್ಬಳು ಹೆರಿಗೆ ನೋವಿನಿಂದ ಬಳಲಲು ಆರಂಭಿಸಿದ್ದಳು.

ಆದರೆ, ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಶೀಘ್ರ ಆಗದ ಕಾರಣ ಗರ್ಭಿಣಿಗೆ ರಸ್ತೆ ಪಕ್ಕದಲ್ಲೇ ಹೆರಿಗೆ ಆಗಿದೆ. ಗುಡಿಸಲು ತೆರವುಗೊಳಿ ಸಿದ್ದರಿಂದ ಗರ್ಭಿಣಿ ಸೇರಿದಂತೆ ನಿವಾಸಿಗಳು ಆಶ್ರಯವಿಲ್ಲದೇ ನರಳಾಡಿದರೂ ಯಾರೊಬ್ಬ ಅ ಧಿಕಾರಿಗಳು ಸ್ಥಳಕ್ಕೆ ಭೇಟಿ ಅವರ ಕಣ್ಣೀರೊರೆಸುವ ಯತ್ನ ಮಾಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next