ಮೂಲ್ಕಿ: ಇಲ್ಲಿಯ ಬಸ್ ನಿಲ್ದಾಣದ ಬಳಿ ಅತೀ ವೇಗದಿಂದ ಬಂದ ಕಾರೊಂದು ನಿಯಂತ್ರಣ ಕಳೆದುಕೊಂಡು ಬ್ಯಾರಿಕೇಡ್‌ಗೆ ಢಿಕ್ಕಿ ಹೊಡೆದ ಅನಂತರ ಪಕ್ಕದಲ್ಲಿದ್ದ ಎರಡು ರಿಕ್ಷಾಗಳಿಗೆ ಢಿಕ್ಕಿ ಹೊಡೆದು ಅಲ್ಲಿಂದ ಪಲಾಯನ ಮಾಡಿ ಹೆಜಮಾಡಿ ಟೋಲ್ ಬಳಿ ಸಿಕ್ಕಿರುವ ಘಟನೆ ವರದಿಯಾಗಿದೆ.
ರಿಕ್ಷಾದ ಎಬ್ಬರೂ ಚಾಲಕರು ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ.
ಢಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರನ್ನು ಸಾರ್ವಜನಿಕರು ಬೆನ್ನಟ್ಟಿಕೊಂಡು ಹೋಗಿ ಸಂಚಾರ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಕಾರು ಪಂಕ್ಚರ್ ಆಗಿದ್ದರೂ ಹೆಜಮಾಡಿಯ ವರೆಗೆ ಚಲಾಯಿಸಿ ಟೋಲ್ ಸಮೀಪ ಆಡಗಿದ್ದವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ. ಕೊಂಡು ತರಲಾಗಿದೆ. ಬಾಡಿಗೆ ಆಧಾರದಲ್ಲಿ ಸಿಗುವ ಕಾರು ಇದಾಗಿದೆ.
ಸ್ಕೂಟರ್ ಪಾದಚಾರಿಗೆ ಢಿಕ್ಕಿ; ಗಾಯ
ಮೂಲ್ಕಿ: ಇಲ್ಲಿಯ ಕೊಲ್ನಾಡು ಬಳಿ ಸ್ಕೂ ಟರೊಂದು ಪಾದಚಾರಿಗೆ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್‌ನಲ್ಲಿದ್ದ ಇಬ್ಬರು ಹಾಗೂ ಪಾದಚಾರಿ ಸ್ಥಳೀಯ ಗ್ಯಾರೇಜ್‌ನ ಉದ್ಯೋಗಿ ಅಶೋಕ್ ಅವರು ಗಾಯಗೊಂಡಿದ್ದಾರೆ.
ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.