Advertisement
ರಾಗಿ ಖರೀದಿಸುವ ಪ್ರಕ್ರಿಯೆ ಆರಂಭ: ಸರ್ಕಾರ ರಾಗಿಗೆ ಬೆಂಬಲ ಬೆಲೆ ನೀಡಿ, ರೈತರಿಂದ ರಾಗಿಯನ್ನು ಖರೀದಿಸಲು ಎಲ್ಲಾ ತಾಲೂಕಿನಲ್ಲಿಯೂ ರಾಗಿ ಖರೀದಿ ಕೇಂದ್ರವನ್ನು ಪ್ರಾರಂಭಿಸಿದೆ. ಅದೇ ರೀತಿ ಮಾಗಡಿ ತಾಲೂಕಿನ ಸೋಲೂರು ಹೋಬಳಿಯ ಗದ್ದುಗೆ ಮಠಕ್ಕೆ ತೆರಳುವ ರಸ್ತೆಯಲ್ಲಿ ರಾಗಿ ಖರೀದಿ ಕೇಂದ್ರವನ್ನು ತೆರದಿದೆ. ಫೆ.26ರಿಂದಲೂ ಇಲ್ಲಿ ರೈತರಿಂದ ರಾಗಿಯನ್ನು ಖರೀದಿಸುವ ಪ್ರಕ್ರಿಯೆ ಆರಂಭವಾಗಿರುವುದರಿಂದ ಪ್ರತಿದಿನ ನೂರಕ್ಕೂ ಹೆಚ್ಚು ರೈತರು ರಾಗಿಯನ್ನು ತರುತ್ತಿದ್ದಾರೆ.
Related Articles
Advertisement
ಪ್ರತಿದಿನ 70 ರೈತರು ರಾಗಿ ತರುವಂತೆ ಸೂಚನೆ: ತಾಲೂಕಿನ ಗದ್ದಿಗೆ ಮಠಕ್ಕೆ ತೆರಳುವ ರಸ್ತೆಯಲ್ಲಿ ರಾಗಿ ಖರೀದಿ ಕೇಂದ್ರ ಪ್ರಾರಂಭಿಸಲಾಗಿದ್ದು, ಪ್ರತಿದಿನ 70 ರೈತರು ರಾಗಿ ತರುವಂತೆ ಸೂಚಿಸಲಾಗಿದೆ. ಆದರೂ ಸಹ 100ಕ್ಕೂ ಹೆಚ್ಚು ರೈತರು ಬರುವುದರಿಂದ ಅವರಿಗೆ ಕ್ರಮ ಸಂಖ್ಯೆಯನ್ನು ನೀಡಲಾಗಿದೆ. ರೈತರಿಂದ ಪಹಣಿ, ಖಾತೆ ಸಂಖ್ಯೆ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ,ರಾಗಿಯನ್ನು ಖರೀದಿಸಿ ಅದನ್ನು ಆನ್‌ಲೈನ್‌ನಲ್ಲಿ ನಮೂದಿಸಲಾಗುತ್ತಿದೆ.
ವಾಹನಗಳ ಜೊತೆಯಲ್ಲಿ ರಾಗಿ ಮೂಟೆಗಳನ್ನು ತೆಗೆದುಕೊಂಡು ಒಬ್ಬ ರೈತರು ಮಾತ್ರ ಬರುವುದರಿಂದ ಅವರು ಮೂಟೆಗಳನ್ನು ತೂಕ ಮಾಡಿಸಿ, ಜೋಡಿಸಿಡಲು ಸಾಧ್ಯವಾಗುವುದಿಲ್ಲ ಎನ್ನುವ ಕಾರಣದಿಂದ ಕೂಲಿ ಕಾರ್ಮಿಕರನ್ನು ನೇಮಿಸಿಕೊಂಡಿದ್ದೇವೆ. ಇದರಿಂದ ಒಂದು ಮೂಟೆಗೆ ಇಂತಿಷ್ಟು ಎಂದು ಹಣವನ್ನು ಪಡೆಯಲಾಗುತ್ತಿದೆ ಎಂದು ಮಾಗಡಿ ಆಹಾರ ಇಲಾಖೆ ಅಧಿಕಾರಿ ಶ್ರೀಧರ್ ತಿಳಿಸಿದ್ದಾರೆ.
ರಾಗಿ ಖರೀದಿ ಕೇಂದ್ರದಲ್ಲಿ ಪ್ರತಿಯೊಂದು ಮೂಟೆಯನ್ನು ಜೋಡಿಸಲು ಹಣ ಪಡೆಯುತ್ತಿದ್ದು, 500 ಗ್ರಾಂ ರಾಗಿ ಹೆಚ್ಚಾಗಿ ತರುವಂತೆ ತಿಳಿಸಿದ್ದಾರೆ. ಇಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಿಲ್ಲ. ರೈತರು ಊಟ, ತಿಂಡಿ, ಕಾಫಿ, ಟೀ ಕುಡಿಯಲು ಹಾಗೂ ಶೌಚಾಲಯಕ್ಕೆ ತೆರಳಲು ಪರದಾಡುವ ಸ್ಥಿತಿ ಇದೆ.-ಹನುಮಂತ, ಹೊಸಹಳ್ಳಿ ರೈತ ಪ್ರತಿದಿನ ನಿಗದಿಗಿಂತ ಹೆಚ್ಚಿನ ರೈತರು ಬರುತ್ತಿರುವುದರಿಂದ ತಮ್ಮ ಸರದಿಗಾಗಿ ಕಾಯುವ ಪರಿಸ್ಥಿತಿ ಇದೆ. ಎಷ್ಟೇ ರೈತರು ಬಂದರೂ ಸಹ ಅವರನ್ನು ಹಿಂದಕ್ಕೆ ಕಳುಹಿಸದೇ ಎಲ್ಲರಿಂದ ರಾಗಿಯನ್ನು ಖರೀದಿಸಲಾಗುತ್ತಿದೆ. ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಸಂಗ್ರಹಣಾ ಕೇಂದ್ರದಲ್ಲಿಯೇ ರಾಗಿಯ ತೂಕ ಕಡಿಮೆಯಾಗುವುದರಿಂದ ಒಂದು ಮೂಟೆಗೆ 500 ಗ್ರಾಂ ಹೆಚ್ಚು ತರುವಂತೆ ರೈತರಲ್ಲಿ ಮನವಿ ಮಾಡಲಾಗಿದೆ. ಖರೀದಿ ಕೇಂದ್ರದಲ್ಲಿ ರೈತರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಟ್ಟಿದ್ದೇವೆ.
-ನಾಗರಾಜ್, ಖರೀದಿ ಕೇಂದ್ರದ ವ್ಯವಸ್ಥಾಪಕ * ಕೆ.ಎಸ್.ಮಂಜುನಾಥ್ ಕುದೂರು