Advertisement

ಧರ್ಮಸ್ಥಳ ಸಂಸ್ಥೆ ಕಾರ್ಯ ಶ್ಲಾಘನೀಯ

05:08 PM Nov 27, 2020 | Adarsha |

ಕುಷ್ಟಗಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಪ್ಯಾರಲಾಲ್‌ ಸರ್ಕಾರದಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ನಾಪೂರ ಹೇಳಿದರು. ಇಲ್ಲಿನ ಬಸವ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮದಲ್ಲಿ ಅಂತರ್ಜಾಲ ಶಿಕ್ಷಣ ವ್ಯವಸ್ಥೆ ಜ್ಞಾನತಾಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Advertisement

ಈ ಸಂಸ್ಥೆ ಕುಷ್ಟಗಿ ತಾಲೂಕಿನಲ್ಲಿ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಮೂಲಕ ತಾಲೂಕಿನಲ್ಲಿ 52 ಕೋಟಿ ರೂ. ಸಾಲದ ವಹಿವಾಟು ನಡೆಸಿದೆ. ನಿರ್ವಹಣೆಯಲ್ಲಿ ಆರ್ಥಿಕ ಶಿಸ್ತು ಇದ್ದು, ಶೇ. 1 ರೂ. ದುರಪಯೋಗವಾಗದೇ ಮೇಲಾಗಿ ಈ ಸಂಸ್ಥೆಯಿಂದ ಪಡೆದ ಸಾಲಕ್ಕೆ ಬಡ್ಡಿ ಪ್ರಮಾಣ ಬ್ಯಾಂಕ್‌ಗಳಿಗಿಂತ ಕಡಿಮೆ ಬಡ್ಡಿ ದರವಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಆನ್‌ ಲೈನ್‌ ಶಿಕ್ಷಣ ಅನಿವಾರ್ಯವಾಗಿದ್ದುಒಗ್ಗಿಕ್ಕೊಳ್ಳಲೇಬೇಕಿದೆ. ಈ ಶಿಕ್ಷಣದಿಂದ ಮಕ್ಕಳ ಮೇಲೆ ದುಷ್ಪರಿಣಾಮ ಇದ್ದರೂ ಸರಿದೂಗಿಸಿಕೊಂಡು ಹೇಗಬೇಕಿದೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಗಣಿತ, ವಿಜ್ಞಾನ, ಇಂಗ್ಲಿಷ್‌ ಸಿದ್ಧ ಮಾದರಿ ಪಾಠಗಳ ಜೊತೆಯಲ್ಲಿ ಉಳಿದ ವಿಷಯಗಳಿಗೂ ಆದ್ಯತೆ ನೀಡಬೇಕಿದೆ ಎಂದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಲ್ಯಾಣ ಕರ್ನಾಟಕ ಪ್ರಾದೇಶಿಕ ನಿರ್ದೇಶಕ ಪುರುಷೋತ್ತಮ ಪಿ.ಕೆ. ಮಾತನಾಡಿ, ತಾಲೂಕಿನಲ್ಲಿ 3,250 ಸ್ವ ಸಹಾಯ ಸಂಘಗಳಿದ್ದು, 52 ಕೋಟಿ ರೂ. ಸಾಲದ ವಹಿವಾಟಿದೆ. ಶೇ. 7 ಬಡ್ಡಿಗೆ ವಿವಿಧೋದ್ದೇಶಗಳಿಗೆ ಸ್ವ ಉದ್ಯೋಗಕ್ಕಾಗಿ ಕಿರುಸಾಲ ನೀಡಲಾಗುತ್ತಿದೆ. ಸಾಲ ನೀಡುವುದಲ್ಲದೇ ಅದನ್ನು ಪಾವತಿಸುವ

ಇದನ್ನೂ ಓದಿ:ಮರಳೂರು ಕೆರೆ ಪರಿಸರ ಸಂರಕ್ಷಿಸಿ: ರೇಣುಕಾ

Advertisement

ಆರ್ಥಿಕ ಶಿಸ್ತಿಗೆ ನಮ್ಮ ಸಂಸ್ಥೆ ಬದ್ಧವಾಗಿದೆ. ಕೆರೆ ಅಭಿವೃದ್ಧಿ ಕಾಯಕದಲ್ಲಿ 18 ಕೆರೆಗಳ ಹೂಳೆತ್ತುವ ಕಾರ್ಯ ನೆರವೇರಿಸಿದೆ. ರಾಜ್ಯದ 1 ಸಾವಿರ ಗ್ರಾಮೀಣ ಕನ್ನಡಮಾಧ್ಯಮ ವಿದ್ಯಾರ್ಥಿಗಳಿಗೆ 81 ಕೋಟಿ ರೂ. ವೆಚ್ಚದಲ್ಲಿ ಲ್ಯಾಪ್‌ಟಾಪ್‌ ಹಾಗೂ ಟ್ಯಾಬ್‌ ವಿತರಿಸುವ ಯೋಜನೆ ಕುರಿತು ವಿವರಿಸಿದ ಅವರು ಟ್ಯಾಬ್‌ಗ 10 ಸಾವಿರ ರೂ. ಮೌಲ್ಯವಿದ್ದು, ಗ್ರಾಮೀಣಾಭಿವೃದ್ಧಿ ಸ್ವ ಸಹಾಯ ಗುಂಪಿನ ಸದಸ್ಯರ ಮಕ್ಕಳಿಗೆ 4 ಸಾವಿರ ರೂ. ರಿಯಾಯ್ತಿ ಇದೆ. ಕಾಲೇಜು ವಿದ್ಯಾರ್ಥಿಗಳಿಗೆ 24 ಸಾವಿರ ಮುಖಬೆಲೆಯ ಲ್ಯಾಪ್‌ಟಾಪ್‌ಗೆ 6 ಸಾವಿರ ರೂ. ರಿಯಾಯ್ತಿ ಬಗ್ಗೆ ವಿವರಿಸಿದ ಅವರು, ಕುಷ್ಟಗಿ ತಾಲೂಕಿನಲ್ಲಿ 50 ಲ್ಯಾಪ್‌ಟಾಪ್‌ ಹಾಗೂ 100 ಟ್ಯಾಬ್‌ವಿತರಿಸುತ್ತಿರುವುದಾಗಿ ಹೇಳಿದರು.

ದೇವೇಂದ್ರಪ್ಪ ಬಳೂಟಗಿ, ಮಹಾಂತಯ್ಯ ಅರಳಲಿಮಠ, ಯೋಜನಾ ನಿರ್ದೇಶಕ ಮಹಾಂತಯ್ಯ ಅರಳಲಿಮಠ ಇತರರಿದ್ದರು. ಇದೇ ವೇಳೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸ್ವ ಸಹಾಯ ಗುಂಪಿನ ಸದಸ್ಯರ ಮಕ್ಕಳಿಗೆ ಲ್ಯಾಪ್‌ಟಾಪ್‌ ಹಾಗೂ ಟ್ಯಾಬ್‌ ವಿತರಿಸಲಾಯಿತು. ಜ್ಞಾನವಿಕಾಸ ಸಂಸ್ಥೆಯ ಸಮನ್ವಯಾಧಿಕಾರಿ ವಿಜಯಲಕ್ಷ್ಮಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next