ಸರಿಯಾಗಿದ್ದರೂ, 15 ದಿನಗಳ ಕಾಲಾವಕಾಶ ನೀಡಬಾರದಿತ್ತು ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ತಿಳಿಸಿದರು.
Advertisement
ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಸಿಎಂ ಎಸ್.ಆರ್.ಬೊಮ್ಮಾಯಿ ಪ್ರಕರಣದ ತೀರ್ಪಿನಂತೆ ಕ್ರಮ ಕೈಗೊಂಡಿರುವ ರಾಜ್ಯಪಾಲರು ದೊಡ್ಡ ಪಕ್ಷಕ್ಕೆ ಸರ್ಕಾರ ರಚಿಸಲು ಅವಕಾಶ ನೀಡಿರುವುದು ಸರಿಯಾಗಿದೆ. ಆದರೆ, 15 ದಿನಗಳ ಕಾಲಾವಕಾಶ ನೀಡಿರುವುದು ವೈಯಕ್ತಿಕವಾಗಿ ನನಗೆ ಸರಿ ಕಾಣುತ್ತಿಲ್ಲ. ಇದು ಶಾಸಕರ ಕುದುರೆ ವ್ಯಾಪಾರಕ್ಕೆ ಆಸ್ಪದ ನೀಡಿದಂತಾಗಲಿದೆ. ರೆಸಾರ್ಟ್ ರಾಜಕಾರಣದಿಂದ ಕೇವಲ ರೆಸಾರ್ಟ್ ಮಂದಿಗೆ ದುಡ್ಡಾಗಲಿದೆಯೇ ಹೊರತು ಬೇರೇನೂ ಆಗುವುದಿಲ್ಲ ಎಂದರು.