ಚಿಕ್ಕಬಳ್ಳಾಪುರ: ಜಿಲ್ಲೆಯ ಕನಸಿನ ಯೋಜನೆಯಾದ ವೈದ್ಯಕೀಯ ಕಾಲೇಜಿನ ಕಾಮಗಾರಿಭರದಿಂದ ಸಾಗುತ್ತಿದ್ದು, ಭೌತಿಕವಾಗಿ ಶೇ.45ಕಾಮಗಾರಿ ಪ್ರಸ್ತುತ ಪೂರ್ಣಗೊಂಡಿದ್ದುಮುಂದಿನ ಶೈಕ್ಷಣಿಕ ವರ್ಷದಲ್ಲಿ ಉದ್ಘಾಟನೆಯಾಗಲಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.
ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವವೈದ್ಯಕೀಯ ಕಾಲೇಜಿನ ಕಾಮಗಾರಿಯಪ್ರಗತಿ ಪರಿಶೀಲನಾ ಸಭೆಯ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಮಂಗಳವಾರ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅಧಿಕಾರಿಗಳಿಂದ ವಿವರ ಪಡೆದು ಮಾತನಾಡಿದರು.
ಭರದಿಂದ ಸಾಗಿದೆ: ಜಿಲ್ಲಾ ಉಸ್ತುವಾರಿಸಚಿವ ಡಾ.ಕೆ.ಸುಧಾಕರ್ ಅವರ ದಿನನಿತ್ಯದನಿರ್ದೇಶನ ಹಾಗೂ ಸೂಚನೆಯಂತೆ ಕಾಲೇಜಿನ ಕಾಮಗಾರಿ ಬಹಳ ಭರದಿಂದ ಸಾಗುತ್ತಿದೆ. ಆರಂಭದಿಂದ ಈವರೆಗೆ ಸುಮಾರು200 ಕೋಟಿ ರೂ. ವೆಚ್ಚದ ಕಾಮಗಾರಿ ಪೂರ್ಣಗೊಂಡಿದೆ. ಈ ಪೈಕಿ 134 ಕೋಟಿ ರೂ. ಹಣವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆಉಳಿಕೆ ಹಣದ ಬಿಡುಗಡೆ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.
ಕಾಮಗಾರಿ ಪ್ರಕ್ರಿಯೆಗೆ ಇನ್ನಷ್ಟು ವೇಗನೀಡಿ ನಿಗದಿತ ಅವಧಿಗಿಂತ ಮುಂಚೆಯೇಕಾಮಗಾರಿ ಪೂರ್ಣಗೊಳಿಸುವಂತೆ ಹಾಗೂಕಾಮಗಾರಿ ಪ್ರಕ್ರಿಯೆಗೆ ಯಾವುದೇ ರೀತಿಯಸಮಸ್ಯೆಕಂಡುಬಂದರೆ ಕೂಡಲೇ ತಿಳಿಸುವಂತೆವೈದ್ಯಕೀಯ ಕಾಲೇಜು ನಿರ್ಮಾಣ ಯೋಜನೆಯ ವ್ಯವಸ್ಥಾಪಕರಿಗೆ ಸೂಚಿಸಿದರು.
ಕ್ರಮ ಕೈಗೊಳ್ಳಿ: ಕಾಮಗಾರಿ ನಿರ್ಮಾಣಯೋಜನೆಯ ವ್ಯವಸ್ಥಾಪಕರ ಮತ್ತು ಅಭಿಯಂತರರ ಸಮನ್ವಯತೆಯೊಂದಿಗೆ ವೈದ್ಯಕೀಯ ಕಾಲೇಜಿನ ಆವರಣದ ಅಂಚಿನಅಕ್ಕಪಕ್ಕದ ಖಾಲಿ ಜಾಗ ಗುರುತಿಸಿ 1000ಕ್ಕೂಹೆಚ್ಚು ಸಸಿಗಳನ್ನು ಒಂದೆರಡು ದಿನಗಳಲ್ಲಿನೆಡುವಂತೆ ಹಾಗೂ ಕಾಲೇಜು ಉದ್ಘಾಟನೆಯಾಗುವ ವೇಳೆಗೆ ಸುಂದರ ಹಸಿರುವನ ಬೆಳೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆಜಿಲ್ಲಾ ಸಾಮಾಜಿಕ ಅರಣ್ಯ ಅಧಿಕಾರಿಗೆಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಸಾಮಾಜಿಕ ಅರಣ್ಯಅಧಿಕಾರಿ ಶ್ರೀನಾಥ್, ವೈದ್ಯಕೀಯ ಕಾಲೇಜು ಕಾಮಗಾರಿ ಯೋಜನೆ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವಕುಮಾರ್,ಯೋಜನಾ ವ್ಯವಸ್ಥಾಪಕ ದೀಪಕ್, ಆನಂದ್‌ಬಾಳಗಿ, ಜೆ.ಇ. ರಾಮಚಂದ್ರಪ್ಪ, ಪಿಎಂಸಿಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಗೌರೀಶ್,ಆಡಳಿತಾಧಿಕಾರಿ ವೇಣುಗೋಪಾಲ್‌ಮತ್ತಿತರರು ಉಪಸ್ಥಿತರಿದ್ದರು.