Advertisement
ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಅಂಡೆ ಕುರುಬನದೊಡ್ಡಿಯಲ್ಲಿ ಸುಮಾರು 45 ವರ್ಷದ ಮದಗಜವನ್ನು 2016ರ ನವಂಬರ್ 10 ರಂದು ಸೆರೆ ಹಿಡಿದು ತಂದು ಪಳಗಿಸಿ ಹೇಳಿದಂತೆ ಕೇಳುವಂತೆ ಮಾಡುವಲ್ಲಿ ಯಶಕಂಡಿದ್ದಾರೆ.
Related Articles
Advertisement
ನಿತ್ಯದ ಆಹಾರ: ವಿವಿಧ ಜಾತಿಯ ಮರಗಳ ಸೊಪ್ಪು, ನೀರು, ಜೊತೆಗೆ ಹುರಳಿ, ಕುಸಬಲಕ್ಕಿ, ಬೆಲ್ಲ, ರುಚಿಗೆತಕ್ಕ ಉಪ್ಪು ಸೇರಿಸಿ ಉಂಡೆಕಟ್ಟಿ ನೀಡುವುದು, ಇದರೊಂದಿಗೆ ಭತ್ತವನ್ನು ಹುಲ್ಲಿನೊಂದಿಗೆ ಕುಸರೆ(ಉಂಡೆ) ಕಟ್ಟಿ ಮಿತವಾಗಿ ನೀಡಲಾಗುತ್ತದೆ. ಆದರೆ ಇದೇ ಮಾದರಿಯಲ್ಲೇ ಸಾಕಾನೆಗಳು ದೈನಂದಿನ ಆಹಾರದೊಂದಿಗೆ ಕವಾಡಿ ಮಾವುತರೊಂದಿಗೆ ಕಾಡಿನೊಳಕ್ಕೆ ತೆರಳುವುದರಿಂದ ಅಲ್ಲಿ ಮೇಯ್ದು ಮತ್ತಷ್ಟು ಸೊಪ್ಪನ್ನು ಹೊತ್ತು ತರುವುದರಿಂದ ಪ್ರತಿನಿತ್ಯ ಕನಿಷ್ಠ 300-400 ಕೆಜಿಯಷ್ಟು ವಿವಿಧ ಜಾತಿಯ ಸೊಪ್ಪನ್ನು ತಿನ್ನುತ್ತವೆ.
ಒಂದಕ್ಕೆ ಬಿಡುಗಡೆ, ಮತ್ತೂಂದಕ್ಕೆ ಕೈಲು(ಕ್ರಾಲ್)ವಾಸ: ಕಳೆದ ಆರು ತಿಂಗಳಹಿಂದೆ ಕ್ರಾಲ್‌ನೊಳಗಿದ್ದ ಮದಗಜ ಇದೀಗ ತನ್ನ ಕೋಪ-ತಾಪವನ್ನು ನಿಗ್ರಹಿಸಿಕೊಂಡಿದ್ದರಿಂದ ಕ್ರಾಲ್‌ನಿಂದ ಹೊರಕ್ಕೆ ಬಿಟ್ಟು ಕಾಲಿಗೆ ಸರಪಳಿ ಹಾಕಿ ಶಿಬಿರದಲ್ಲಿ ಮಾವುತ-ಕವಾಡಿಗಳು ಅಂಕುಶಹಿಡಿದು ಅತ್ತಿಂದಿತ್ತ ಓಡಾಡಿಸುತ್ತಿದ್ದರೆ, ಮತ್ತೂಂದು ಗಂಡಾನೆಯನ್ನು ಇನ್ನೂ ಕ್ರಾಲ್‌ನೊಳಗಿಟ್ಟು ಮಿತ ಆಹಾರ ನೀಡಿ ಹೇಳಿದಂತೆ ಕೇಳಲು ಮಾಡಲು ಶ್ರಮ ಹಾಕಲಾಗುತ್ತದೆ.
ತಿಂಗಳ ಮರಿ: ಇದೀಗ ಮತ್ತಿಗೋಡು ವಲಯದ ಕಂಠಾಪುರ ಸಾಕಾನೆ ಶಿಬಿರದಲ್ಲಿ ಅಂತರಸಂತೆ ವಲಯದಲ್ಲಿ ತಾಯಿಯಿಂದ ಬೇರ್ಪಟ್ಟು ಅರಣ್ಯದಂಚಿನಲ್ಲಿ ತಾಯಿಗಾಗಿ ಹಂಬಲಿಸುತ್ತಿದ್ದ ಎರಡು ತಿಂಗಳ ಹಾಲು ಕುಡಿಯುವ ಮರಿಯಾನೆಯಿಂದ ಹಿಡಿದು ವಿಶ್ವ ವಿಖ್ಯಾತ ದಸರಾ ಜಂಬೂಸವಾರಿಗೆ ತೆರಳುವ ಸಾಕಾನೆಗಳಿಗೂ ಇಲ್ಲಿಯೇ ಆಶ್ರಯ ನೀಡಲಾಗಿದೆ.
ಶಿಬಿರದಲ್ಲಿ ಒಟ್ಟು 36 ಆನೆಗಳಿವೆ. ಇದರೊಂದಿಗೆ ಇತ್ತಿಚೆಗೆ ತಂದ ಆನೆ (ರಾಮಯ್ಯ) ಹಾಗೂ ಕೊಳ್ಳೆಗಾಲದ ಬಳಿ ಸೆರೆಸಿಕ್ಕ ಆನೆ ಸೇರಿ ಆನೆಗಳ ಸಂಖ್ಯೆ 38ಕ್ಕೇರಲಿದ್ದು ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡಿವೆ.-ಕಿರಣ್‌ಕುಮಾರ್, ವಲಯ ಅರಣ್ಯಾಧಿಕಾರಿ ಮತ್ತಿಗೋಡು ವಲಯ. * ಸಂಪತ್‌ಕುಮಾರ್