Advertisement
ಸುತ್ತಮುತ್ತಲಿನ ಪ್ರದೇಶಗಳನ್ನು ಸೇರಿಸಿ ಲಂಡನ್ ಬರೋ ಆಫ್ ಸಟನ್ ಎಂದು ಕರೆಯಲಾಗುತ್ತದೆ. ಇದು North Downsನ ಕೆಳ ಇಳಿಜಾರು ಪ್ರದೇಶಗಳಲ್ಲಿದೆ ಮತ್ತು
Related Articles
Advertisement
ಸಟನ್ ಎಂಬ ಹೆಸರು ಹೇಗೆ ಬಂತು
ಈ ಕುರಿತು ಹುಡುಕಿದಾಗ ವಿಕಿಪೀಡಿಯಾದಲ್ಲಿ ಸಿಕ್ಕ ಒಂದಷ್ಟು ಮಾಹಿತಿ. 1086 ಡೋಮ್ಸ್ ಡೇ ಪುಸ್ತಕದಲ್ಲಿ ಸಟನ್ ಎಂದು ಸ್ಥಳದ ಹೆಸರನ್ನು ದಾಖಲಿಸಲಾಗಿದೆ. ಇದು ಹಳೆಯ ಇಂಗ್ಲಿಷ್ ‘South’
ಮತ್ತು ‘Tun’ ನಿಂದ ರೂಪುಗೊಂಡಿದೆ. ಇದರರ್ಥ South Farm’ ಎಂದು ತಿಳಿದು ಬರುತ್ತದೆ. ಈ ಪ್ರದೇಶದಲ್ಲಿ ಪುರಾತತ್ತÌ ಶಾಸ್ತ್ರದ ಸಂಶೋಧನೆಗಳು ಸಾವಿರಾರು ವರ್ಷಗಳ ಹಿಂದಿನವು. ರೋಮನ್ ಮಾದರಿಯ ಮನೆಗಳು ಬೆಡ್ಡಿಂಗ್ಟನ್‌ನಲ್ಲಿ ಕಾಣಿಸುತ್ತವೆ.
1901ರ ಹೊತ್ತಿಗೆ ಪಟ್ಟಣದ ಜನಸಂಖ್ಯೆಯು 17,223 ಕ್ಕೆ ತಲುಪಿದ್ದು, ಹೆಚ್ಚಿನ ವಸತಿಗಳನ್ನು ನಿರ್ಮಿಸಿ ಪಟ್ಟಣದ High Street (Town Centre) ಅಭಿವೃದ್ಧಿಪಡಿಸಲಾಯಿತು. ಸಟನ್ 1840ರಲ್ಲಿ ಮೆಟ್ರೋಪಾಲಿಟನ್ ಪೊಲೀಸ್ ಜಿಲ್ಲೆಯ ವ್ಯಾಪ್ತಿಯಲ್ಲಿ ಬಂದಿತು. ಹೌಸ್ ಓಫ್ ಕಾಮ ಚುನಾವಣೆಗಳಿಗಾಗಿ 1945ರಲ್ಲಿ ಸಟನ್ ಮತ್ತು ಚೀಮ್ ಕ್ಷೇತ್ರವೆಂದು ಪರಿಗಣಿಸಲಾಯಿತು. 2015ರಿಂದ ಇಲ್ಲಿ ಕನ್ಸರ್ವೇಟಿವ್ ಪಕ್ಷದ ಅಭ್ಯರ್ಥಿ ಸಂಸತ್ತಿನ ಸದಸ್ಯರಾಗಿದ್ದಾರೆ. ಇಲ್ಲಿಯ ಸ್ಥಳೀಯ ಕೌನ್ಸಿಲ್ ಅನ್ನು 1990ರಿಂದ ಲಿಬರಲ್ ಡೆಮಾಕ್ರಾಟ್ ಬಹುಮತದಿಂದ ನಡೆಸಲಾಗುತ್ತಿದೆ.
ಸಟನ್, ಸರ್ರೆ ಕೌಂಟಿಯ ಪ್ರಮುಖ ಸ್ಥಳವಾಗಿದ್ದು, ಮಧ್ಯ ಲಂಡನ್‌ನಿಂದ ತುಂಬಾ ಹತ್ತಿರವಿದ್ದು ಇಂಗ್ಲೆಂಡ್‌ನ ಬಹು ಮುಖ್ಯವಾದ ಪಟ್ಟಣವಾಗಿದೆ. ಅತ್ಯುತ್ತಮ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳಿಗೆ ಪ್ರಸಿದ್ಧಿಯಾಗಿರುವುದರಿಂದ ಮಧ್ಯಮ ವರ್ಗ ಹಾಗೂ ಮೇಲ್ಮಧ್ಯಮ ವರ್ಗದವರಿಗೆ ಪ್ರಮುಖ ವಾಸಸ್ಥಳವಾಗಿದೆ.
ಸಟನ್‌ನಲ್ಲಿ ಭಾರತೀಯ ಸಮುದಾಯ
ಸಟನ್ ಕೌನ್ಸಿಲ್‌ನ ಯೋಜಿತ ದತ್ತಾಂಶದ ಪ್ರಕಾರ ಸಟನ್‌ನಲ್ಲಿ ಭಾರತೀಯರ ಅಥವಾ ಭಾರತೀಯ ಮೂಲದವರ ಜನಸಂಖ್ಯೆ ಕೇವಲ 9,349 ಆಗಿದ್ದು. ಇದು ಶೇ. 4.4ರಷ್ಟಿದೆ. ಇವರಲ್ಲಿ 8,038 ಜನ (ಶೇ.4.1) ಹಿಂದೂಗಳು. ಸಟನ್‌ನಲ್ಲಿ ಯಾವುದೇ ಹಿಂದೂ ಮಂದಿರದ ಸ್ಥಾಪನೆಯಾಗಿಲ್ಲ. ಆದರೆ ಇದರ ಪಕ್ಕದಲ್ಲೇ ಇರುವ ಎಪ್ಸಮ್ ಎಂಬ ಪ್ರದೇಶದಲ್ಲಿ ಶ್ರೀರಾಜರಾಜೇಶ್ವರಿ ಅಮ್ಮನವರ ದೇಗುಲವಿದೆ. ಹಾಗೆಯೇ 5 ಮೈಲು ದೂರದಲ್ಲಿರುವ ವಿಂಬಲ್ಡನ್‌ನಲ್ಲೂ ಗಣಪತಿ ದೇವಸ್ಥಾನವಿದೆ. ಗಣಪತಿ ದೇವಸ್ಥಾನದಲ್ಲಿ ಕನ್ನಡಿಗ ಅರ್ಚಕರಿರುವುದರಿಂದ ನಮ್ಮ ಸುತ್ತಮುತ್ತಲಿನ ಕನ್ನಡಿಗರು ಭೇಟಿ ನೀಡುವುದು ಸಾಮಾನ್ಯವಾಗಿದೆ. ಸಟನ್ ನಲ್ಲಿ ಹಿಂದೂ ಸ್ವಯಂ ಸೇವಾ ಸಂಸ್ಥೆಯು ಇತ್ತೀಚಿಗೆ ಸಕ್ರಿಯವಾಗಿದ್ದು, ಬಾಲಗೋಕುಲಂ ಹಾಗೂ ಹಿಂದೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಸಟನ್‌ನಲ್ಲಿರುವ ಕನ್ನಡಿಗರು
ಸಟನ್‌ನಲ್ಲಿ ಅತ್ಯುತ್ತಮವಾದ ಗ್ರಾಮರ್ ಸ್ಕೂಲ್‌ಗಳು ಇರುವುದರಿಂದ ಸುಮಾರು 150 ಕ್ಕೂ ಹೆಚ್ಚು ಕನ್ನಡ ಪರಿವಾರ ಇಲ್ಲಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೆಲೆಸಿವೆ. ಕನ್ನಡ ಬಳಗ ಸಟನ್ ಎಂಬ ವಾಟ್ಸ್‌ಆ್ಯಪ್ ಗುಂಪು ಬಹುತೇಕವಾಗಿ ಇಲ್ಲಿನ ಎಲ್ಲ ಕನ್ನಡಿಗರನ್ನು ಒಟ್ಟು ಹಾಕಿ ವಿವಿಧ ಮಾಹಿತಿಗಳ ಸಹಾಯ ಹಸ್ತವನ್ನು ಸ್ನೇಹಪರ ಕನ್ನಡಿಗರಿಗೆ ನೀಡುತ್ತಿದೆ.
ಹಲವು ಕನ್ನಡಿಗರನ್ನು ಒಳಗೊಂಡಿರುವ ಸಟನ್ ಕನ್ನಡ ಬಳಗ ಕಳೆದ ಏಳೆಂಟು ವರ್ಷಗಳಿಂದ ಕನ್ನಡ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಸ್ವಯಂ ಪ್ರೇರಣೆಯಿಂದ ಶುರುವಾದ ಈ ಗುಂಪು ಅಧಿಕೃತವಾಗಿ ನೋಂದಣಿಯಾಗಿಲ್ಲವಾಗಿದ್ದರೂ ಮಕರ ಸಂಕ್ರಾಂತಿ, ಯುಗಾದಿ, ದೀಪಾವಳಿ, ರಾಜ್ಯೋತ್ಸವ ಹೀಗೆ ಹಲವಾರು ಹಬ್ಬಗಳನ್ನು ಸಾಮೂಹಿಕವಾಗಿ ಆಚರಿಸುವುದರ ಮೂಲಕ ಕನ್ನಡ ಸಮುದಾಯವನ್ನು ಒಟ್ಟುಗೂಡಿಸುವ ಕಾರ್ಯ ಮಾಡುತ್ತಿದೆ.
ಇನ್ನೊಂದು ಗಮನಾರ್ಹ ವಿಷಯವೇನೆಂದರೆ ಇಲ್ಲಿ ನಡೆಯುತ್ತಿರುವ ಕನ್ನಡ ಕಲಿ ಅಭಿಯಾನ. ಸಟನ್ ಕನ್ನಡ ಕಲಿ ಕೇಂದ್ರವು 2017 ಫೆಬ್ರವರಿ 25ರಂದು ಕನ್ನಡಿಗರು ಯುಕೆ ಆಶ್ರಯದಲ್ಲಿ ಆರಂಭವಾಯಿತು. ಆಗ ಸುಮಾರು 28 ಮಕ್ಕಳು ನೋಂದಾಯಿಸಿದ್ದರು. 30 ಪೋಷಕರು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಇಲ್ಲಿಯ ಸ್ಥಳೀಯ ರಾಜಕೀಯದಲ್ಲೂ ಕೂಡ ಸಟನ್ ಕನ್ನಡಿಗರು ಭಾಗವಹಿಸುತ್ತಿರುವುದು ಗಮನಾರ್ಹ. ಸಟನ್ ಕನ್ನಡಿಗನಾದ ಮುಕೇಶ್ ರಾವ್ 2018 ರಲ್ಲಿ ಇಲ್ಲಿಯ ಕೌನ್ಸಿಲ್ ಚುನಾವಣೆಗೆ ನಿಂತಿದ್ದು 2022ನೇ ಸಾಲಿಗೆ ಮತ್ತೆ ದಕ್ಷಿಣ ಸಟನ್ ವಾರ್ಡ್‌ನಿಂದ ಚುನಾವಣೆಗೆ ನಿಂತಿ¨ªಾರೆ.
ಒಟ್ಟಿನಲ್ಲಿ ಸಟನ್ ಪಟ್ಟಣ ಸಮಕಾಲೀನ ಕಲೆ, ಪರಂಪರೆ ಮತ್ತು ಇತಿಹಾಸದ ಪ್ರತೀಕವಾಗಿದ್ದು, ಲಂಡನ್ ಹೊರಪ್ರದೇಶದ ನಿವಾಸಿಗಳಿಗೆ ಉನ್ನತ ಜೀವನ ಮಟ್ಟವನ್ನು ಒದಗಿಸುತ್ತದೆ. ಕಡಿಮೆ ಅಪರಾಧದಿಂದ ಗುರುತಿಸಲಾದ ಹನ್ನೊಂದು ಪ್ರಮುಖ ಮಹಾನಗರ ಕೇಂದ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಹೀಗಾಗಿ ಲಂಡನ್ ಪ್ರವಾಸದ ಯೋಜನೆ ಇದ್ದರೆ ಖಂಡಿತ ಸಟನ್‌ಗೆ ಭೇಟಿ ನೀಡಬಹುದು.
ಗಣಪತಿ ಭಟ್, ಸಟನ್