Advertisement
ಎರಡು ದಿನಗಳಲ್ಲಿ ಮೊದಲ ದಿನ ಸಿದ್ದು ಹಾಗೂ ಅವರ ಸರಕಾರವನ್ನು ಮತ್ತು ಎರಡನೇಯ ದಿನ ದಿ| ಧರ್ಮಸಿಂಗ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ಟೀಕೆಗೆ ಗುರಿಯಾಗಿಸಿದ ಅಮಿತ್ ಶಾ ಅವರು ಕಾರ್ಯಕರ್ತರಿಗೆ, ಮುಖಂಡರಿಗೆ ಹಾಗೂ ಬಿಜೆಪಿ ಅಭಿಮಾನಿಗಳಿಗೆ ಏನನ್ನು ಹೇಳೆದೆ ಮೌನವಾಗಿ ಇದ್ದದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ವರಸೆ ಬದಲಿಸಿದರು. ರವಿವಾರ ಉದ್ಯಮಿಗಳ ಸಂವಾದದಲ್ಲಿ ತಡವಾಗಿದೆ ಎಂದು ಪ್ರಶ್ನೆಗಳನ್ನು ಅರ್ಧಕ್ಕೆ ತುಂಡರಿಸಿದರು. ಎಲ್ಲದಕ್ಕೂ ವಿವರವಾಗಿ ಬರೆದು ನನಗೆ ಮೇಲ್ ಮಾಡಿ ಎನ್ನುತ್ತಲೇ ಸಾಗಿದರು. ಉದ್ಯಮಿಗಳು ಮನಸ್ಸಿನಲ್ಲಿರುವ ಜಿಎಸ್‌ಟಿ, ಬೆಲೆ ಏರಿಕೆ, ತೊಗರಿ ವಲಯದ ಸಮಸ್ಯೆ, ರೈತರ ಸಮಸ್ಯೆ, ವ್ಯಾಪಾರಿಗಳಿಗೆ ಸಾಲದ ಹಾಗೂ ಬಡ್ಡಿಯ ಕುರಿತು ಏನನ್ನು ಹೇಳಲೇ ಇಲ್ಲ. ಅಪಾರ ನಿರೀಕ್ಷೆ ಇಟ್ಟು ಬಂದಿದ್ದ ಉದ್ಯಮಿಗಳು, ಬುದ್ಧಿ ಜೀವಿಗಳು ಕೇವಲ ಚಪ್ಪಾಳೆ ಹೊಡೆದು ಸುಮ್ಮನೆ ಹೊರ ನಡೆದರು. ಎಡರನೇ ದಿನ ಸೋಮವಾರವೂ ಮಠಗಳಿಗೆ ಭೇಟಿ ಮಾಡಿದ ಅವರು, ಗೋಲ್ಡ್ ಹಬ್‌ನಲ್ಲಿ ಏರ್ಪಡಿಸಿದ್ದ ಯಾದಗಿರಿ, ಗುಲಬರ್ಗಾ ಜಿಲ್ಲೆಯ ಹಿಂದುಳಿದ ವರ್ಗಗಳ ಮುಖಂಡರ ಸಂವಾದ ಕಾರ್ಯಕ್ರಮವನ್ನು ತುಂಡರಿಸಿದರು. ತಮ್ಮ ಮಾತಿಗೆ ಸೀಮಿತ ಮಾಡಿ ಜನರ ಪ್ರಶ್ನೆಗಳ ಮುದ್ರಿತ ಪ್ರತಿ ನನಗೆ ಕೊಡಿ ಉತ್ತರಿಸುತ್ತೇನೆ ಎಂದು ಹೇಳಿದರು.
Related Articles
Advertisement
ದೇಹಭಾಷ್ಯೆಯಲ್ಲೂ ಲಗುಬಗೆ ಇತ್ತೇ ಹೊರತು. ತಂತ್ರಗಳು ಕಾಣಲ್ಲಿಲ್ಲ.. ಹೈಕ ಭಾಗದ ಜನರನ್ನು, ದಲಿತರನ್ನು ಹಾಗೂ ಆಸ್ಪ್ರುಶ್ಯರನ್ನುವಿಶ್ವಾಸಕ್ಕೆ ತೆಗೆದುಕೊಳ್ಳಲು ಪ್ರಯತ್ನ ಮಾಡಿದರಾದರೂ ಅವರ ಸಮಸ್ಯೆಗಳನ್ನು ಹತ್ತಿರದಿಂದ ಕೇಳಲಿಲ್ಲ. ಭಾವಿ ಮುಖ್ಯಮಂತ್ರಿ
ಯಡಿಯೂರಪ್ಪ ಎನ್ನುವ ಒಂದು ಮಾತು ಮಾತ್ರವೇ ಹೇಳಿದ ಅವರು, ಪಕ್ಷದ ತಂತ್ರಗಳು ಪ್ರಖರವಾಗಿರಲಿಲ್ಲ ಎಂದೇ ಹೇಳಬೇಕಾಗಿದೆ. ಆದರೂ ಅವರ ಪ್ರವಾಸ ಬಿಜೆಪಿಯಲ್ಲಿ ಚೈತನ್ಯವಂತೂ ತಂದಿದೆ. ಕಾರ್ಯಕರ್ತರಿಗೆ ಹಾಗೂ ಪಕ್ಷದ ಅಭಿಮಾನಿಗಳಿಗೆ ಟಾನಿಕ್
ಆಗಿದೆ. ಶಾ ಅವರ ಒಂದು ಮಾತು ಸಿದ್ದು ಸರಕಾರ ಕಿತ್ತೂಗೆಯಿರಿ ಎನ್ನುವುದು ಜನರನ್ನು ಕಾಡಿದ್ದು ಸುಳ್ಳಲ್ಲ.. ಆದರೆ, ಒಬಿಸಿ ಸಂವಾದವನ್ನು ಮೊಟಕುಗೊಳಿಸಿದ್ದು ಮಾತ್ರ ಎರಡು ಜಿಲ್ಲೆಗಳ ಮುಖಂಡರಿಗೆ ತುಂಬಾ ನೋವು ತಂದಿದೆ. 20ಕ್ಕೂ ಹೆಚ್ಚು ಸಮುದಾಯಗಳ ಮುಖಂಡರಿಗೆ ಪ್ರಶ್ನೆ ಕೇಳುವ ಅವಕಾಶ ಕಲ್ಪಿಸಲಾಗಿತ್ತು. ತಮ್ಮ ಸಮುದಾಯಗಳ ನೋವುಗಳನ್ನು ಹೇಳಿಕೊಳ್ಳುವವರಿದ್ದರು. ಆದರೆ, ಅದು ಆಗಲೇ ಇಲ್ಲ. ಹಿಂದೂಳಿದ ವರ್ಗಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಕೇಳುತ್ತಾರೆ ಎನ್ನುವ ಕಾರಣಕ್ಕೆ ಮೇಲ್ವರ್ಗದ ಕೆಲವು ನಾಯಕರು ಸಂವಾದಕ್ಕೆ ಕೊಕ್ಕೆ ಹಾಕಿಸಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ. ಸೂರ್ಯಕಾಂತ ಎಂ.ಜಮಾದಾರ