Advertisement

ಸೌಲಭ್ಯದ ಕೊರತೆಯಿಂದ ಓದುಗರ ಸಂಖ್ಯೆ ಇಳಿಮುಖ

11:27 AM Nov 18, 2018 | |

ಹುಣಸೂರು: ಸರಕಾರ ಮತ್ತು ಜನಪ್ರತಿನಿಧಿಗಳು ಗ್ರಂಥಾಲಯಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸಲು ವಿಫಲವಾಗಿರುವುದರಿಂದಲೇ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ. ಎಲ್ಲಿ ಸೇವೆ ಸಿಗುತ್ತದೋ ಅಲ್ಲಿ ಜನ ದುಂಬಾಲು ಬೀಳುತ್ತಾರೆಂದು ನಗರದ ಮಹಿಳಾ ಕಾಲೇಜು ಗ್ರಂಥಾಧಿಕಾರಿ ಎನ್‌. ಕರುಣಾಕರ್‌ ಅಭಿಪ್ರಾಯಪಟ್ಟರು.

Advertisement

ನಗರದ ಸಾರ್ವಜನಿಕ ಗ್ರಂಥಾಲದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದ ಅವರು ಅಮೇರಿಕಾದಂತಹ ಮುಂದುವರಿದ ದೇಶದಲ್ಲಿ ಗ್ರಂಥಾಲಯಗಳಲ್ಲಿ ರಸಗೊಬ್ಬರ ಮಾರಾಟ ಮಾಡುತ್ತಿದ್ದಾರೆ,

ಆದರೆ ನಮ್ಮಲ್ಲಿ ಇನ್ನೂ ಸಹ ನಾಲ್ಕು ಕುರ್ಚಿ, ಒಂದು ಮೇಜು, ಹತ್ತಾರು ಪುಸ್ತಕ-ದಿನಪತ್ರಿಕೆ ಓದುವುದಕ್ಕಷ್ಟೆ ಸೀಮಿತವಾಗಿರುವ ದಿನದಲ್ಲಿ ಓದುಗರರನ್ನು ಇತ್ತ ಸೆಳೆಯಲು, ಹೊಸ ಓದುಗನನ್ನು ಸೃಷ್ಟಿಸಲು, ಮೂಲಭೂತ ಸೌಲಭ್ಯಗಳ ಕ್ರಿಯಾಯೋಜನೆ ರೂಪಿಸುವ ಸಲುವಾಗಿ ಎಲ್ಲೆಡೆ ಗ್ರಂಥಾಲಯ ಸಪ್ತಾಹ ಆಚರಿಸಲಾಗುತ್ತಿದೆ,

ಓದುಗರು ಗ್ರಂಥಾಲಯವನ್ನೇ ಆಸ್ತಿ ಎಂದುಕೊಂಡಲ್ಲಿ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯ, ಇಲ್ಲಿನ ಉಪನಿರ್ದೇಶಕರ ಒತ್ತಾಸೆಯಿಂದಾಗಿ ಕುಡಿಯುವನೀರು, ಶೌಚಾಲಯ, ಸೋಲಾರ್‌ ಸೇರಿದಂತೆ ಸಾಕಷ್ಟು ಸೌಲಭ್ಯ ದೊರಕಿಸಿಕೊಟ್ಟಿದ್ದಾರೆ. ಕಂಪೂಟರ್‌ ಸೌಲಭ್ಯವನ್ನು ಕಲ್ಪಿಸಿ, ಇ-ಲೈಬ್ರಿರಿ ಆರಂಭಿಸಿ ಕಾಲೇಜು ವಿದ್ಯಾರ್ಥಿಗಳ ನೆರವಿಗೆ ಬರಬೇಕೆಂದರು.

ಕಾರ್ಯಕ್ರಮ ಉಧಾ^ಟಿಸಿದ ಜಿಲ್ಲಾಗ್ರಂಥಾಲಯ ಉಪನಿರ್ದೇಶಕ ಮಂಜುನಾಥ್‌ ಮಾತನಾಡಿ ಸಪ್ತಾಹದ ಅಂಗವಾಗಿ ಜಿಲ್ಲಾಧ್ಯಂತ ಎಲ್ಲ ಗ್ರಂಥಾಲಯಗಳಲ್ಲೂ ಕ್ರಿಯಾಯೋಜನೆ ರೂಪಿಸುವ, ಪುಸ್ತಕ ಪ್ರೇಮಿಗಳನ್ನು ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ, ಸ್ವತಃ ಲೇಖಕರಾಗಿದ್ದ ಮಾಜಿ ಪ್ರಧಾನಿ ಜವಹರಲಾಲ್‌ನೆಹರು ಜನ್ಮದಿನ,

Advertisement

ಜನಸಾಮಾನ್ಯರಿಗೆ ಪುಸ್ತಕಗಳು ಕೈಗೆಟಕುವಂತಾಗಬೇಕೆಂಬ ದೃಷ್ಟಿಯಿಂದ ನ್ಯಾಷನಲ್‌ ಬುಕ್‌ ಟ್ರಸ್ಟ್‌ ಆಫ್‌ ಇಂಡಿಯಾ ಹುಟ್ಟುಹಾಕಿದರು, ನ.14ರ ಅವರ ಜನ್ಮ ದಿನವನ್ನು ಮೊದಲು ಪುಸ್ತಕದಿನವನ್ನಾಗಿ ಆಚರಿಸಲಾಗುತ್ತಿತ್ತು, ನಂತರದಲ್ಲಿ ಪುಸ್ತಕ ಸಪ್ತಾಹ, ಗ್ರಂಥಾಲಯ ವಿಜ್ಞಾನ ಪ್ರವರ್ಧಮಾನಕ್ಕೆ ಬಂದನಂತರ ರಾಷ್ಟ್ರಾದ್ಯಂತ ನ.14 ರಿಂದ 21ರವರೆಗೆ ಗ್ರಂಥಾಲಯ ಸಪ್ತಾಹವನ್ನಾಗಿ ಆಚರಿಸಲಾಗುತ್ತದೆ ಎಂದರು.

ಇಲ್ಲಿನ ಗ್ರಂಥಾಲಯದಲ್ಲಿ 3300ಕ್ಕೂ ಹೆಚ್ಚು ಓದುಗರರು ನೊಂದಾಯಿಸಿಕೊಂಡಿದ್ದು, ನಗರೋತ್ಥಾನ ಯೋಜನೆಯಡಿ ಮೇಲತಸ್ಥಿನ ಕಟ್ಟಡಕ್ಕೆ 20 ಲಕ್ಷರೂ ಅನುದಾನ ದೊರೆತಿದ್ದು, ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿದೆ. ಸಾರ್ವಜನಿಕರಿಂದ ಸುಮಾರು 29 ಲಕ್ಷರೂ ಗ್ರಂಥಾಲಯ ಕರ ವಸೂಲಿ ಮಾಡಲಾಗಿದೆ ಎಂದರು.

ಹೊಸದಾಗಿ ಸದಸ್ಯತ್ವ ಪಡೆದ ನಗರಸಭೆ ಅಧ್ಯಕ್ಷ ಎಚ್‌.ವೈ.ಮಹದೇವ್‌ ಕಾರ್ಯಕ್ರಮ ಉಧಾ^ಟಿಸಿ ಮಾತನಾಡಿ ಇಲ್ಲಿಗೆ ಸಾಕಷ್ಟು ಓದುಗರು ಬರುತ್ತಿರುವ ಬಗ್ಗೆ ಮಾಹಿತಿ ಇದ್ದು, ಕುಳಿತು ಓದಲು ವಿಶಾಲವಾದ ಕೊಠಡಿ ವ್ಯವಸ್ಥೆ ಆಗಬೇಕಿದೆ, ಹಾಲಿ ನಿರ್ಮಿಸಲುದ್ದೇಶಿಸಿರುವ ಮೇಲಂತಸ್ತಿನ ಕಟ್ಟಡವನ್ನು ಸಂಬಂಧಿಸಿದವರೊಂದಿಗೆ ಚರ್ಚಿಸಿ ಮಾರ್ಪಾಡುಗೊಳಿಸಿ ವಿಶಾಲ ಕೊಠಡಿ ನಿರ್ಮಿಸಿಕೊಡುವುದಾಗಿ ತಿಳಿಸಿ, ಗ್ರಂಥಾಲಯಕ್ಕೆ ನಗರ ಸಭೆವತಿಯಿಂದ ನೀಡಬೇಕಿರುವ ಶೇ.6 ಅನುದಾನ ಕೊಡಿಸುವ ಭರವಸೆ ನೀಡಿದರು.

ಈ ವೇಳೆ ಓದುಗರರಿಗೆ ಪುಸ್ತಕ ಬಹುಮಾನ ನೀಡಿ ಗೌರವಿಸಲಾಯಿತು, ಹೊಸ ಸದಸ್ಯತ್ವ ಪಡೆದವರಿಗೆ ಕಾರ್ಡ್‌ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ಯೋಗಾನಂದ್‌ ಮಾತನಾಡಿದರು, ಜಿಲ್ಲಾ ಗ್ರಂಥಾಲಯದ ಚೈತ್ರಾ, ಗ್ರಂಥಪಾಲಕ ಎ.ಎಂ.ಸತೀಶ್‌, ಮುಖಂಡ ಕಣಗಾಲುರಾಮೇಗೌಡ, ಹಳೇಬೀಡುರಮೇಶ್‌ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next