ಕಾಸರಗೋಡು: ಕಸಬಾ ಬೀಚಿನ ಉಪಯೋಗ ಶೂನ್ಯವಾದ 26 ಶೌಚಾಲಯಗಳನ್ನು ಎಡನೀರು ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಿದ್ಯಾರ್ಥಿಗಳ ನೇತೃತ್ವದಲ್ಲಿ ದುರಸ್ತಿ ಕೆಲಸ ಪೂರ್ತಿಗೊಳಿಸಿ ಉಪಯೋಗಪ್ರದಗೊಳಿಸಿದರು.
ಮೂರು ವರ್ಷಗಳ ಹಿಂದೆ 20 ಲಕ್ಷ ರೂಪಾಯಿ ಖರ್ಚು ಮಾಡಿ ಕರಾವಳಿ ಅಭಿವೃದ್ಧಿ ನಿಗಮ ನೇತೃತ್ವದಲ್ಲಿ ನಿರ್ಮಿಸಿ ನಗರ ಸಭೆಗೆ ವಹಿಸಿಕೊಡಲಾಯಿತು. ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ಪ್ರತ್ಯೇಕವಾಗಿ 12 ಶೌಚಾಲಯಗಳನ್ನು ನಿರ್ಮಿಸಲಾಗಿತ್ತು.
ಎರಡು ಶೌಚಾಲಯಗಳು ಸಂಪೂರ್ಣವಾಗಿ ಕುಸಿದು, 2 ವರ್ಷಗಳ ಕಾಲ ಉಪಯೋಗ ಶೂನ್ಯವಾಗಿತ್ತು. ಮಾಜಿ ವಾರ್ಡ್ ಕೌನ್ಸಿಲರ್ ಜಿ.ನಾರಾಯಣನ್, ಇತ್ತೀಚೆಗೆ ನಿಧನ ಹೊಂದಿದ 36 ನೇ ವಾರ್ಡ್ ಕೌನ್ಸಿಲರ್ ಪ್ರೇಮಾ, 37 ನೇ ವಾರ್ಡ್ ಕೌನ್ಸಿಲರ್ ಉಮಾ ಉಣ್ಣಿಕೃಷ್ಣನ್, ನಗರಸಭಾ ಅಭಿವೃದ್ಧಿ ಸಮಿತಿ ಸದಸ್ಯ ಎಂ.ಆರ್. ಶರತ್, ಕಸಬಾ ನಿವಾಸಿಗಳು ಇವರೆಲ್ಲರ ಸಹಾಯದೊಂದಿಗೆ 2 ತಿಂಗಳ ಪ್ರಯತ್ನದೊಂದಿಗೆ ಪುನರ್ನಿರ್ಮಿಸಲಾಯಿತು. ಕೆಟ್ಟು ಹೋದ ಪಂಪ್ ಸರಿಪಡಿಸಲಾಯಿತು. ಸೆಪ್ಟಿಕ್ ಟ್ಯಾಂಕ್‌ಗೆ ಇರುವ ಪೈಪುಗಳನ್ನು ಬದಲಾಯಿಸಲಾಯಿತು. ತುಂಡಾದ ಪೈಪುಗಳು, ಟ್ಯಾಪುಗಳು, ತುಕ್ಕು ಹಿಡಿದ ಕ್ಲಾಂಪ್ಸ್‌ಗಳು ಮೊದಲಾದವುಗಳನ್ನು ಪುನಃಕ್ರಮೀಕರಣಗೊಳಿಸಲಾಯಿತು.ಪರಿಸರದ ನಿವಾಸಿಗಳು, ಕಸಬಾ ಸರಕಾರಿ ಫಿಶರೀಸ್ ಸ್ಕೂಲ್ ಸದಸ್ಯರು ಜೊತೆಯಾಗಿ ಸೇರಿದ ಸಭೆಯಲ್ಲಿ ಎನ್‌ಎಸ್‌ಎಸ್ ಯೂನಿಟ್ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.ಶೌಚಾಲಯಗಳಿಗೆ ಉಪಯೋಗಿಸಲು ಅಗತ್ಯವಾದ ಬಕೆಟ್ಟುಗಳನ್ನು ವಿದ್ಯಾರ್ಥಿಗಳು ಕುರುಂಬ ಭಗವತಿ ಕ್ಷೇತ್ರದ ಕಾರ್ಯದರ್ಶಿ ಕೆ.ವಿಜೇಶ್ ಅವರಿಗೆ ಹಸ್ತಾಂತರಿಸಿದರು. ನಗರಸಭಾ ಅಭಿವೃದ್ಧಿ ಸಮಿತಿ ಸದಸ್ಯ ಹಾಗೂ ಫಿಶರೀಸ್ ಶಾಲೆಯ ಪಿಟಿಎ ಅಧ್ಯಕ್ಷ ಎಂ.ಆರ್.ಶರತ್ ಅಧ್ಯಕ್ಷತೆ ವಹಿಸಿದರು.
ಎನ್.ಎಸ್.ಎಸ್. ಲೀಡರ್ ಅಮಲ್, ಯೋಜನಾಧಿಕಾರಿ ಐ.ಕೆ. ವಾಸುದೇವನ್ ಮಾತನಾಡಿದರು.