Advertisement

‘ರಸ’ ಸಿದ್ಧಾಂತ’ಮತ್ತು ‘ಕಥಾರ್ಸಿಸ್’ ಪರಿಕಲ್ಪನೆಗಳು ಒಂದಕ್ಕೊಂದು ಪೂರಕ: ಪ್ರೊ.ಚೂಡಾಮಣಿ

04:44 PM Dec 16, 2021 | Team Udayavani |

ಮಣಿಪಾಲ : ಭಾರತದ ‘ರಸ’ ಸಿದ್ಧಾಂತ ಮತ್ತು ಪಶ್ಚಿಮದ ‘ಕಥಾರ್ಸಿಸ್’ ಪರಿಕಲ್ಪನೆಗಳು ಒಂದಕ್ಕೊಂದು ಪೂರಕವಾಗಿ ಸೌಂದರ್ಯದ ಸಿದ್ಧಾಂತವನ್ನು ಪೂರ್ಣಗೊಳಿಸುತ್ತವೆ ಎಂದು ಖ್ಯಾತ ಕಲಾ ಇತಿಹಾಸಕಾರರಾದ ಪ್ರೊ.ಚೂಡಾಮಣಿ ನಂದಗೋಪಾಲ್ ನುಡಿದರು.

Advertisement

ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಆಯೋಜಿಸಿದ್ದ ಆನ್‌ಲೈನ್ ಉಪನ್ಯಾಸದಲ್ಲಿ ಅವರು ‘ಎಸ್ಥೆಟಿಕ್ಸ್- ಪೂರ್ವ ಮತ್ತು ಪಶ್ಚಿಮ’ ವಿಷಯದ ಕುರಿತು ಅವರು ಮಾತನಾಡುತ್ತಿದ್ದರು.

‘ರಸ’ (ಸೌಂದರ್ಯಾನುಭೂತಿ) ಸೌಂದರ್ಯಶಾಸ್ತ್ರಕ್ಕೆ ಭಾರತೀಯರ ಅನನ್ಯ ಕೊಡುಗೆಯಾಗಿದೆ ಮತ್ತು ಪಾಶ್ಚಿಮಾತ್ಯ ಸೌಂದರ್ಯಶಾಸ್ತ್ರದಲ್ಲಿ ಅರಿಸ್ಟಾಟಲ್ ಕಲ್ಪನೆಯ ‘ಕಥಾರ್ಸಿಸ್’’ ಪ್ರಮುಖ ಪರಿಕಲ್ಪನೆಯಲ್ಲೊಂದಾಗಿ ಸೌಂದರ್ಯಶಾಸ್ತ್ರವನ್ನು ಪೂರ್ಣಗೊಳಿಸುತ್ತವೆ ಎಂದು ಅವರು ಹೇಳಿದರು.

ವಿದುಷಿ ಭ್ರಮರಿ ಶಿವಪ್ರಕಾಶ್ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ಆಕರ್ಷಿಕ ಸಿಂಗ್ ಕಾರ್ಯಕ್ರಮವನ್ನು ನಿರೂಪಿಸಿದರು. GCPAS ಮುಖ್ಯಸ್ಥ ಪ್ರೊ. ವರದೇಶ್ ಹಿರೇಗಂಗೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next