Advertisement

ನೋಟು ಅಮಾನ್ಯದಿಂದ ಉದ್ಯಮಕ್ಕೆ ಸಂಕಷ್ಟ

01:20 PM Sep 18, 2017 | |

ಹುಬ್ಬಳ್ಳಿ: ನೋಟು ಅಮಾನ್ಯಿಕರಣ ಉದ್ಯಮಗಳ ಸಂಕಷ್ಟಕ್ಕೆ ಕಾರಣವಾಗಿದ್ದು, ಇಂಜಿನೀಯರಿಂಗ್‌ ಕ್ಷೇತ್ರ ಇದಕ್ಕೆ ಹೊರತಾಗಿಲ್ಲ ಎಂದು ಸಚಿವ ವಿನಯ ಕುಲಕರ್ಣಿ ಹೇಳಿದರು. ಅಸೋಸಿಯೇಶನ್‌ ಆಫ್ ಕನ್ಸಲ್ಟಿಂಗ್‌ ಸಿವಿಲ್‌ ಇಂಜಿನೀಯರ್ ವತಿಯಿಂದ ನಗರದಲ್ಲಿ ಆಯೋಜಿಸಿದ್ದ ಇಂಜಿನೀಯರ್ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. 

Advertisement

ನೂರಾರು ಕೋಟಿ ಖರ್ಚು ಮಾಡಿ ನಿರ್ಮಿಸಿದ ಕಟ್ಟಡಗಳು ಮಾರಾಟವಾಗದೆ ಬಿಲ್ಡರ್‌ಗಳು ಅತಂತ್ರ ಸ್ಥಿತಿ ಅನುಭವಿಸುವಂತಾಗಿದೆ. ವಿವಿಧ ಕಂಪನಿಗಳ ಉತ್ಪನ್ನಗಳ ಮಾರಾಟ ಹೆಚ್ಚಿನ ಪ್ರಮಾಣದಲ್ಲಿ ಕುಂಠಿತವಾಗಿದೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಐವರು ಹಿರಿಯ ಇಂಜಿನೀಯರ್‌ಗಳನ್ನು ಸನ್ಮಾನಿಸಲಾಯಿತು. 

ಎಲ್‌. ಶಶಿಕುಮಾರ, ಬಸವರಾಜ ಹಿರೇಮಠ, ಡಾ| ಶರದ್‌ ಜೋಶಿ, ಉದ್ಯಮಿ ಜಿ.ಸಿ.ಪಾಟೀಲ, ಎಸಿಸಿಇ ಅಧ್ಯಕ್ಷ ಅಶೋಕ ಬಸವಾ, ಸುರೇಶ ಕಿರೆಸೂರ, ಹರೀಶ ಚವ್ಹಾಣ, ಇಂಜಿನೀಯರ್‌ ಗಳಾದ ಡಿ.ಪಿ.ಪಾಟೀಲ, ಶ್ರೀಕಾಂತ ಪಾಟೀಲ, ಎಂ.ಎ.ಕಾತೇವಾಡಿ, ಎಸ್‌.ಎ.ಜೋಶಿ, ಬಸವರಾಜ ರಟಗಾಳ, ಎನ್‌.ಎ. ಪಾಠಕ, ಎನ್‌.  ಎಸ್‌. ನಾಡಿಗೇರ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next