Advertisement

ವೇದಾಂತ ‘ಸ್ಟೆರ್ಲೈಟ್ ಘಟಕ ಆರಂಭಕ್ಕೆ ಎನ್‌ಜಿಟಿ ಆದೇಶ

06:25 AM Dec 16, 2018 | |

ಹೊಸದಿಲ್ಲಿ: ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿರುವ  ವೇದಾಂತ ಸಂಸ್ಥೆಯ ‘ಸ್ಟೆರ್ಲೈಟ್ ತಾಮ್ರ ಉತ್ಪಾದನಾ ಘಟಕ ಪುನಾರಂಭಕ್ಕೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ) ಆದೇಶ ನೀಡಿದೆ. 

Advertisement

ಘಟಕವನ್ನು ಮುಚ್ಚುವಂತೆ ತಮಿಳುನಾಡು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದ್ದ ಆದೇಶವನ್ನು ಎನ್‌ಜಿಟಿ ಶನಿವಾರ ರದ್ದು ಮಾಡಿದೆ. ಎನ್‌ಜಿಟಿ ಆದೇಶಕ್ಕೆ ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಅದರ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದಾಗಿಯೂ ಹೇಳಿದ್ದಾರೆ. 

ಸ್ಟೆರ್ಲೈಟ್ ಘಟಕಕ್ಕೆ ಸಂಬಂಧಿಸಿ ಮೇನಲ್ಲಿ ನಡೆದಿದ್ದ ಹಿಂಸಾಚಾರದಲ್ಲಿ 13 ಮಂದಿ ಅಸುನೀಗಿದ ಬಳಿಕ ಈ ಘಟಕ ಮುಚ್ಚಲು ಆದೇಶ ನೀಡಲಾಗಿತ್ತು. 100 ಕೋಟಿ ರೂ. ಮೊತ್ತವನ್ನು ಮೂರು ವರ್ಷಗಳ ಕಾಲ ಸ್ಥಳೀಯ ಪರಿಸರ ಅಭಿವೃದ್ಧಿಗೆ ವಿನಿಯೋಗಿಸುವಂತೆಯೂ ‘ಸ್ಟೆರ್ಲೈಟ್ ಗೆ ಎನ್‌ಜಿಟಿ ಸೂಚಿಸಿದೆ. ಇದಕ್ಕಿಂತ ಮೊದಲು ಸ್ಟಲೆೈìಟ್‌ ಕಂಪನಿಗೆ ಅಹವಾಲು ಸಲ್ಲಿಸಲು ಯಾವುದೇ ಅವಕಾಶ ನೀಡಿರಲಿಲ್ಲ ಎಂದು ಎನ್‌ಜಿಟಿ ನೇಮಿಸಿದ್ದ ಸಮಿತಿ ವರದಿ ಸಲ್ಲಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next