Advertisement

ಹೊಸ ದಾಖಲೆ ಬರೆದ ನಿಫ್ಟಿ ಸೂಚ್ಯಂಕ

08:35 AM Sep 19, 2017 | Team Udayavani |

ಮುಂಬೈ: ನಿಫ್ಟಿ ಸೂಚ್ಯಂಕ ಸೋಮವಾರ ಹೊಸ ದಾಖಲೆ ಬರೆದಿದೆ. ದಿನದ ವಹಿವಾಟು ಮುಕ್ತಾಯವಾಗುತ್ತಿದ್ದಂತೆ 10,153 ಅಂಕಗಳಿಗೆ ಮುಕ್ತಾಯವಾಗಿದೆ. ಅಂದರೆ ಒಟ್ಟು 67.70ರಷ್ಟು ಹೆಚ್ಚಳವಾಗಿದೆ. ಈ ಮೂಲಕ ಆ.1ರಂದು 10,114.65ಕ್ಕೆ ಏರಿದ್ದ ದಾಖಲೆಯನ್ನು ಮುರಿದಿದೆ. ಇಷ್ಟು ಮಾತ್ರವಲ್ಲ ಆ.2ರಂದು ನಡೆದಿದ್ದ ಮಧ್ಯಂತರ ಟ್ರೇಡಿಂಗ್‌ ಸೂಚ್ಯಂಕ 10,137.85ನ್ನೂ ಮೀರಿಸಿದೆ. ಬಾಂಬೆ ಷೇರು ಪೇಟೆ ಸೂಚ್ಯಂಕ ಕೂಡ 151.15 ಅಂಕಗಳಷ್ಟು ಹೆಚ್ಚಳವಾಗಿ 32,433.76ರಲ್ಲಿ ಮುಕ್ತಾಯವಾಗಿದೆ. ದಿನದ ವಹಿವಾಟಿನ ಒಂದು ಹಂತದಲ್ಲಿ 32,508.06ರ ವರೆಗೆ ಸೂಚ್ಯಂಕ ತಲುಪಿತ್ತು. ಆ.2ರ ಬಳಿಕ ಇದು ಗರಿಷ್ಠ ಏರಿಕೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಸಾವಧಾನದ ವಹಿವಾಟು ಪ್ರಭಾವ ಬಾಂಬೆ ಮತ್ತು ನಿಫ್ಟಿ ಮೇಲೂ ಬೀರಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next